Advertisement

ಅತ್ಯಾಚಾರಿ ಶಿಕ್ಷಕನಿಗೆ ಮಾ.2ರಂದು ಗಲ್ಲು?

12:30 AM Feb 05, 2019 | |

ಜಬಲ್ಪುರ (ಮಧ್ಯಪ್ರದೇಶ): ಸಾತ್ನಾ ಜಿಲ್ಲೆಯ ಪಾರಸ್ಮಾನಿಯ ಎಂಬ ಹಳ್ಳಿಯಲ್ಲಿ 4 ವರ್ಷಗಳ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ ಮಹೇಂದ್ರ ಸಿಂಗ್‌ ಗೊಂಡ್‌ (28) ಎಂಬಾತನಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಎತ್ತಿಹಿಡಿದಿದೆೆ. ಜಬಲ್ಪುರ ಕೇಂದ್ರೀಯ ಕಾರಾಗೃಹದಲ್ಲಿ ಮಾ. 2ರಂದು ಈತನನ್ನು ಗಲ್ಲಿಗೇರಿಸಲು ಆದೇಶಿಸಲಾಗಿದೆ. 

Advertisement

ಇದು ಜಾರಿಗೊಂಡರೆ, 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಇತ್ತೀಚೆಗೆ ರೂಪಿಸಲಾಗಿರುವ ಕಾನೂನಿನಡಿ ಶಿಕ್ಷೆಗೆ ಗುರಿಯಾದ ಮೊದಲ ವ್ಯಕ್ತಿಯೆಂಬ ಕುಖ್ಯಾತಿಗೆ ಗೊಂಡ್‌ ಭಾಜನನಾಗಲಿದ್ದಾನೆ.  2018ರ ಸೆ. 18ರಂದು ಈತನಿಗೆ ಸ್ಥಳೀಯ ನ್ಯಾಯಾಲಯ ಈ ಶಿಕ್ಷೆ ಜಾರಿಗೊಳಿಸಿತ್ತು. ಆದರೆ, ಇದರ ವಿರುದ್ಧ ಆತ ಮಧ್ಯಪ್ರದೇಶ ಹೈಕೋರ್ಟ್‌ ಮೆಟ್ಟಿಲೇರಿದ್ದ. ಆದರೆ, ಜ. 25ರಂದು ಹೈಕೋರ್ಟ್‌, ಸ್ಥಳೀಯ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಈಗ ಪುನಃ ಸ್ಥಳೀಯ ನ್ಯಾಯಾಲಯದಿಂದ ಶಿಕ್ಷೆ ಜಾರಿಯಾಗಿದೆ. ಆದರೆ, ಈ ತೀರ್ಪಿನ ವಿರುದ್ಧ ಗೊಂಡ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು, ರಾಷ್ಟ್ರಪತಿ ಬಳಿ ಕ್ಷಮಾದಾನ ಕೋರಲು ಅವಕಾಶವಿದೆ ಎಂದು ಜಬಲ್ಪುರ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next