Advertisement

ಬಂಧಿತ ಕೃಷ್ಣಮೂರ್ತಿ, ಸಾವಿತ್ರಿ ಜೈಲಿಗೆ

11:53 PM Nov 11, 2021 | Team Udayavani |

ತಿರುವನಂತಪುರ: ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಮಾವೋವಾದಿ ನಾಯಕರಾದ ಬಿ.ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಬುಧವಾರದಂದು ತಾಳತ್ತೆರಿ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಅವರನ್ನು ಬಿಗಿಭದ್ರತೆಯೊಂದಿಗೆ ಕೇರಳದ ವಿಯೂರ್‌ ಜೈಲಿಗೆ ರವಾನಿಸಲಾಗಿದೆ.

Advertisement

ಕೃಷ್ಣಮೂರ್ತಿ ಹಾಗೂ ಕಬನಿ ದಳಂ ಪ್ರಾಂತ್ಯದ ಕಮಾಂಡರ್‌ ಆಗಿರುವ ರಜಿತ್‌ ಅಲಿಯಾಸ್‌ ಸಾವಿತ್ರಿಯನ್ನು ಕಾಸರಗೋಡಿನ ಮಧೂರಿನಲ್ಲಿ ಇತ್ತೀಚೆಗೆ ರಾಷ್ಟ್ರೀಯ ತನಿಖಾ ಆಯೋಗ (ಎನ್‌ಐಎ) ವಶಕ್ಕೆ ಪಡೆದಿತ್ತು. ಬುಧವಾರ ಬೆಳಗ್ಗೆ 10:25ರ ಸುಮಾರಿಗೆ ಅವರನ್ನು ನ್ಯಾಯಾಲಯಕ್ಕೆ ಕರೆತಂದಾಗಲೂ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಹಲವಾರು ಪೊಲೀಸರು ಮಫ್ತಿಯಲ್ಲಿದ್ದು ಭದ್ರತೆ ಒದಗಿಸಿದರು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಪಾಕಿಸ್ಥಾನವನ್ನು ಹೊರದಬ್ಬಿದ ಆಸ್ಟ್ರೇಲಿಯ

ಜನರ ಮಧ್ಯೆಯಿಂದ ನ್ಯಾಯಾಲಯದೊಳಕ್ಕೆ ಕರೆದೊಯ್ಯುವಾಗ ಕೃಷ್ಣ ಮೂರ್ತಿ ಮಾವೋವಾದದ ಪರ ಹಾಗೂ ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ವಿರುದ್ಧ ಐಪಿಸಿ ಹಾಗೂ ಯುಎಪಿಎ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಐದು ಪ್ರಕರಣಗಳು ಕೇಳಕ್ಕಮ್‌ನಲ್ಲಿ ಹಾಗೂ ಒಂದು ಪ್ರಕರಣ ಅರಾಲಮ್‌ನಲ್ಲಿ ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next