Advertisement

ಅರಿಶಿನದಿಂದ ಹಲವು ಉಪಯೋಗ

10:34 PM Feb 03, 2020 | mahesh |

ಅರಿಶಿನ ದಿನನಿತ್ಯದ ಬಳಕೆಯಲ್ಲಿ ಉಪಯೋಗಿಸಲ್ಪಡುವ ಒಂದು ಸಾಂಬಾರು ಪದಾರ್ಥ. ಆದರೆ ಇದು ಸಾಂಬಾರ ಪದಾರ್ಥಕ್ಕಿಂತ ಹೆಚ್ಚಾಗಿ ಔಷಧ ಗುಣವುಳ್ಳ ವಸ್ತುವಾಗಿ ಹೆಚ್ಚು ಪ್ರಚಲಿತದಲ್ಲಿದೆ. ಅರಶಿನದಿಂದ ಪ್ರಯೋಜನಗಳು ಹಲವಾರು. ಹಸಿ ಅರಿಶಿನ, ಒಣ ಅರಶಿನ, ಕಸ್ತೂರಿ ಅರಶಿನ ಹೀಗೆ ಬೇರೆ ಬೇರೆ ವಿಧಗಳ ಅರಿಶಿನಗಳು ಲಭ್ಯವಿವೆ. ಶೀತವಾದರೆ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿದರೆ ಶೀತ ಬೇಗನ ಕಡಿಮೆಯಾಗುತ್ತದೆ. ಆಯುರ್ವೇದ ಔಷಧ ಪದ್ಧತಿಗಳಲ್ಲೂ ಅರಿಶಿನಕ್ಕೆ ಒಂದು ಪ್ರಮುಖ ಸ್ಥಾನವಿದೆ.

Advertisement

ರೋಗ ನಿರೋಧಕ ಶಕ್ತಿ
ಅರಿಶಿನದಲ್ಲಿ ಕ್ಯುರಿಕಂ ಎಂಬ ಅಂಶವು ಅಧಿಕವಾಗಿದ್ದು ಇದು ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ದೇಹದಲ್ಲಿ ಉಂಟಾಗುವ ಗಾಯಗಳಿಗೆ ಅರಿಶಿನವನ್ನು ಹಚ್ಚಿದರೆ ಬೇಗನೆ ಗುಣವಾಗುತ್ತದೆ. ಹಿಂದೆ ಆಹಾರ ತಯಾರಿಸುವಾಗ ಅರಿಶಿನವನ್ನು ಕಡ್ಡಾಯವಾಗಿ ಹಾಕುತ್ತಿದ್ದರು. ಅದೂ ಮಾಂಸಾಹಾರದಲ್ಲಿ ಅರಶಿನ ಇದ್ದೇ ಇರುತ್ತಿತ್ತು. ಯಾಕೆಂದರೆ ಆಹಾರ ಪದಾರ್ಥಗಳಲ್ಲಿ ದೇಹಕ್ಕೆ ಹಾನಿಯಾಗು ವಂತಹ ಯಾವುದೇ ವಿಷಯುಕ್ತ ಪದಾರ್ಥ ಗಳಿದ್ದರೆ ಅದನ್ನು ಅರಿಶಿನ ಹೀರುತ್ತಿತ್ತು.

ದೇಹದ ಆ್ಯಂಟಿ ಆಕ್ಸೈಡ್‌ ಅಂಶ ಹೆಚ್ಚಳ
ದೇಹವನ್ನು ರಕ್ಷಿಸುವ ಆ್ಯಂಟಿ ಆಕ್ಸೈಡ್‌ ಅಂಶವನ್ನು ಅರಿಶಿನ ಕ್ರಮೇಣವಾಗಿ ಹೆಚ್ಚಿಸುತ್ತೆ. ಇದರಿಂದ ದೇಹಾರೋಗ್ಯ ಉತ್ತಮವಾಗುತ್ತದೆ.

ಟೈಪ್‌ 2 ಡಯಾಬಿಟಿಸ್‌ ನಿಯಂತ್ರಣಕ್ಕೆ ಸಹಕಾರಿ
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೈಪ್‌ 2 ಡಯಾಬಿಟಿಸ್‌ ರೋಗ ನಿಯಂತ್ರಣಕ್ಕೆ ಅರಿಶಿನ ಸಹಾಯ ಮಾಡುತ್ತದೆ. ಅರಿಶಿನವನ್ನು ಆಹಾರದ ಮೂಲಕ ಸೇವಿಸುವುದರಿಂದ ಡಯಾಬಿಟಿಸ್‌ ನಿಯಂತ್ರಣಕ್ಕೆ ಬರುತ್ತದೆ.

ಕೊಲೆಸ್ಟ್ರಾಲ್‌
ದೇಹದಲ್ಲಿ ಹೆಚ್ಚಾಗಿರುವ ಬ್ಯಾಡ್‌ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಅರಶಿನ ಸಹಾಯ ಮಾಡುತ್ತದೆ. ಇದು ಉಷ್ಣ ಅಧಿಕವಾಗಿರುವ ಒಂದು ಆಹಾರವಾಗಿದ್ದು, ಕೊಬ್ಬು ಕರಗಿಸಲು ಸಹಕಾರಿ.

Advertisement

ಸೌಂದರ್ಯ ವರ್ಧಕ
ಸೌಂದರ್ಯ ವರ್ಧಕವಾಗಿಯೂ ಅರಿಶಿನ ಕೆಲಸ ಮಾಡುತ್ತದೆ. ಮುಖದ ಮೇಲೆ ಮೂಡುವ ಮೊಡವೆಗಳ ನಿಯಂತ್ರಿಸಲು, ಮುಖದ ಮೇಲಿರುವ ಅನಗತ್ಯ ಕೂದಲುಗಳ ಬೆಳವಣಿಗೆಯನ್ನು ತಡೆಯಲು ಕೂಡ ಅರಿಶಿನವನ್ನು ಹಚ್ಚುತ್ತಾರೆ.

– ಸುಶ್ಮಿತಾ ಶೆಟ್ಟಿ, ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next