Advertisement

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆ

02:11 AM May 01, 2022 | Team Udayavani |

ಉಡುಪಿ: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ ಮತ್ತು 3 ಬಿಗೆ ಸೇರಿದವರಿಗೆ ಹಲವಾರು ಯೋಜನೆಗಳಿದ್ದು, ಫ‌ಲಾನುಭವಿಗಳು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

Advertisement

ಚೈತನ್ಯ ಸಹಾಯಧನ
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98 ಸಾವಿರ ರೂ., ಪಟ್ಟಣದವರಿಗೆ 1.20 ಲ.ರೂ.ಗಳ ಒಳಗಿರಬೇಕು. ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸೇವಾ ವಲಯ ಮತ್ತು ಸಾರಿಗೆ ವಲಯಕ್ಕೆ ಇದನ್ನು ನೀಡಲಾಗುತ್ತದೆ.

ಅರ್ಜಿದಾರರ ವಯಸ್ಸು 18ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿದಾರರು ಕೆವೈಸಿ ಬಗ್ಗೆ ಆಧಾರ್‌ ಕಾರ್ಡ್‌, ಚುನಾವಣೆ ಗುರುತಿನ ಚೀಟಿ, ಪಾನ್‌ ಕಾರ್ಡ್‌ ದಾಖಲೆಗಳನ್ನು ಸಲ್ಲಿಸಬೇಕು. ಈ ಹಿಂದೆ ನಿಗಮದ ಯೋಜನೆಗಳಲ್ಲಿ
ಸೌಲಭ್ಯ ಪಡೆದಿರಬಾರದು.

ಸ್ವಯಂ ಉದ್ಯೋಗ
ಘಟಕ ವೆಚ್ಚ 50 ಸಾವಿರ ರೂ.ಗಳಿಗೆ ಶೇ. 30ರಷ್ಟು ಗರಿಷ್ಠ 10 ಸಾವಿರ ರೂ.ಗಳ ಸಹಾಯಧನ ಉಳಿಕೆ ಶೇ. 70ರಷ್ಟು 40 ಸಾವಿರ ರೂ.ಗಳನ್ನು ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಘಟಕ ವೆಚ್ಚ 50,001 ರೂ.ನಿಂದ 1 ಲ.ರೂ. ವರೆಗೆ ಶೇ. 20ರಷ್ಟು ಗರಿಷ್ಠ 20 ಸಾವಿರ ರೂ.ಗಳ ಸಹಾಯಧನ ಉಳಿಕೆ ಶೇ. 80ರಷ್ಟು 80 ಸಾವಿರ ರೂ.ಗಳನ್ನು ಶೇ. 4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಘಟಕ ವೆಚ್ಚ 1,001,001 ರೂ.ನಿಂದ 2 ಲ.ರೂ. ವರೆಗೆ ಶೇ. 15ರಷ್ಟು ಕನಿಷ್ಠ 20 ಸಾವಿರ ರೂ.ಗಳ ಗರಿಷ್ಠ 30 ಸಾವಿರ ರೂ.ಗಳ ಸಹಾಯಧನ ಉಳಿಕೆ ಶೇ. 85ರಷ್ಟು 1,70,000ರೂ.ಗಳನ್ನು ಶೇ. 4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಹಿಂದುಳಿದ ವರ್ಗಗಳ ಪ್ರವರ್ಗ – 1, 2ಎ, 3ಎ ಮತ್ತು 3 ಬಿಗೆ ಸೇರಿದವರಾಗಿರಬೇಕು. ವಾರ್ಷಿಕ ವರಮಾನ ಗ್ರಾಮಾಂತರದವರಿಗೆ 98 ಸಾವಿರ ರೂ., ಪಟ್ಟಣದವರಿಗೆ 1.20 ಲ.ರೂ. ಒಳಗಿರಬೇಕು. ವಯಸ್ಸು 18ರಿಂದ 55. ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ ಹಾಗೂ ಸೇವಾ ವಲಯ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಒದಗಿಸಲಾಗುವುದು.

ಕೌಶಲ, ವೃತ್ತಿ ಕಸುಬು
ಘಟಕ ವೆಚ್ಚ 50 ಸಾವಿರ ರೂ.ಗಳಿಗೆ ಶೇ. 30ರಷ್ಟು ಗರಿಷ್ಠ 10 ಸಾವಿರ ರೂ.ಗಳ ಸಹಾಯಧನ ಉಳಿಕೆ ಶೇ. 70ರಷ್ಟು 40 ಸಾವಿರ ರೂ.ಗಳನ್ನು ಶೇ. 2ರ ಬಡ್ಡಿ ದರದಲ್ಲಿ ಸಾಲ, ಘಟಕ ವೆಚ್ಚ 50,001ರಿಂದ 1ಲ.ರೂ. ವರೆಗೆ ಶೇ. 20ರಷ್ಟು ಗರಿಷ್ಠ 20 ಸಾವಿರ ರೂ.ಗಳ ಸಹಾಯಧನ ಉಳಿಕೆ ಶೇ. 80ರಷ್ಟು 80 ಸಾವಿರ ರೂ.ಗಳನ್ನು ಶೇ. 2ರ ಬಡ್ಡಿದರದಲ್ಲಿ ಸಾಲ, ಘಟಕ ವೆಚ್ಚ 1,00,001 ರೂ.ಗಳಿಂದ 2 ಲ.ರೂ. ವರೆಗೆ ಶೇ. 15ರಷ್ಟು 20 ಸಾವಿರ ರೂ.ಗಳು ಗರಿಷ್ಠ 30 ಸಾವಿರ ರೂ.ಗಳ ಸಹಾಯಧನ ಉಳಿಕೆ ಶೇ. 85ರಷ್ಟು 1.7 ಲ.ರೂ.ಗಳನ್ನು ಶೇ. 2ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.

Advertisement

ವಿದೇಶಿ ವಿ.ವಿ.ಗಳಲ್ಲಿ
ಉನ್ನತ ವ್ಯಾಸಂಗ‌
ವಿದೇಶಿ ವಿ.ವಿ.ಗಳಲ್ಲಿ ಪಿಎಚ್‌.ಡಿ., ಪೋಸ್ಟ್‌ ಡಾಕ್ಟ್ರಲ್‌ ಮತ್ತು ಮಾಸ್ಟರ್‌ ಡಿಗ್ರಿ ವ್ಯಾಸಂಗಕ್ಕೆ ಪ್ರವೇಶ ಹೊಂದಿದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿಯವರು ಅರ್ಹರು. ವಾರ್ಷಿಕ ಗರಿಷ್ಠ 3.50 ಲ.ರೂ.ಗಳಂತೆ 3 ವರ್ಷದ ಅವಧಿಗೆ ಗರಿಷ್ಠ 10 ಲ.ರೂ.ಗಳು. ಕುಟುಂಬದ ವಾರ್ಷಿಕ ಆದಾಯ 8 ಲ.ರೂ. ಮಿತಿಯಲ್ಲಿರಬೇಕು. ಅರ್ಹತ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ವ್ಯಾಸಂಗಕ್ಕೆ ಪ್ರವೇಶ ಪಡೆದ ಬಗ್ಗೆ ವಿದೇಶಿ ವಿ.ವಿ.ಗಳ ಪ್ರವೇಶ ಪತ್ರ, ವೀಸಾ, ಪಾಸ್‌ಪೋರ್ಟ್‌, ವಿಮಾನ ಟಿಕೆಟ್‌ನ ಪ್ರತಿ ಒದಗಿಸಬೇಕು. ಸಾಲದ ಭದ್ರತೆಗೆ ವಿದ್ಯಾರ್ಥಿಯ ತಂದೆ ಅಥವಾ ಜಾಮೀನುದಾರರು ಹೊಂದಿರುವ ಸ್ಥಿರಾಸ್ತಿಯನ್ನು ನಿಗಮಕ್ಕೆ ಆಧಾರ ಮಾಡಬೇಕು.

ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು ನಿಗಮದ ವತಿಯಿಂದ ಫ‌ಲಾನುಭವಿಗಳಿಗೆ ಹಲವಾರು ರೀತಿಯ ಯೋಜನೆಗಳನ್ನು ಕಲ್ಪಿಸಲಾಗಿದೆ. ಇದರ ಪ್ರಯೋಜನ ಪಡೆದು ಅದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕಿದೆ.
– ಮಂಜು ಡಿ., ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಉಡುಪಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next