Advertisement
ಜಂಕ್ಷನ್ ನಲ್ಲೇ ಗುಂಡಿಗಳುಮಳೆಗಾಲ ಆರಂಭವಾಗಿ ಕೆಲವೇ ದಿನಗಳಾದರೂ ಈ ಭಾಗದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರು ಹೊಂಡಗುಂಡಿಗಳ ಮೂಲಕವೇ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾರ್ನಮಿಕಟ್ಟೆಯಿಂದ ಮೋರ್ಗನ್ ಗೇಟ್ ಮೂಲಕ ಮೊಗೇರ್, ಮಂಗಳಾದೇವಿ ಸಹಿತ ನಗರದ ಬಹುತೇಕ ಭಾಗಗಳಿಗೆ ತೆರಳುವ ರಸ್ತೆಗಳ ಮುಖ್ಯ ಜಂಕ್ಷನ್ ಇದಾಗಿರುವುದರಿಂದ ಈ ಭಾಗದಲ್ಲಿ ದಿನನಿತ್ಯ ವಾಹನದಟ್ಟಣೆ ಹಾಗೂ ಸಂಚಾರ ದಟ್ಟಣೆ ಇರುತ್ತದೆ. ಮಳೆಯಿಂದ ರಸ್ತೆಗಳಲ್ಲಿ ಉಂಟಾದ ಗುಂಡಿಗಳಿಂದ ನಿತ್ಯ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಹಾಗೂ ಅಪಘಾತಗಳು ಸಾಮಾನ್ಯವಾಗಿವೆ.
ಜಂಕ್ಷನ್ ನಿಂದ ಮಂಗಳಾದೇವಿ ರಸ್ತೆ ಮಾರ್ಗವಾಗಿ ಮುಂದೆ ಸಾಗಿದರೆ ಒಳಚರಂಡಿ ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಖಾಸಗಿ ಕಟ್ಟಡವೊಂದರ ಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಮಳೆನೀರು ಹರಿಯಬೇಕಾದ ಚರಂಡಿಗೆ ಒಳಚರಂಡಿ ಸಂಪರ್ಕವನ್ನು ನೇರವಾಗಿ ಬಿಟ್ಟಿರುವುದರಿಂದ ಗಬ್ಬು ವಾಸನೆ ಬರುತ್ತಿದೆ. ಇದರೊಂದಿಗೆ ಮಳೆ ಬಂದರೆ ಆ ಕೊಳಜೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಇದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ದಿನ ದೂಡುತ್ತಿದ್ದಾರೆ. ಬೀಳುವಂತಿದೆ ಸಿಸಿಟಿವಿ ಕಂಬ
ಪೊಲೀಸರು ಸಾರ್ವಜನಿಕ ಹಿತಾಸಕ್ತಿಯಿಂದ ಜಂಕ್ಷನ್ ನಲ್ಲಿ ಅಳವಡಿಸಲಾದ ಸಿಸಿಟಿವಿ ಕೆಮರಾದ ಕಂಬಕ್ಕೆ ಬಸ್ಸೊಂದು ಗುದ್ದಿರುವುದರಿಂದ ಅದು ಒಂದು ಬದಿಗೆ ವಾಲಿದೆ. ಇನ್ನೊಂದು ಸಲ ಯಾವುದೇ ವಾಹನಗಳು ತಾಗಿದರೂ ಸಿಸಿಟಿವಿ ಕೆಮರಾದ ಕಂಬ ನೆಲಕ್ಕುರುಳುವುದು ಸತ್ಯ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ಜಂಕ್ಷನ್ ಸಮೀಪದಲ್ಲೇ ಇರುವ ಟ್ರಾನ್ಸ್‌ಫಾರ್ಮರ್ ನಲ್ಲಿ ಫೀಸ್ ಬಾಕ್ಸ್ ಅಳವಡಿಸಲಾಗಿದ್ದು, ಅದು ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ಕೆಳಕ್ಕೆ ಜಾರಿದೆ. ಇದನ್ನು ಮಕ್ಕಳು ಮುಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮಳೆಗಾಲ ಆರಂಭವಾದರೆ ವಿದ್ಯುತ್ ಗಳಲ್ಲಿ ಏರುಪೇರಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂತಹ ಅವ್ಯವಸ್ಥೆಯಿಂದ ಜನರು ಗಾಬರಿಗೊಂಡಿದ್ದಾರೆ.
Advertisement
ಫುಟ್‌ಪಾತ್, ಸ್ಲ್ಯಾಬ್ ಗಳ ಕಥೆ ಹೇಳುವಂತಿಲ್ಲಈ ಭಾಗದಲ್ಲಿ ಜನರಿಗೆ ಓಡಾಡಲು ಸೂಕ್ತ ಫುಟ್ ಪಾತ್ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಜನರು ರಸ್ತೆಯಲ್ಲೇ ನಡೆದುಕೊಂಡು ಹೋಗ ಬೇಕಾಗಿದೆ. ಮಳೆಗಾಲ ಆರಂಭವಾಗಿರುವುದರಿಂದ ವಾಹನಗಳು ಚಲಿಸುವಾಗ ಮಳೆ ನೀರು ಪಾದಚಾರಿಗಳ ಮೇಲೆ ಎರಚುತ್ತದೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಕೊಡೆ ಅಥವಾ ಇನ್ನಿತರ ಮಾರ್ಗಗಳನ್ನು ಅನುಸರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲಕ್ಕೂ ಮುನ್ನ ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಗೋಜಿಗೆ ಸ್ಥಳೀಯಾಡಳಿತ ಹೋಗಿಲ್ಲ ಎಂಬುದು ಸ್ಥಳೀಯರ ಆರೋಪ. ಶಾಶ್ವತ ಪರಿಹಾರ ಕೊಡಿ
ಮಾರ್ಗನ್ ಗೇಟ್ ಜಂಕ್ಷನ್ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಹಲವು ಸಮಸ್ಯೆಗಳು ಇವೆ. ಮಳೆಗಾಲ ಆರಂಭವಾಗಿರುವುದರಿಂದ ಅದು ಇನ್ನಷ್ಟು ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ನಮಗೆ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕಾಗಿದೆ.
– ದೇವದಾಸ್ ಶೆಟ್ಟಿ, ಸ್ಥಳೀಯ ನಿವಾಸಿ – ಪಾದಚಾರಿಗಳಿಗೆ ನಡೆಯಲು ಫುಟ್ ಪಾತ್ ಇಲ್ಲ
– ಅಪಾಯಕ್ಕೆ ಆಹ್ವಾನ ನೀಡುತ್ತಿರುವ ತುಂಡಾದ ಸ್ಲ್ಯಾಬ್ ಗಳು
– ರಸ್ತೆಯಲ್ಲೇ ಗುಂಡಿಗಳು; ವಾಹನ ಸವಾರರ ಪರದಾಟ ಮುಂಗಾರು ಆರಂಭವಾಗಿ ವಾರ ಕಳೆದಿಲ್ಲ; ಆಗಲೇ ನಗರದ ಕೆಲವು ರಸ್ತೆಗಳಲ್ಲಿ ಹೊಂಡಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ಮಳೆಗಾಲ ಮುಗಿಯುವ ವೇಳೆಗೆ ನಗರದ ಬಹುತೇಕ ಡಾಮರು ರಸ್ತೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರು ನಿತ್ಯ ಪರದಾಡುವಂತಾಗಿತ್ತು. ಹೀಗಿರುವಾಗ, ಮಹಾನಗರ ಪಾಲಿಕೆಯು ಈಗಲೇ ಎಚ್ಚೆತ್ತುಕೊಂಡು ಈ ರಸ್ತೆಗಳ ದುರಸ್ತಿಗೆ ಗಮನಹರಿಸಿದರೆ ಉತ್ತಮ ಎನ್ನುವುದು ನಗರವಾಸಿಗಳ ಅಭಿಪ್ರಾಯ. ಈ ಬಗ್ಗೆ ಸುದಿನ ರಿಯಾಲಿಟಿ ಚೆಕ್ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದೆ. ಇದೇ ರೀತಿಯ ರಸ್ತೆಗಳಿರುವುದು ಗಮನಕ್ಕೆ ಬಂದರೆ ಓದುಗರು ಕೂಡ ಫೋಟೋ ಸಹಿತ ವಿವರಣೆಯನ್ನು ನಮ್ಮ ವಾಟ್ಸಪ್ ಸಂಖ್ಯೆ 9900567000ಗೆ ಕಳುಹಿಸಬಹುದು. — ಪ್ರಜ್ಞಾ ಶೆಟ್ಟಿ