Advertisement
ಉಳ್ಳಾಲ ಬಂಡಿಕೊಟ್ಯದ ಸುಧಾಕರ್ ಉಳ್ಳಾಲ ಅವರು ‘ಉದಯವಾಣಿ’ ನಡೆಸಿದ ‘ಮನೆಮನೆಗೆ ಮಳೆಕೊಯ್ಲು’ ಅಭಿಯಾನ ಮತ್ತು ಕಾರ್ಯಾಗಾರದಿಂದ ಪ್ರೇರಿತರಾಗಿ ತಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿದ್ದಾರೆ.
Related Articles
Advertisement
ಬೋರ್ ವೆಲ್, ಬಾವಿಗೂ ಮಳೆಕೊಯ್ಲುಕಿನ್ನಿಗೋಳಿ ಪಕ್ಷಿಕೆರೆ ನಿವಾಸಿ ವಿನ್ಸೆಂಟ್ ಪತ್ರಾವೋ ಅವರು ತಮ್ಮ ಮನೆಯ ಟೆರೇಸ್‌ಗೆ ಬೀಳುವ ಮಳೆ ನೀರನ್ನು ಒಂಚೂರು ಪೋಲು ಮಾಡಲು ಅವಕಾಶ ನೀಡದೆ ಬಾವಿಗೆ ಹಾಗೂ ಬೋರ್‌ವೆಲ್ಗೆ ಅಳವಡಿಸಿದ್ದಾರೆ. ನಮ್ಮ ಮನೆ 11 ಸೆಂಟ್ಸ್ ಜಾಗದಲ್ಲಿದ್ದು, ನೀರಿನ ಸಮಸ್ಯೆ ಅಷ್ಟಾಗಿ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ನೀರಿನ ಅಭಾವ ಕಾಡುವ ಭಯವಿತ್ತು. ಆ ಹಿನ್ನಲೆಯಲ್ಲಿ ಮಳೆಕೊಯ್ಲು ಅಳವಡಿಸಿದ್ದೇವೆ. ಟೆರೇಸ್‌ನ ಎರಡು ಬದಿಗಳಲ್ಲೂ ಪೈಪ್ ಅಳವಡಿಸಿ ಅಲ್ಲಿಂದ ಮಳೆ ನೀರನ್ನು ನೇರವಾಗಿ ಅಂಗಳದ ಬದಿಯಲ್ಲಿರುವ ಟ್ಯಾಂಕ್‌ಗೆ ಬಿಡಲಾಗಿದೆ. ಟ್ಯಾಂಕ್‌ಗೆ ಹೊಗೆ, ಜಲ್ಲಿ ಹಾಕಿ ಫಿಲ್ಟರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಎರಡು ಪೈಪ್‌ಗ್ಳಲ್ಲಿ ನೀರು ಬೋರ್‌ವೆಲ್ ಹಾಗೂ ಬಾವಿಗೆ ಹೋಗುತ್ತದೆ. ವಾರಗಳ ಹಿಂದೆ ಮೊಳೆಕೊಯ್ಲು ಅಳವಡಿಸಲಾಗಿದ್ದು, ನೀರಿನ ಸಮಸ್ಯೆ ಮುಂದೆ ಬರಲ್ಲ ಅನ್ನುವ ವಿಶ್ವಾಸವಿದೆ ಎಂದು ಅವರು ಹೇಳುತ್ತಾರೆ. ಜಲಮರುಪೂರಣ ಹೊಂಡ
ಮನೆಯಲ್ಲಿ ಬಾವಿ, ಬೋರ್‌ವೆಲ್ ಇಲ್ಲ ಆದರೆ ಪಕ್ಕದ ಮನೆಯಲ್ಲಿ ಬಾವಿ ಇದೆ ಅಲ್ಲಿನ ನೀರಿನ ಮಟ್ಟ ಏರಿಕೆಯಾಗಲಿ, ಅಂತರ್ಜಲ ಮಟ್ಟ ವೃದ್ಧಿಸಲಿ ಎಂಬ ಕಾರಣಕ್ಕೆ ಮನೆ ಸಮೀಪದಲ್ಲಿ ಜಲಮರುಪೂರಣ ಹೊಂಡ ಮಾಡಿದ್ದೇನೆ ಎಂದು ಹೇಳುತ್ತಾರೆ ಶಕ್ತಿನಗರದ ನೇಜಿನ ಗುರಿ ನಿವಾಸಿ ರಾಕೇಶ್ ಕುಮಾರ್. ಮೊದಲಿಗೆ 5 ಅಡಿ ಅಗಲ 5 ಅಡಿ ಉದ್ದದ ಹೊಂಡ ತೆಗೆದೆ. ಅದರ ಮೇಲೆ ದೊಡ್ಡ ಗಾತ್ರದ ಹಾಗೂ ಸಣ್ಣ ಗಾತ್ರದ ಕಲ್ಲು ಗಳನ್ನು ಹಾಕಿದೆ. ಬಳಿಕ 6 ಬುಟ್ಟಿ ಜಲ್ಲಿ ಸುರಿದೆ. ಇದೀಗ ಮನೆಯ ಟೆರೇಸ್ ನಿಂದ ಬೀಳುವ ಮಳೆ ನೀರು ನೇರವಾಗಿ ಆ ಹೊಂಡಕ್ಕೆ ಹೋಗುವಂತೆ ಮಾಡಿದೆ. ನೀರು ಹೊಂಡದ ಒಳಗೆ ಹೋಗುವ ಸದ್ದು ಕೇಳುತ್ತದೆ. ನಮಗೆ ಅಥವಾ ಅಕ್ಕಪಕ್ಕದ ಜನರಿಗೆ ಪ್ರಯೋಜನವಾಗಲಿ ಎಂಬ ಆಸೆ ನಮ್ಮದು. ಮಳೆಕೊಯ್ಲು, ಜಲಮರುಪೂರಣ ಮಾಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ ಎಂಬುದು ಎಲ್ಲರಿಗೂ ಅರಿವಾಗಲಿ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ. ಮಳೆ ವಿಳಂಬವೇ ಮಳೆಕೊಯ್ಲು ಅಳವಡಿಸಲು ಪ್ರೇರಣೆ
ಈ ವರ್ಷ ಮಳೆಗಾಲ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ನಮ್ಮ ಮನೆಯಲ್ಲಿ ಯಾವ ರೀತಿಯಲ್ಲಿ ‘ಮಳೆಕೊಯ್ಲು’ ನಿರ್ವಹಣೆ ಮಾಡಬಹುದೆಂದು ಕುಟುಂಬದವರೊಂದಿಗೆ ಚರ್ಚಿಸಿ ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ ಎಂದು ಹೇಳುತ್ತಾರೆ ಅಲಂಕಾರು ಸತ್ಯನಾರಾಯಣ ಭಟ್.ತಮ್ಮ ಮನೆಯ, ದನದ ಕೊಟ್ಟಿಗೆಯ ಛಾವಣಿ ನೀರನ್ನು ಟ್ಯಾಂಕಿ, ಫಿಲ್ಟರ್‌ನ ಸಹಾಯದಿಂದ ಪೈಪ್‌ನ ಮೂಲಕ ನಮ್ಮ ಮನೆಯ ಅಂಗಳದಲ್ಲಿ ಇರುವ ನಿತ್ಯಉಪಯೋಗದ ಕೊಳವೆಬಾವಿಗೆ ಮರುಪೂರಣ ಮಾಡುತ್ತಿದ್ದೇವೆ. ಛಾವಣಿಯಿಂದ ಟ್ಯಾಂಕಿಗೆ ಬರುವ ನೀರಿನಲ್ಲಿರುವ ಕಸಕಡ್ಡಿ ತಡೆ ಹಿಡಿಯಲು ಕಬ್ಬಿಣದ ಮೆಶ್ ಅನ್ನು ಟ್ಯಾಂಕಿಗೆ ಅಳವಡಿಸಿದ್ದೇವೆ. ಮುಂದಿನ ವರ್ಷ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ಭಾವನೆ ನಮ್ಮದು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.