Advertisement
ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರಮುಖ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಪಂಚ ರಾಜ್ಯಗಳ ಚುನಾವಣೆ ಬಳಿಕ, ನನ್ನ ಬಳಿ ವಿಪಕ್ಷದ ಶಾಸಕರು ಬಂದಿದ್ದರು. ಸಂಯಮ ಇರಲಿ, ಶಾಂತಿಯಾಗಿರಿ, ಬದಲಾವಣೆ ಬಂದಾಗ ಬರುವಂತೆ ಸೂಚಿಸಿದ್ದೇನೆ ಎಂದು ವಿಪಕ್ಷಗಳಿಗೆ ಶಾಕ್ ನೀಡಿದರು.
Related Articles
Advertisement
18-40 ವರ್ಷದ ಯುವಕರು ಬದಲಾವಣೆಯ ತವಕದಲ್ಲಿದ್ದಾರೆ. ಈ ಭಾಗದ ಜ್ವಲಂತ ಸಮಸ್ಯೆಗಳು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಾವು ಕೇವಲ ಮಾತಾಡುತ್ತಿಲ್ಲ, ಯೋಜನೆ ಕಾರ್ಯಗತಕ್ಕೆ ಕೆಲಸ ಮಾಡ್ತಿದ್ದೇವೆ. ರಾಜಕೀಯ ಮೇಲೆ ವಿಶ್ವಸಾರ್ಹತೆ ಮುಖ್ಯ. ಅದು ಬಿಜೆಪಿ ಮೇಲೆ ಇದೆ. ಪ್ರಧಾನಿ ಮೋದಿಯವರ ಮೇಲೆ ವಿಶ್ವಾಸಾರ್ಹತೆ ಇದೆ. ತುಷ್ಠೀಕರಣ ರಾಜಕಾರಣ ಸರಿಯಲ್ಲ.ಎಲ್ಲರಿಗೂ ಸಮನಾದ ಅವಕಾಶ ನೀಡುವ ರಾಜಕಾರಣ ಬೇಕಿದೆ.ಇದು ನಮ್ಮ ನಾಯಕರ ಸಂಕಲ್ಪ ಎಂದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ವಿಶ್ವಾಸ್, ಸಬ್ ಕಾ ಪ್ರಯಾಸ್. ದೇಶಕ್ಕಾಗಿ 24ಗಂಟೆಗಳ ಕಾಲ ಕೆಲಸ ಮಾಡುತ್ತಿರುವ ವ್ಯಕ್ತಿ ನರೇಂದ್ರ ಮೋದಿ. ಕೊರೊನ ಬಂದಾಗ ಇಡೀ ದೇಶಕ್ಕೆ ಲಸಿಕೆ ಕೊಡಿಸುವ ಕೆಲಸ ಮಾಡಿದರು. ಅಷ್ಟೇ ಅಲ್ಲ, ಬಡ ರಾಷ್ಟ್ರಗಳಿಗೂ ಉಚಿತವಾಗಿ ನೀಡುವ ಕೆಲಸ ಮಾಡಲಾಯಿತು. ಎಲ್ಲಾ ವರ್ಗದ ಜನರಿಗೆ ಅವಕಾಶ ನೀಡಿದ್ದಾರೆ. ರಾಜ್ಯದ ಬಜೆಟ್ ಆದ ಬಳಿಕ ಜನ ಮತ್ತಷ್ಟು ವಿಶ್ವಾಸ ಇಟ್ಟಿದ್ದಾರೆ. ಎಲ್ಲರಿಗೂ ಆಶ್ಚರ್ಯಪಡುವ ಬಜೆಟ್ ನೀಡಿದ್ದು, ಎಲ್ಲರಿಗೂ ತಲುಪುವ ಕೆಲಸ ಮಾಡಿದ್ದೇವೆ. ಬಜೆಟ್ ಕೊಡೋದು ಅಷ್ಟೇ ಅಲ್ಲದೆ, ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಕೂಡ ಮಾಡುತ್ತಿದ್ದೇವೆ. ನಮ್ಮ ಸಾಧನೆ ಜನರ ಮುಂದಿಟ್ಟು, ಮತ ಕೇಳುತ್ತೇವೆ. ಮತ್ತೆ ರಾಜ್ಯದಲ್ಲಿ 150+ ಸೀಟುಗಳು ಗೆಲ್ಲುವ ಮೂಲಕ, ವಿಧಾನಸೌಧದಲ್ಲಿ ಆಡಳಿತ ನೀಡುತ್ತೇವೆಎಂದರು.
ಯುವಕರು ರಾಜಕೀಯಕ್ಕೆ ಬರುತ್ತಿದ್ದಾರೆ. ವಿಪಕ್ಷ ನಾಯಕರು ಮತ್ತು ಸದಸ್ಯರು ಬಹಳ ಮಾತಾಡುತ್ತಿದ್ದಾರೆ. ಈಗಾಗಲೇ ಖಾತೆಗಳನ್ನು ಹಂಚಿಕೊಂಡಿದ್ದಾರೆ. ಖಂಡಿತ ಅಧಿಕಾರಕ್ಕೆ ಬರುತ್ತೇವೆ ಎಂದು ಭ್ರಮೆಯಲ್ಲಿದ್ದಾರೆ. ಸಿಎಂ ಆಗಳು ಪೈಪೋಟೊಯಲ್ಲಿದ್ದಾರೆ. ಅವರ ಯಾವ ಭಾಗ್ಯವೂ ಜನರಿಗೆ ತಲುಪಲಿಲ್ಲ.ಅವರು ಮತ್ತೆ ಬೇಡ ಅಂತ ಕಿತ್ತೊಗೆದಿದ್ದಾರೆ. ಶ್ರಮಿಕರು, ಕಾರ್ಮಿಕರು ನಮ್ಮ ಶಕ್ತಿ. ಬದಲಾವಣೆಯ ಮೊದಲ ಹೆಜ್ಜೆ, ದಕ್ಷಿಣ ಕರ್ನಾಟಕದಲ್ಲಿ ನಡೆದಿದೆ. ನಿರಂತರವಾಗಿ ಬದಲಾವಣೆ ತರುತ್ತಿದ್ದೇವೆ ಎಂದರು.