Advertisement

ಸಂಸತ್‌ ಕಲಾಪಕ್ಕೆ ಹಲವು ಅಡೆತಡೆ

09:52 AM Feb 05, 2020 | sudhir |

ಹೊಸದಿಲ್ಲಿ: ಬಜೆಟ್‌ ಅಧಿವೇಶನದ ಮೂರನೇ ದಿನವಾದ ಸೋಮವಾರ ಸಂಸತ್‌ನ ಉಭಯ ಸದನಗಳಲ್ಲಿ ಸಿಎಎ, ಎನ್‌ಪಿಆರ್‌, ಬಿಜೆಪಿ ಸಂಸದರಿಬ್ಬರ ವಿವಾದಾತ್ಮಕ ಹೇಳಿಕೆಗಳೇ ಹೆಚ್ಚು ಸದ್ದು ಮಾಡಿವೆ. ರಾಜ್ಯಸಭೆಯಲ್ಲಿ ಭಾರಿ ಕೋಲಾಹಲ ಉಂಟಾದ್ದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

Advertisement

ಬೆಳಗ್ಗೆ 11 ಗಂಟೆಗೆ ಕಲಾಪ ಶುರುವಾಗುತ್ತಲೇ, ವಿಪಕ್ಷಗಳ ಸದಸ್ಯರು ಗದ್ದಲ ವೆಬ್ಬಿಸಿದರು. ಬಿಜೆಪಿ ನಾಯಕ ಭೂಪೇಂದ್ರ ಯಾದವ್‌ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯ ವಾದ ಅರ್ಪಿಸುವ ಗೊತ್ತುವಳಿ ಮಂಡನೆಗೂ ಅವಕಾಶ ಸಿಗಲಿಲ್ಲ. ಇದಕ್ಕಿಂತ ಮೊದಲು 2 ಬಾರಿ ಕಲಾಪ ಮುಂದೂಡಲಾಗಿತ್ತು. ಅಪರಾಹ್ನ 3 ಗಂಟೆಗೆ ಕಲಾಪ ಶುರು ವಾದಾಗಲೂ ಗದ್ದಲ ಮುಂದುವರಿದ ಕಾರಣ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್‌ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ.

ಪ್ರತಿಭಟನೆ, ಸಭಾತ್ಯಾಗ: ಬಿಜೆಪಿ ಸಂಸದ ಪರ್ವೇಶ್‌ ವರ್ಮಾ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿಯ ಚರ್ಚೆ ನಿಟ್ಟಿನಲ್ಲಿ ವರ್ಮಾ ಮಾತನಾಡಲು ಎದ್ದು ನಿಂತಾಗಲೇ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಇತ್ತೀಚೆಗೆ ದಿಲ್ಲಿ ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾಗಿ ಅವರನ್ನು ಚುನಾವಣಾ ಆಯೋಗ ಬಿಜೆಪಿಯ ತಾರಾ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕಿತ್ತು.

ಕಾಂಗ್ರೆಸ್‌ ಸದಸ್ಯರ ವರ್ತನೆಗೆ ಆಕ್ಷೇಪ ಮಾಡಿದ ಸ್ಪೀಕರ್‌ ಓಂ ಬಿರ್ಲಾ “ಸದಸ್ಯರೊಬ್ಬರ ಹೊರಗಿನ ವರ್ತನೆಯನ್ನು ಸದನದಲ್ಲಿ ಪ್ರಸ್ತಾಪಿಸುವಂತಿಲ್ಲ’ ಎಂದರು. ಇಂಥ ಕ್ರಮದ ಮೂಲಕ ಕೆಟ್ಟ ಉದಾ ಹರಣೆಗಳಿಗೆ ನಾಂದಿ ಹಾಡಬೇಡಿ ಎಂದರು. ಸ್ಪೀಕರ್‌ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್‌ ಸಂಸದರು ಸಭಾ ತ್ಯಾಗ ಮಾಡಿದರು.

2 ಹಂತಗಳಲ್ಲಿ ಪರಿಹಾರ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು 2 ಕಂತುಗಳಲ್ಲಿ ಬಿಡುಗಡೆ ಮಾಡುವುದಾಗಿ ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

Advertisement

ರಾಜ್ಯಗಳಿಗೆ 2 ತಿಂಗಳಿಗೊಮ್ಮೆ ಈ ಮೊತ್ತ ನೀಡಲಾಗುತ್ತದೆ. 2019ರ ಅಕ್ಟೋಬರ್‌-ನವೆಂಬರ್‌ನ ಬಾಕಿ ಮೊತ್ತವನ್ನು 2 ತಿಂಗಳಲ್ಲಿ ನೀಡಲಾಗುತ್ತದೆ. ಈವರೆಗೆ 2,10, 969.49 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಠಾಕೂರ್‌ ಉತ್ತರಿಸಿದ್ದಾರೆ.

ಠಾಕೂರ್‌ ವಿರುದ್ಧ ಪ್ರತಿಭಟನೆ: ವಿವಾದಿತ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿ ರುವ ಸಚಿವ ಅನುರಾಗ್‌ ಠಾಕೂರ್‌ ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಸದನದ ಬಾವಿಗೆ ನುಗ್ಗಿ ಕಾಂಗ್ರೆಸ್‌ ಸಂಸದರು “ನಿಮ್ಮ ಗುಂಡು ಎಲ್ಲಿ’, “ಗುಂಡು ಹಾರಿಸುವುದನ್ನು ನಿಲ್ಲಿಸಿ’ ಎಂದು ಘೋಷಣೆ ಕೂಗಿದರು. ಪ್ರಶ್ನೋತ್ತರ ವೇಳೆಯಲ್ಲಿ ಠಾಕೂರ್‌ ಉತ್ತರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ರಾಷ್ಟ್ರಪತಿ ಭಾಷಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಸ್ತಾವ ಮಾಡಿರುವ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್‌ ಆರು ತಿದ್ದುಪಡಿಗಳನ್ನು ಮಂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next