ಹೊಸದಿಲ್ಲಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಸೇವೆಗಳಿಗೆ ಸದ್ಯ ನಾವು-ನೀವೆಲ್ಲ ಬೇರೆ ಬೇರೆ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬೇಕು.
ಜತೆಗೆ ಐ.ಡಿ., ಪಾಸ್‌ವರ್ಡ್ ಹೊಂದಿರಬೇಕು. ಇನ್ನು ಅಂಥ ಸರ್ಕಸ್ ಮಾಡುವ ಅಗತ್ಯ ಬರಲಾರದು. ಅದಕ್ಕೆ ಪರಿಹಾರ ನೀಡುವ ಸಲುವಾಗಿ ಕೇಂದ್ರ ಸರಕಾರದ ವತಿಯಿಂದಲೇ ಒಂದೇ ವೆಬ್‌ಸೈಟ್‌ನಲ್ಲಿ ಹಲವು ಸೇವೆಗಳನ್ನು ನೀಡುವ ವ್ಯವಸ್ಥೆ ಶೀಘ್ರವೇ ಶುರುವಾಗಲಿದೆ.
ಅದಕ್ಕಾಗಿ ಕೇಂದ್ರ ಸರಕಾರದ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಯಾವ ರೀತಿಯ ಸೇವೆಗಳನ್ನು ಒಂದೇ ವೆಬ್‌ಸೈಟ್‌ನಲ್ಲಿ ಸಿಗುವಂತೆ ಮಾಡಬೇಕು ಎಂಬ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಪರಿಷತ್ ನಲ್ಲಿ ಬಹುಮತವಿಲ್ಲ,ಮುಂದೆ ನೋಡೋಣ: ಸಿಎಂ ಬೊಮ್ಮಾಯಿ
ಮುಂದಿನ ವರ್ಷದ ಆಗಸ್ಟ್‌ನಿಂದ ಬಹು ನಿರೀಕ್ಷಿತ ಸೇವೆಗಳ ವೆಬ್‌ಸೈಟ್ ದೇಶವಾಸಿಗಳ ಸೇವೆಗೆ ಲಭ್ಯವಾಗಲಿದೆ. ಅದಕ್ಕಾಗಿ ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರ ಜ್ಞಾನ ಸಚಿವಾಲಯ ಸಭೆಯನ್ನೂ ನಡೆಸಿದೆ.
ಅದರಲ್ಲಿ ಸರಕಾರದ ಕಲ್ಯಾಣ ಯೋಜನೆಗಳಿಗೆ ಅರ್ಜಿ ಸಲ್ಲಿಸುವಿಕೆ ಸೇರಿದಂತೆ ಹಲವು ವ್ಯವಸ್ಥೆಗಳು ಲಭ್ಯವಾಗಲಿವೆ.