Advertisement

ಹಲವು ಸರಕಾರಿ ವಸತಿ ಯೋಜನೆಗಳೂ ನನೆಗುದಿಗೆ

06:00 AM Dec 02, 2018 | |

ಉಡುಪಿ: ಮರಳು ಕೊರತೆ ಕಟ್ಟಡ ನಿರ್ಮಾಣ ಕ್ಷೇತ್ರವನ್ನು ಬಹುವಾಗಿ ಕಾಡಿದೆ. ಇದಕ್ಕೆ ಉದಾಹರಣೆ ಯೆಂದರೆ, ಸರಕಾರದ ವಸತಿ ಯೋಜನೆಗಳಡಿ ನಿರ್ಮಾಣವಾಗಬೇಕಾದ ಮನೆಗಳೇ ಹಲವೆಡೆ ಸ್ಥಗಿತಗೊಂಡಿವೆ. ಇನ್ನು ಕೆಲವೆಡೆ ಆರಂಭಗೊಂಡೇ ಇಲ್ಲ.

Advertisement

488 ಮನೆಗಳು ಪೂರ್ಣ
ಉಡುಪಿ ತಾಲೂಕಿನಲ್ಲಿ ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್‌ ವಸತಿ ಯೋಜನೆಯಡಿ 1,671 ಮಂದಿ ಫ‌ಲಾನುಭವಿಗಳ ಆಯ್ಕೆಯಾಗಿದ್ದು ಇದ ರಲ್ಲಿ 488 ಮನೆಗಳು ನಿರ್ಮಾಣಗೊಂಡಿವೆ. 660 ಮನೆಗಳು ಅಡಿಪಾಯಕ್ಕೇ ನಿಂತಿದ್ದರೆ, ಉಳಿದ ಮನೆ ಗಳ ಗೋಡೆ/ ಮೇಲ್ಛಾವಣಿ ಆಗಿದೆ. ಗಾರೆ ಆಗಬೇಕು. ಕುಂದಾಪುರ ತಾಲೂಕಿನಲ್ಲಿ ಬಸವ ವಸತಿ, ಇಂದಿರಾ ಆವಾಸ್‌, ಆಶ್ರಯ ವಸತಿ, ಅಂಬೇಡ್ಕರ್‌ ವಸತಿ ಯೋಜನೆ ಇತ್ಯಾದಿಯಡಿ 3,250 ಕ್ಕೂ ಹೆಚ್ಚು ಮನೆಗಳ ಕಾಮಗಾರಿ ಸ್ಥಗಿತಗೊಂಡಿದೆ. 22 ಅಂಗನ ವಾಡಿ ಕಟ್ಟಡಗಳು, 8 ಗ್ರಾ.ಪಂ. ಕಟ್ಟಡಗಳು ಹಾಗೂ ಒಂದು ವಿಕಲ ಚೇತನರ ಇಲಾಖೆಯ ಕಟ್ಟಡವೂ ಮರಳಿಗೆ ಕಾಯುತ್ತಿವೆ. 

ಹೋಬಳಿಗಳಲ್ಲೂ ಇದೇ ಸಮಸ್ಯೆ. ಉದಾಹರಣೆಗೆ ಬರೀ ಕೋಟ ಹೋಬಳಿಯ ಸುತ್ತಮುತ್ತ ಐರೋಡಿ, ಪಾಂಡೇಶ್ವರ, ಕೋಡಿ, ಕೋಟ, ಕೋಟತಟ್ಟು, ವಡ್ಡರ್ಸೆ, ಶಿರಿಯಾರ, ಯಡ್ತಾಡಿ, ಆವರ್ಸೆ, ಬಿಲ್ಲಾಡಿ ಗ್ರಾ.ಪಂ. ಹಾಗೂ ಸಾಲಿಗ್ರಾಮ ಪ.ಪಂ. ವ್ಯಾಪ್ತಿ ಯಲ್ಲಿ 280ಕ್ಕೂ ಹೆಚ್ಚು ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ. ಜತೆಗೆ ವಸತಿ ನಿಗಮದಿಂದ ಫ‌ಲಾನುಭವಿಗಳಿಗೆ ನಾಲ್ಕೈದು ತಿಂಗಳಿಗೆ ಅನುದಾನ ಬಾರದಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. 

ಮುಕ್ತಾಯ ಅವಧಿ ಏರಿಕೆ ! 
ಫ್ಲ್ಯಾಟ್‌ ಖರೀದಿಸುವವರಿಗೆ ನೀಡುವ ಮುಕ್ತಾಯ ಅವಧಿ (ಕಂಪ್ಲೀಷನ್‌ ಪಿರೇಡ್‌)ಯಂತೆಯೇ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲ  ವಾದರೆ ರೇರಾ ಕಾಯಿದೆಯಡಿ ದೂರು ದಾಖಲಿಸಬಹುದು. ಹಾಗಾಗಿ ಕೆಲವು ಕಂಪೆನಿಗಳು ಗ್ರಾಹಕರಿಗೆ 2 ವರ್ಷದ ಬದಲು 5 ವರ್ಷ ಅವಧಿ ಕೇಳುತ್ತಿವೆ. ಉಡುಪಿಯಲ್ಲಿ ದೊಡ್ಡ ಆರ್ಥಿಕ ಚಟುವಟಿಕೆಗಳಿಲ್ಲ. ಶೇ.60ರಷ್ಟು ಖರೀದಿದಾರರು ಎನ್‌ಆರ್‌ಐಗಳು. ಅವರ ಹೂಡಿಕೆಯೇ ಮುಖ್ಯ. 300 ಫ್ಲ್ಯಾಟ್‌ನ ಕಟ್ಟಡದಿಂದ ಒಂದು ಸಾವಿರ ಜನರಿಗೆ 3 ವರ್ಷ ಕೆಲಸ ಸಿಗುತ್ತದೆ. ಅನಂತರ ಸೊಸೈಟಿ ಮಾಡಿ ದಾಗ ಅಲ್ಲಿಯೂ 50 ಜನರಿಗೆ ಶಾಶ್ವತ ಕೆಲಸ ಸಿಗುತ್ತದೆ ಎನ್ನುತ್ತಾರೆ ಉಡುಪಿ ಬಿಲ್ಡರ್ ಅಸೋಸಿಯೇಷನ್‌ ಅಧ್ಯಕ್ಷ ಜೆರ್ರಿ ವಿನ್ಸೆಂಟ್‌ ಡಯಾಸ್‌.  

ಮಾಹಿತಿ: ರಾಜೇಶ್‌ ಮತ್ತು ಪ್ರಶಾಂತ್‌ 

Advertisement

ಖಾಸಗಿಯವರಿಗೂ ಸಮಸ್ಯೆಯೇ 
ಇನ್ನು ಖಾಸಗಿ ವಸತಿ ಯೋಜನೆಗಳೂ ಕಷ್ಟದಲ್ಲಿವೆ. ವಿವಿಧೆಡೆ ನಿರ್ಮಾಣವಾಗಬೇಕಿದ್ದ ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣಗಳು ಮುಂದುವರಿಯುವ ಸ್ಥಿತಿಯಲ್ಲಿಲ್ಲ. ಮನೆ ನಿರ್ಮಾಣ ಸಂಸ್ಥೆಯೊಂದು 100 ಮನೆಗಳ ವಸತಿ ಸಂಕೀರ್ಣಗಳ ಕಾಮಗಾರಿ ಆರಂಭಿಸಿ ಸ್ಥಗಿತಗೊಳಿಸಿದೆ. ಇದರೊಂದಿಗೆ ಇನ್ನಷ್ಟು ಮನೆಗಳನ್ನು ನಿರ್ಮಿಸುವ ಯೋಜನೆ ಹೊಂದಿತ್ತು. ಇಂಥ ಉದಾಹರಣೆಗಳು ಹಲವಿವೆ.
ನಮಗೆ 7,000 ರೂ.ನಲ್ಲಿ ಮರಳು ದೊರೆಯುತ್ತಿತ್ತು. ಆದರೆ ಈಗ ಬ್ಲ್ಯಾಕ್‌ನಲ್ಲಿ 20,000 ರೂ. ನೀಡಿ ಮರಳು ಖರೀದಿಸಬೇಕಿದೆ. ಹಾಗೆ ಖರೀದಿಸಿದರೆ ಹಿಂದಿನ ದರದಲ್ಲಿ ಫ್ಲ್ಯಾಟ್‌ ಮಾರಲಾಗುವುದು. ತೀರಾ ಅಗತ್ಯವಾದರೆ ಒಂದೆರಡು ಲೋಡ್‌ ಮಾತ್ರ ಖರೀದಿಸುತ್ತೇವೆ.  ಎಂ ಸ್ಯಾಂಡ್‌ನ‌ ಗುಣಮಟ್ಟದ ಬಗ್ಗೆ ನಮಗೆ ಖಾತರಿ ಇಲ್ಲ. ಹಾಗಾಗಿ ಹೆಚ್ಚಿನ ಕಾಮಗಾರಿ ನಿಲ್ಲಿಸಿದ್ದೇವೆ ಎನ್ನುತ್ತಾರೆ ಪ್ರತಿಷ್ಠಿತ ಬಿಲ್ಡರ್ ಕಂಪೆನಿಯವರು.

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next