ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲೊಂದಾದ ಮಹಿಳಾ ಜ್ಞಾನ ವಿಕಾಸ ಕೇಂದ್ರವು ಮಹಿಳೆಯರ ಆರ್ಥಿಕ ಸದೃಢತೆಯೊಂ ದಿಗೆ ಆರೋಗ್ಯ, ಶಿಕ್ಷಣ, ಸಂಬಂಧಪಟ್ಟಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಪ್ರಯೋಜನ ಪಡೆಯುವ ಮೂಲಕ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ಎಂ. ಡಿ.ಪದ್ಮಾವತಿ ತಿಳಿಸಿದರು.
ತಾಲೂಕಿನ ರಂಗಾಪುರ ವಲಯದ ಅನಗೊಂಡನಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನವಾಗಿ ಸುರಭಿ ಜ್ಞಾನ ವಿಕಾಸ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯು ರಾಜ್ಯದಲ್ಲಿಯೇ ಶ್ರೀಸಾಮಾನ್ಯರಲ್ಲಿ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು.
ಹಲವು ಕಾರ್ಯಕ್ರಮ: ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬುವ ಜತೆಗೆ ಶಿಸ್ತು ಮೂಡಿಸುವ ಕೆಲಸ ಮಾಡುತ್ತಿದೆ. ತಾಲೂಕಿನ ಎಲ್ಲಾ ವಲಯಗಳಲ್ಲಿಯೂ ಮಹಿಳಾ ಜ್ಞಾನ ವಿಕಾಸ ಕೇಂದ್ರವನ್ನು ತೆರೆಯಲಾ ಗಿದ್ದು, ಇಲ್ಲಿ ಸ್ವದ್ಯೋಗ, ಆರೋಗ್ಯ, ಕೌಟುಂಬಿಕ ಸಲಹೆ, ಆರ್ಥಿಕ ಸ್ವಾವಲಂಬನೆ, ಸಾಂಸ್ಕೃತಿಕ ಚಟು ವಟಿಕೆಗಳು ಸೇರಿದಂತೆ ಮಹಿಳೆಯರಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಆರೋಗ್ಯ ಸಹಾಯಕಿ ಪ್ರೇಮಾ ಸಾಂಕ್ರಾಮಿಕ ರೋಗ ಕುರಿತ ಡೆಂಗ್ಯು, ಮಲೇರಿಯಾ, ಚಿಕೂನ್ ಗುನ್ಯಾ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಸಾಂತ್ವಾನ ಕೇಂದ್ರದ ಆಪ್ತ ಸಮಾಲೋಚಕ ಮೋಹನ್, ಕೌಟುಂಬಿಕ ಸಾಮರಸ್ಯ ಕುಟುಂಬದಲ್ಲಿ ಏನೇನೂ ಸಮಸ್ಯೆಗಳು ಕಂಡು ಬರುತ್ತವೆ, ಇಂತಹ ಗಂಭೀರ ಸಮಸ್ಯೆಗಳು ಬಂದಾಗ ಸಂಬಂಧಪಟ್ಟ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮಾಹಿತಿ ನೀಡಿದರು.
Related Articles
ಮೇಲ್ವಿ ಚಾರಕರಾದ ಅಣ್ಣಪ್ಪ ಮತ್ತು ಸಂತೋಷ್ ಜಾnನ ವಿಕಾಸ ಕಾರ್ಯಕ್ರಮದಲ್ಲಿ ಮಾತೃಶ್ರೀ ಮಹಿಳಾ ಸಬಲೀಕರಣದ ಮಹತ್ವ ಕುರಿತು ಮಾಹಿತಿ ನೀಡಿ ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಆನಂದ್, ನಯನಮ್ಮ, ಪಿಡಿಒ ಶಂಕರ್, ಡೇರಿ ಅಧ್ಯಕ್ಷ ರಮೇಶ್, ಪ್ರಭುಸ್ವಾಮಿ, ಆಶಾ ಕಾರ್ಯ ಕರ್ತೆಯರಾದ ಗೀತಾ, ನಾಗವೇಣಿ, ತ್ರಿವೇಣಿ, ಸೇವಾಪ್ರತಿನಿಧಿ ರೂಪಾ ಮತ್ತಿತರರಿದ್ದರು. ನಂತರ ಕೇಂದ್ರದ ದಾಖಲಾತಿ ಹಸ್ತಾಂತರಿಸಿ ಹಣ್ಣಿನ ಗಿಡ ನಾಟಿ ಮಾಡಲಾಯಿತು.