Advertisement

ಪಠ್ಯದಲ್ಲಿ ಹಲವು ಬದಲಾವಣೆ ; ಪರಿಷ್ಕರಣ ಸಮಿತಿಯಿಂದ ಮತ್ತೊಂದು ವಿವಾದ

11:59 PM Mar 05, 2024 | Team Udayavani |

ಬೆಂಗಳೂರು: ಎಲ್ಲ ಸರಕಾರಗಳಿಗೂ ಮುಜುಗರ ಉಂಟುಮಾಡುವ ಧಾರ್ಮಿಕ ಸಂಗತಿಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವ ವಿಚಾರ ಇದೀಗ ಸಿದ್ದರಾಮಯ್ಯ ಸರಕಾರ ನೇಮಿಸಿದ ಡಾ| ಮಂಜುನಾಥ್‌ ಜಿ. ಹೆಗಡೆ ಅವರ ನೇತೃತ್ವದ 6ರಿಂದ 10ನೇ ತರಗತಿಯವರೆಗಿನ ಸಮಾಜ ವಿಜ್ಞಾನ ಮತ್ತು 1ರಿಂದ 10ರ ವರೆಗಿನ ಕನ್ನಡ ಪಠ್ಯಪುಸ್ತಕಗಳ ಪರಿಷ್ಕರಣ ಸಮಿತಿಯ ವರದಿಯಲ್ಲೂ ಮುನ್ನೆಲೆಗೆ ಬಂದಿದೆ.

Advertisement

8ನೇ ತರಗತಿಯ ಇತಿಹಾಸ ಪಠ್ಯದಲ್ಲಿ “ಸನಾತನ ಧರ್ಮ’ ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ ನಿರೂಪಣೆ ನೀಡಿರುವುದು, ಸಿಂಧೂ-ಸರಸ್ವತಿ ನಾಗರಿಕತೆ ಎಂಬ ಅಧ್ಯಾಯ ಶೀರ್ಷಿಕೆಯನ್ನು ಪ್ರಾಚೀನ ಭಾರತದ ನಾಗರಿಕತೆಗಳು: ಸಿಂಧು-ಸರಸ್ವತಿ ನಾಗರಿಕತೆ ಮತ್ತು ವೇದಗಳ ಕಾಲ ಎಂದು ಬದಲಾಯಿಸಿರುವುದು, ಪಠ್ಯದಲ್ಲಿ ಮತಗಳನ್ನು ಧರ್ಮ ಎಂದು ದಾಖಲಿಸಿರುವುದು, ಹಲವು ರಾಜರ ವಿವರಗಳನ್ನು ಸಂಕ್ಷಿಪ್ತಗೊಳಿಸಿರುವುದು ವಿವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ.

ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕರೆಂದು ಉಲ್ಲೇಖಿಸಲಾಗಿದೆ, ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಪ್ರಮುಖ ಸಾಹಿತಿಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ ಎಂದು ಸಮಿತಿಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಆದರೆ ಏನೆಲ್ಲ ಬದಲಾವಣೆ, ತಿದ್ದುಪಡಿಯಾಗಿದೆ ಎಂಬ ಮಾಹಿತಿ ಇನ್ನಷ್ಟೆ ಬಹಿರಂಗಗೊಳ್ಳಬೇಕಿದೆ.

ಮೇಲ್ನೋಟಕ್ಕೆ ಪಠ್ಯಗಳ ಶೀರ್ಷಿಕೆ, ಉಪಶೀರ್ಷಿಕೆ, ಸೇರ್ಪಡೆ, ಕೈಬಿಡುವಿಕೆ, ತಿದ್ದುಪಡಿಗಳೆಂದು ಸುಮಾರು ನೂರಕ್ಕಿಂತ ಹೆಚ್ಚು ಬದಲಾವಣೆಗಳಾಗಿವೆ. ಸರಕಾರ ಪರಿಷ್ಕರಣೆಯನ್ನು ಒಪ್ಪಿಕೊಂಡಿದ್ದು ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಬಂದಲ್ಲಿ ಅದಕ್ಕೆ ಉತ್ತರಿಸುವ ಜವಾಬ್ದಾರಿಯ ಸಮಿತಿಯ ಸಂಯೋಜಕರಾದ ಡಾ| ಮಂಜುನಾಥ್‌ ಜಿ. ಹೆಗಡೆ ಅವರದ್ದು ಎಂದು ಶಾಲಾ ಶಿಕ್ಷಣ ಇಲಾಖೆ ಹೇಳಿದೆ.

ಮಕ್ಕಳ ಪಠ್ಯಪುಸ್ತಕದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಪಠ್ಯಪುಸ್ತಕಗÙನ್ನು ಎರಡು ಸಂಪುಟಗಳನ್ನಾಗಿ ವಿಭಾಗಿಸುವ ಸರ್ಕಾರದ ತೀರ್ಮಾನಕ್ಕೆ ಅನುಗುಣವಾಗಿ ಪಠಿಷ್ಕರಣೆ ನಡೆಸಲಾಗಿದೆ ಎಂದು ಸಮಿತಿ ಹೇಳಿದೆ.
‘ವೇದ ಕಾಲದ ಸಂಸ್ಕೃತಿ’ ಮತ್ತು “ಹೊಸ ಧರ್ಮಗಳ ಉದಯ’ ಪಾಠಗಳನ್ನು ಸೇರಿಸಲಾಗಿದೆ. ಪೌರ ಮತ್ತು ಪೌರತ್ವ ಪಾಠವನ್ನು ಲಿಂಗ ಸಮಾನತೆಯ ನೆಲೆಯಲ್ಲಿ ಪರಿಷ್ಕರಿಸಲಾಗಿದೆ. ಮಕ್ಕಳ ಹಕ್ಕುಗಳನ್ನು ಪರಿಷ್ಕರಿಸಲಾಗಿದೆ. ಏಳನೇ ತರಗತಿಯ ಇತಿಹಾಸ ಪಠ್ಯದಲ್ಲಿ ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕರೆಂದು ದಾಖಲಿಸಲಾಗಿದೆ. ‘ರಿಲಿಜಿಯನ್‌’ಗಳು ಎಂಬ ಶೀರ್ಷಿಕೆಯನ್ನು ‘ಧರ್ಮಗಳು’ ಎಂದು ಬದಲಾಯಿಸಲಾಗಿದೆ.

Advertisement

ಬ್ಲಿಡ್‌ ಗ್ರೂಪ್‌ ಪಠ್ಯದಿಂದ ಔಟ್‌
ಬ್ರಾಹ್ಮಣ ಸಮುದಾಯವನ್ನು ಅವಮಾನಿಸಲಾಗಿದೆ ಎಂಬ ಆರೋಪಕ್ಕೆ ಈಡಾಗಿದ್ದ ವಿಜಯಮಾಲಾ ರಂಗನಾಥ ಅವರು ಬರೆದಿದ್ದ “ಬ್ಲಿಡ್‌ಗ್ರೂಪ್‌’ ಕಥೆಯನ್ನು ಎಂಟನೇ ತರಗತಿ ಪಠ್ಯದಿಂದ ಕೈ ಬಿಡಲಾಗಿದೆ. ಇದರ ಬದಲಿಗೆ ನೇಮಿಚಂದ್ರರ “ಏನಾದರೂ ಮಾಡಿ ದೂರಬೇಡಿ’ ಎಂಬ ಪರಿಸರ ಸಂರಕ್ಷಣೆ ಸಂಬಂಧಿತ ಗದ್ಯವನ್ನು ಸೇರಿಸಲಾಗಿದೆ.9 ಮತ್ತು 10ನೇ ತರಗತಿ ಕನ್ನಡ ತೃತೀಯ ಭಾಷೆಯಲ್ಲಿ ಕೈಬಿಡಲಾಗಿದ್ದ ನಾಗೇಶ್‌ ಹೆಗಡೆ, ಪಿ. ಲಂಕೇಶ್‌ ಲೇಖನವನ್ನು, ಶ್ರೀನಿವಾಸ ಉಡುಪರ ಕವನವನ್ನು ಹೊಸದಾಗಿ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next