Advertisement

ನೌಕರರಿಗೆ ಎನ್‌ಪಿಎಸ್‌ ಮಾರಕ

03:03 PM Sep 06, 2019 | Naveen |

ಮಾನ್ವಿ: ನೂತನ ಪಿಂಚಣಿ ಕಾಯ್ದೆ ಸರ್ಕಾರಿ ನೌಕರರ ಭವಿಷ್ಯಕ್ಕೆ ಮಾರಕವಾಗಿದೆ. ಈ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರಿ ನೌಕರರ ಸಂಘ ಮುಂದಿನ ದಿನ ನಿರ್ಣಾಯಕ ಹೋರಾಟ ನಡೆಸಲಿದೆ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಮೈಬೂಬ್‌ಪಾಷಾ ಮೂಲಿಮನಿ ಹೇಳಿದರು.

Advertisement

ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಚಾರ ಸಂಕಿರಣ ಮತ್ತು ನಿರ್ದೇಶಕರ ಸಭೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಎನ್‌ಪಿಎಸ್‌ನೌಕರರು ಯಾವುದೇ ಕಾರಣಕ್ಕೂ ತಾವು ಬೇರೆ ಎಂದು ಭಾವಿಸಬಾರದು. ನಿಮ್ಮ ಪರವಾಗಿ ನಾವಿದ್ದೇವೆ. ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಅವಧಿಯಲ್ಲಿ ಎನ್‌ಪಿಎಸ್‌ ರದ್ದು ಪಡಿಸುವ ಕುರಿತು ಒಂದು ತಂಡವನ್ನು ರಚಿಸಿ ವರದಿ ನೀಡಲು ಹೇಳಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಿ ನೌಕರರು ಎಲ್ಲರೂ ಒಟ್ಟುಗೂಡಿ ಎನ್‌ಪಿಎಸ್‌ ವಿರುದ್ದ ಹೋರಾಟ ನಡೆಸಿ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತದೆ ಎಂದರು.

ನಮ್ಮ ರಾಜ್ಯ ಸರ್ಕಾರಿ ನೌಕರ ಸಂಘಕ್ಕೆ ಸುದೀರ್ಘ‌ ಇತಿಹಾಸವಿದೆ. 2020ಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 100 ವರ್ಷಗಳು ಪೂರೈಸಲಿದೆ. ಈಗಾಗಲೇ ರಾಜಕೀಯವಾಗಿ ಸಂಘವನ್ನು ಹೊಡೆಯಲು ಅನೇಕ ಬಾರಿ ಪ್ರಯತ್ನಿಸಲಾಗಿದೆ. ಆದರೂ ಕೂಡ 2019ರ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದು ಹೆಮ್ಮೆಯ ಸಂಗತಿ ಎಂದರು.

ನಂತರ ನೌಕರರ ಸಂಘದ ಕಲಬುರಗಿ ವಿಭಾಗದ ನಿಕಟಪೂರ್ವ ಮಾಜಿ ಅಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ ಮಾತನಾಡಿ, ಸಂಘಕ್ಕೆ ನಾಯಕತ್ವ ಬಹಳ ಮುಖ್ಯವಾಗಿದೆ. ಹೋರಾಟವು ಸಂಘವನ್ನು ಬಲಪಡಿಸುತ್ತದೆ. ನೌಕರರ ಮೇಲೆ ಹಲ್ಲೆಗಳು ನಡೆದಾಗ, 7ನೇ ವೇತನ ಜಾರಿಗೆ ಸಂಬಂಧಿಸಿದಂತೆ ಅನೇಕ ಹೋರಾಟಗಳನ್ನು ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು. ಸಂಘಟನೆ ತಾಲೂಕು ಅಧ್ಯಕ್ಷ ಶ್ರೀಶೈಲಗೌಡ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕುರ್ಡಿ, ಮಾಜಿ ಅಧ್ಯಕ್ಷ ಶಂಕರ ಕುರ್ಡಿ, ಹರೀಫ್‌ ಮೀಯಾ, ಪಕೀರಪ್ಪ ಓಲೇಕಾರ್‌, ಡಾ| ಚಂದ್ರಶೇಖರಸ್ವಾಮಿ, ರಾಜ್ಯ ಕಾರ್ಯದರ್ಶಿ ಪಿಡಿಒ ಪ್ರಸಾದ, ಪ್ರಧಾನ ಕಾರ್ಯದರ್ಶಿ ಮೋಹನಕುಮಾರ ಸ್ವಾಗತಿಸಿದರು, ಶಿಕ್ಷಕ ಹಂಪಣ್ಣ ಚಂಡೂರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next