Advertisement

ಅಪರಾಧ ತಡೆಗೆ ಸಹಕಾರ ಅಗತ್ಯ: ರಂಗಪ್ಪ

04:54 PM Jan 01, 2020 | Team Udayavani |

ಮಾನ್ವಿ: ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ ತಡೆಗೆ ಸಾರ್ವಜನಿಕರು ಪೊಲೀಸ್‌ ಇಲಾಖೆ ಜತೆಗೆ ಕೈಜೋಡಿಸಬೇಕು ಎಂದು ಪಿಎಸ್‌ಐ ರಂಗಪ್ಪ ದೊಡ್ಡಮನಿ ಹೇಳಿದರು.

Advertisement

ಪಟ್ಟಣದ ಬಸವ ವೃತ್ತದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾರ್ವಜನಿಕರಿಗೆ ತಿಳಿಯುವ ಅಪರಾಧ ಕೃತ್ಯಗಳ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರು ಬಹಿರಂಗಪಡಿಸುವುದಿಲ್ಲ. ಕೂಡಲೇ ಮಾಹಿತಿ ನೀಡುವುದರಿಂದ ಆಗುವ ಅನಾಹುತಗಳನ್ನು ತಡೆಯಬಹುದು ಎಂದರು.

ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಗಮನವಿರಲಿ. ಮನೆಗಲ್ಲಿ ಬೆಲೆಬಾಳುವ ಆಭರಣಗಳನ್ನು ಇಡಬೇಡಿ. ಕೆಲವರು ಕೆಳ ಮನೆಯಲ್ಲಿ ಆಭರಣಗಳನ್ನಿಟ್ಟು ಮಹಡಿ ಮೇಲೆ ಮಲಗಿಕೊಳ್ಳುತ್ತಾರೆ. ಇದನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವ ಕಳ್ಳರು ಕಳ್ಳತನ ಮಾಡುತ್ತಾರೆ. ಆದ್ದರಿಂದ ಆಭರಣಗಳನ್ನು ಬ್ಯಾಂಕ್‌ ಗಳಲ್ಲಿ ಸೇಫ್‌ಲಾಕರ್‌ನಲ್ಲಿ ಇಡುವುದು ಉತ್ತಮ ಎಂದರು.

ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಪೊಲೀಸ್‌ ಇಲಾಖೆ ಅಪರಾಧ ತಡೆ ಮಾಸ ಆಚರಿಸುತ್ತದೆ. ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಪಟ್ಟಣದ ವಿವಿಧೆಡೆ ಬ್ಯಾನರ್‌ಗಳನ್ನು ಹಾಕಿದ್ದು, ಅದರಲ್ಲಿ ಪೊಲೀಸ್‌ ಅಧಿಕಾರಿಗಳ ಮೊಬೈಲ್‌ ನಂಬರ್‌ ನೀಡಲಾಗಿದೆ. ಸಾರ್ವಜನಿಕರು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದರು. ಮುಖ್ಯಪೇದೆ ರಾಮಪ್ಪ, ಸಿಬ್ಬಂದಿ ಶಾಂತಕುಮಾರ, ಖಾಸಗಿ ವಾಹನ ಚಾಲಕರು, ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next