Advertisement

Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ

03:12 PM Sep 16, 2024 | Team Udayavani |

ಸಿನಿಮಾ ಮಂದಿಯ ಫೆವರೇಟ್‌ ವಿಷಯಗಳಲ್ಲಿ ದೆವ್ವ, ಭೂತ, ಮಂತ್ರವಾದಿ ಕೂಡಾ ಸೇರುತ್ತವೆ. ಅದೇ ಕಾರಣದಿಂದ ಹಾರರ್‌, ಥ್ರಿಲ್ಲರ್‌ ಸಿನಿಮಾಗಳು ಹೆಚ್ಚೆಚ್ಚು ತಯಾರಾಗುತ್ತವೆ. ಈ ಸಾಲಿಗೆ ಹೊಸ ಸೇರ್ಪಡೆ “ಮಾಂತ್ರಿಕ’. ವ್ಯಾನವರ್ಣ ಜಮ್ಮುಲ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

ದೆವ್ವ ಅನ್ನೋದು ಇದೆಯೋ,ಇಲ್ಲವೋ ಅಥವಾ ಅದೆಲ್ಲಾ ನಮ್ಮ ಭ್ರಮೆಯೋ ಎನ್ನುವುದರ ಸುತ್ತ ಸಾಗುವ ಕಥೆ ಈ ಚಿತ್ರದಲ್ಲಿದ್ದು, ರಾಧಿಕಾ ಮಾಲಿ ಪಾಟೀಲ ಹಾಗೂ ಮೈಥಿಲಿ ನಾಯಕ್‌ ನಾಯಕಿಯರಾಗಿ ನಟಿಸಿದ್ದಾರೆ.

ಟೀಸರ್‌ ಬಿಡುಗಡೆ ವೇಳೆ ಮಾತನಾಡಿದ ನಿರ್ಮಾಪಕಿ ಆಯನಾ, “ಜಗತ್ತಿನಲ್ಲಿ ಮಾಟ, ಮಂತ್ರ ಅನ್ನೋದು ಇದೆಯಾ ಎಂಬುದರ ರಿಯಾಲಿಟಿ ಬಗ್ಗೆ ಹೇಳುವ ಚಿತ್ರವಿದು. ಅದೇ ಕಾರಣಕ್ಕೆ ಈ ಸಿನಿಮಾ ನಿರ್ಮಾಣದಲ್ಲಿ ನಾನೂ ಜೊತೆಯಾದೆ. ದಸರಾ ವೇಳೆಗೆ ರಿಲೀಸ್‌ ಮಾಡುವ ಪ್ಲಾನ್‌ ಇದೆ’ ಎಂದರು.

“ಮಾನವ ದಿನದ 24ಗಂಟೆಯೂ ಭಯದಲ್ಲೇ ಬದುಕುತ್ತಿದ್ದಾನೆ. ಮೊದಲು ಅ ಭಯವನ್ನು ನಮ್ಮ ಮನಸಿನಿಂದ ತೆಗೆದುಹಾಕಿ ವಾಸ್ತವಕ್ಕೆ ಬರಬೇಕು ಎಂಬುದನ್ನು ಹೇಳಿದ್ದೇನೆ’ ಎನ್ನುವುದು ನಿರ್ದೇಶಕರ ಮಾತು.

ನಿರ್ಮಾಣದಲ್ಲಿ ಕೈ ಜೋಡಿಸಿದ ದುಶ್ಯಂತ್‌ ಗೋಲ್ಡ್, ಬೆಳ್ಳಿದೀಪ ಗೋವಿಂದ್‌, ದೇವೇಂದ್ರ, ಮುಂಜಾನೆ ಮಂಜು, ಜಗದೀಶ್‌ ಎಲ್ಲರೂ ಚಿತ್ರದ ಬಗ್ಗೆ ಮಾತನಾಡಿದರು. ಕೃಷ್ಣ ಸಂಕುಲ ಬ್ರಾಂಡಿಂಗ್‌ ಪಿಕ್ಚರ್ಸ್‌ ಲಾಂಛನದಲ್ಲಿ ನಿರ್ಮಾಣವಾಗಿ ರುವ ಈ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಇನ್ನು ಈ ಚಿತ್ರಕ್ಕೆ ನಿರ್ದೇಶಕರೇ ಸಂಕಲನ ಮಾಡಿದ್ದು, ಸ್ಟಾಲಿನ್‌ ಅವರ ಸಂಗೀತವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.