Advertisement
ಆಂಧ್ರ ಸರಕಾರದ ಮಾರ್ಗ ಸೂಚಿ ಗಳನ್ವಯ ದರ್ಶನಕ್ಕೆ ಅನುವು ಮಾಡಿ ಕೊಡಲಾಗಿದೆ. ಆರೋಗ್ಯ ಇಲಾಖೆ ಮಾರ್ಗ ಸೂಚಿ ಪ್ರಕಾರ ದರ್ಶನಕ್ಕೆ ಅವ ಕಾಶ ಕಲ್ಪಿಸಿದ್ದು, ಮಠದ ಪ್ರಾಕಾರದಲ್ಲಿ ಪ್ರದಕ್ಷಿಣೆಗೆ ಅವಕಾಶ ಇಲ್ಲ. ಭಕ್ತರು ಸಾಮಾಜಿಕ ಅಂತರ ಕಾಯ್ದು ಕೊಂಡು ರಾಯರ ಮೂಲ ಬೃಂದಾವನ ದರ್ಶನ ಪಡೆಯಬಹುದು. ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ, ಸಂಜೆ 4ರಿಂದ ರಾತ್ರಿ 9ರ ವರೆಗೆ ದರ್ಶನಕ್ಕೆ ಅವಕಾಶ ಇದೆ. ಜತೆಗೆ ವಿವಿಧ ಊರುಗಳಿಂದ ಬರುವ ಭಕ್ತರಿಗೆ ಮಠದ ವಸತಿಗೃಹಗಳಲ್ಲಿ ವಾಸ್ತವ್ಯಕ್ಕೂ ಅವಕಾಶ ಕಲ್ಪಿಸಲಾಗಿದೆ.
– ಶ್ರೀ ಸುಬುಧೇಂದ್ರತೀರ್ಥರು, ರಾಘವೇಂದ್ರ ಮಠದ ಪೀಠಾಧಿಪತಿ