Advertisement

ಐಎಂಎ ವಂಚಕ ಮನ್ಸೂರ್‌ ಖಾನ್‌ ಬೆಂಗಳೂರಿಗೆ

09:24 AM Jul 21, 2019 | Team Udayavani |

ಬೆಂಗಳೂರು: ಬಹುಕೋಟಿ ಐಎಂಎ ಜ್ಯುವೆಲ್ಲರಿ ವಂಚಕ ಮೊಹಮ್ಮದ್‌ ಮನ್ಸೂರ್‌ ಖಾನ್‌ ನನ್ನು ಶನಿವಾರ ಬೆಂಗಳೂರಿಗೆ ಕರೆತರಲಾಗಿದೆ. ಶಾಂತಿ ನಗರದ ಜಾರಿ ನಿರ್ದೇಶನಾಲಯ ಕಚೇರಿಗೆ ಮನ್ಸೂರ್‌ ಖಾನ್‌ ಅಧಿಕಾರಿಗಳು ಕರೆತಂದಿದ್ದಾರೆ.

Advertisement

ಶುಕ್ರವಾರ ಮುಂಜಾನೆ 3 ಗಂಟೆಯ ವೇಳೆಗೆ ದುಬೈನಿಂದ ಬಂದಿದ್ದ ಮನ್ಸೂರ್‌ ಖಾನ್‌ ನನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ ಐಟಿ ಮತ್ತು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಶುಕ್ರವಾರ ದೆಹಲಿ ನ್ಯಾಯಾಲಯದ ಮುಂದೆ ಮನ್ಸೂರ್‌ ನನ್ನು ಹಾಜರುಪಡಿಸಲಾಗಿತ್ತು. ಶನಿವಾರ ಮುಂಜಾನೆ ವಿಮಾನ ಮೂಲಕ ಬೆಂಗಳೂರಿಗೆ ಕರೆದು ತರಲಾಗಿದೆ.

ಮನ್ಸೂರ್‌ ಖಾನ್‌ ತನ್ನ ಸಂಸ್ಥೆ ಐಎಂಎ ಜುವೆಲ್ಲರಿಯಲ್ಲಿ ಸಾವಿರಾರು ಜನರಿಂದ ಹೂಡಿಕೆಯಾದ ಕೋಟ್ಯಾಂತರ ಹಣದೊಂದಿಗೆ ಜೂನ್‌ ಎಂಟರಂದು ದೇಶ ಬಿಟ್ಟು ಪರಾರಿಯಾಗಿದ್ದ. ನಂತರ ಆಡಿಯೋ ಬಿಡುಗಡೆ ಮಾಡಿದ್ದ ಮನ್ಸೂರ್‌ ಹಲವು ಪ್ರಭಾವಿ ವ್ಯಕ್ತಿಗಳ ಬಗ್ಗೆ ಉಲ್ಲೇಖಿಸಿದ್ದ.


ನಂತರದ ಬೆಳವಣಿಗೆಯಲ್ಲಿ “ತಾನು ಭಾರತಕ್ಕೆ ಬರಲು ಸಿದ್ದ. ಆದರೆ ನನಗೆ ಜೀವ ಭಯವಿದೆ. ಪೊಲೀಸರು ನನಗೆ ಭದ್ರತೆ ನೀಡುವ ಭರವಸೆ ನೀಡಿದರೆ ನಾನು ಭಾರತಕ್ಕೆ ಬರುತ್ತೇನೆ” ಎಂಬ ಹೇಳಿಕೆಯುಳ್ಳ ವಿಡಿಯೋ ಬಿಡುಗಡೆ ಮಾಡಿದ್ದ. ಅದರಂತೆ ಶುಕ್ರವಾರ ಮುಂಜಾನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮನ್ಸೂರ್‌ ನನ್ನು ವಿಶೇಷ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next