ನವದೆಹಲಿ: ದಿನಕ್ಕೆ ಅದೆಷ್ಟೋ ರಸ್ತೆ ಅಪಘಾತಗಳು ನಡಯುತ್ತವೆ ಅದರಲ್ಲಿ ಕೆಲವೊಂದು ದೊಡ್ಡ ವಾಹನಗಳ ಚಾಲಕರ ತಪ್ಪೂ ಇರುತ್ತದೆ ಇನ್ನು ಕೆಲವು ಸಲ ಸಣ್ಣ ವಾಹನದ ಚಾಲಕರ ತಪ್ಪೂ ಇರುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಈ ವಿಡಿಯೋದಲ್ಲಿ ಯಾರ ತಪ್ಪು ಇತ್ತೆಂದು ನೀವೇ ಹೇಳಬೇಕು.
ಟ್ವಿಟರ್ ನಲ್ಲಿ ಹಾಕಲಾದ ವಿಡಿಯೋ ದಲ್ಲಿ ಬೈಕ್ ಸವಾರನೋರ್ವ ರಸ್ತೆಯಲ್ಲಿ ಯಾವ ವಾಹನ ಬರುತ್ತಿದೆ ಎಂಬುದನ್ನು ನೋಡದೆಯೇ ಮುಖ್ಯ ರಸ್ತೆಗೆ ಪ್ರವೇಶ ಮಾಡಿದ್ದಾನೆ ಅಷ್ಟೋತ್ತಿಗಾಗಲೇ ಮುಖ್ಯ ರಸ್ತೆಯಲ್ಲಿ ಟ್ರಕ್ ವೇಗವಾಗಿ ಬರುತ್ತಿದೆ ಇನ್ನೇನು ಬೈಕ್ ಗೆ ಡಿಕ್ಕಿ ಹೊಡೆಯಿತು ಎನ್ನುವಷ್ಟರಲ್ಲಿ ಟ್ರಕ್ ಚಾಲಕ ಎಡಕ್ಕೆ ತಿರುಗಿಸಿದ್ದಾನೆ ಆದರೆ ಅದೃಷ್ಟವಶಾತ್ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ, ಪಾಪ ಬೈಕ್ ಸವಾರನ ಜೀವ ಉಳಿಸಲು ಎಡಕ್ಕೆ ತಿರುಗಿಸಿದ ಟ್ರಕ್ ಚಾಲಕನ ಸ್ಥಿತಿ ಏನಾಗಿದೆ ಎಂಬುದು ಮಾತ್ರ ತಿಳಿದು ಬಂದಿಲ್ಲ, ವಿಡಿಯೋದಲ್ಲಿ ಟ್ರಕ್ ಎಡಕ್ಕೆ ಚಲಿಸಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿರುವುದು ಕಾಣುತ್ತದೆ ಆದರೆ ಆತನ ಸ್ಥಿತಿ ಏನಾಗಿದೆ ಎಂಬುದು ಮಾತ್ರ ಗೊತ್ತಾಗಿಲ್ಲ.
ಹೆಚ್ಚಿನ ಸಲ ಅಪಘಾತವಾದಾಗ ನಾವು ದೊಡ್ಡ ವಾಹನಗಳದ್ದೇ ತಪ್ಪು ಎಂದು ವಾದ ಮಾಡುತ್ತೇವೆ ಆದರೆ ಎಲ್ಲಾ ಸಂದರ್ಭದಲ್ಲೂ ಆ ರೀತಿ ಇರುವುದಿಲ್ಲ ಕೆಲವೊಂದು ಸಲ ಸಣ್ಣ ವಾಹನ ಸವಾರರ ಸಣ್ಣ ಎಡವಟ್ಟಿನಿಂದ ದೊಡ್ಡ ಮಟ್ಟದ ಅಪಘಾತಗಳು ಸಂಭವಿಸುತ್ತವೆ. ಅಲ್ಲದೆ ಇಲ್ಲಿ ಬೈಕ್ ಸವಾರ ಮುಖ್ಯ ರಸ್ತೆಗೆ ಪ್ರವೇಶಿಸುವಾಗ ಮುಖ್ಯ ರಸ್ತೆಯಲ್ಲಿ ಯಾವುದಾದರೂ ವಾಹನ ಇದೆಯೇ ಎಂಬುದು ನೋಡಿಕೊಂಡು ಮುಖ್ಯ ರಸ್ತೆಗೆ ಪ್ರವೇಶಿಸಬೇಕು ಆದರೆ ಇಲ್ಲಿ ಬೈಕ್ ಸವಾರ ಅದ್ಯಾವುದನ್ನೂ ಗಮನಿಸದೆ ನೇರವಾಗಿ ಮುಖ್ಯ ರಸ್ತೆಗೆ ಪ್ರವೇಶಿಸಿದ್ದಾನೆ.
ಇದನ್ನೂ ಓದಿ: ಕುರುಗೋಡು: ಆರೋಗ್ಯ ಕೇಂದ್ರದ ಶುಶ್ರೂಷಕಿ ಮನೆ ಮುಂದೆ ವಿಕೃತ ವಾಮಾಚಾರ