ಲುಸಾನ್ನೆ: ಭಾರತದ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ “ಇಂಟರ್‌ನ್ಯಾಶನಲ್ ಹಾಕಿ ಫೆಡರೇಶನ್’ (ಎಫ್ಐಎಚ್) ನೀಡುವ ಪ್ರತಿಷ್ಠಿತ “ವರ್ಷದ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು 2019ನೇ ಸಾಲಿನ ಶ್ರೇಷ್ಠ ಸಾಧಕನಾಗಿ ಮೂಡಿಬಂದಿದ್ದಾರೆ.
ಮಿಡ್‌ಫಿàಲ್ಡರ್ ಆಗಿರುವ ಮನ್‌ಪ್ರೀತ್ ಸಿಂಗ್ ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಆಟಗಾರ ಎಂಬುದು ವಿಶೇಷ. 1999ರಿಂದ ಎಫ್ಐಎಚ್ ಈ ಪ್ರಶಸ್ತಿಗಳನ್ನು ನೀಡುತ್ತ ಬರುತ್ತಿದೆ. 2019ರ ಋತುವಿನಲ್ಲಿ ಭಾರತ ತಂಡಕ್ಕೆ ಟೋಕಿಯೊ ಒಲಿಂಪಿಕ್ ಅರ್ಹತೆ ಕೊಡಿಸುವಲ್ಲಿ ಮನ್‌ಪ್ರೀತ್ ಬಹು ಮುಖ್ಯ ಪಾತ್ರ ವಹಿಸಿದ್ದರು.
ಪ್ರಶಸ್ತಿ ಸ್ಪರ್ಧೆಯಲ್ಲಿ ಮನ್‌ಪ್ರೀತ್ ಸಿಂಗ್ ಬೆಲ್ಜಿಯಂನ ಆರ್ಥರ್ ವಾನ್ ಡೊರೆನ್ ಮತ್ತು ಆರ್ಜೆಂಟೀನಾದ ಲುಕಾಸ್ ವಿಲ್ಲ ಅವರನ್ನು ಹಿಂದಿಕ್ಕಿದರು. ಇವರಿಬ್ಬರು ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನಿಯಾದರು. ಮನ್‌ಪ್ರೀತ್ ಶೇ. 35.2ರಷ್ಟು ಮತ ಪಡೆದರು. ಡೊರೆನ್‌ಗೆ ಶೇ. 19.7, ವಿಲ್ಲ ಅವರಿಗೆ ಶೇ. 16.5 ಮತ ಲಭಿಸಿತು. 2011ರಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ ಮನ್‌ಪ್ರೀತ್ ಸಿಂಗ್ ಕಳೆದೆರಡೂ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈವರೆಗೆ 260 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.
ತಂಡದ ಆಟಗಾರರಿಗೆ ಅರ್ಪಣೆ
ತಮ್ಮ ಈ ಪ್ರಶಸ್ತಿಯನ್ನು ಮನ್‌ಪ್ರೀತ್ ಸಿಂಗ್ ತಂಡದ ಆಟಗಾರರಿಗೆ ಅರ್ಪಿಸಿದ್ದಾರೆ. ಅವರ ಸಹಾಯವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
ಯುವ ಮಿಡ್‌ಫಿàಲ್ಡರ್ ವಿವೇಕ್ ಸಾಗರ್ ಪ್ರಸಾದ್ ಮತ್ತು ವನಿತಾ ಸ್ಟ್ರೈಕರ್ ಲಾಲ್ರೆಮಿÕಯಾಮಿ 2019ರ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ಭಾಜನರಾಗಿದ್ದಾರೆ.