ಕೊರೊನಾ ಜಗತ್ತನ್ನು ಆವರಿಸಿ ಒಂದು ವರ್ಷಕ್ಕೂ ಜಾಸ್ತಿಯಾಗಿದೆ. ಈ ವೈರಸ್ ಅನೇಕ ಕುಟುಂಬಗಳು ನಲುಗಿ ಹೋಗಿವೆ. ಅವುಗಳಲ್ಲಿ ಕನ್ನಡ ಸಿನೆಮಾ ಕಲಾವಿದರ ಕುಟುಂಬವು ಹೊರತಾಗಿಲ್ಲ. ಹೀಗಾಗಿ ಅನೇಕರು ಸಿನಿಮಾ ಕಲಾವಿದರಿಗೆ,ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನುರಂಜನ್ ಕೂಡಾ ಸೇರಿದ್ದಾರೆ.
ತಮ್ಮ ನಟನೆಯ “ಮುಗಿಲ್ ಪೇಟೆ’ ಸಿನಿಮಾದಲ್ಲಿಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ಖಾತೆಗೂ 5000 ಹಣವನ್ನು ಹಾಕುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಇದನ್ನೂ ಓದಿ:ಬಾಲಿವುಡ್‌ನಲ್ಲಿ 7 ವರ್ಷ ಪೂರ್ತಿ ಮಾಡಿದ ಟೈಗರ್ ಶ್ರಾಫ್
ಈ ಬಗ್ಗೆ ಮಾತನಾಡುವ ಮನುರಂಜನ್, “ಮನೆಯಲ್ಲಿದ್ದರೆ ಸುರಕ್ಷಿತವಾಗಿರುತ್ತೇವೆಂದು ನಾವೆಲ್ಲ ಭಾವಿಸಿರುತ್ತೇವೆ. ಆದರೆ ನನ್ನ ಅನೇಕ ಕಲಾವಿದ ಸ್ನೇಹಿತರು ಈ ಕೊರೊನಾ ಸಂದರ್ಭದಲ್ಲಿ ಜೀವನ ನಡೆಸುವುದಕ್ಕೆ ಕಷ್ಟ ಪಡುತ್ತಿದ್ದಾರೆ. ಹಾಗಾಗಿಈಸಮಯದಲ್ಲಿ ನನ್ನ ಸ್ನೇಹಿತರ ನೆರವಿಗೆ ನಿಲ್ಲಬೇಕಾಗಿರೋದು ನನ್ನ ಕರ್ತವ್ಯ. ಸದ್ಯ ಮುಗಿಲ್ ಪೇಟೆ ಸಿನಿಮಾದಲ್ಲಿ ನಾನು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದೇನೆ. ನನ್ನ ಈ ಒಂದು ವರ್ಷದ ಪ್ರಾಜೆಕ್ಟ್ ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಗಿಲ್ ಪೇಟೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ 5000 ಹಣವನ್ನು ಅವರ ಖಾತೆಗೆ ಹಾಕುವ ನಿರ್ಣಯ ಮಾಡಿದ್ದೇನೆ. ಈ ಚಿತ್ರವನ್ನು ಭರತ್ ನಾವುಂದ ನಿರ್ದೇಶಿಸಿದ್ದು, ರಕ್ಷ ವಿಜಯಕುಮಾರ್ ನಿರ್ಮಿಸಿದ್ದಾರೆ. ಇವರು ಕೂಡಾ ತಮ್ಮ ತಂಡದವರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದರು.