Advertisement

ಕ್ಯಾನ್ಸರ್‌ ಕಾರಣಕ್ಕೆ ರಾಜೀನಾಮೆ ಸರಿಯಲ್ಲ

09:10 AM Dec 14, 2018 | Team Udayavani |

ಪಣಜಿ: ಕ್ಯಾನ್ಸರ್‌ ಇದೆ ಎಂಬ ಕಾರಣಕ್ಕೆ ಗೋವಾ ಸಿಎಂ ಮನೋಹರ ಪಾರೀಕರ್‌ ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಗೋವಾ ಸರಕಾರದ ಪರ ವಕೀಲರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಕ್ಯಾನ್ಸರ್‌ ಇದ್ದರೂ ಆ್ಯಪಲ್‌ ಸಂಸ್ಥೆಯ ಮುಖ್ಯಸ್ಥ ಸ್ಟೀವ್‌ ಜಾಬ್ಸ್ ತಮ್ಮ ಮನೆಯನ್ನೇ ಕಚೇರಿಯನ್ನಾಗಿಸಿಕೊಂಡು ಕರ್ತವ್ಯ ನಿರ್ವಹಿಸಿದ್ದರು ಎಂದು ಉದಾಹರಣೆಯನ್ನೂ ನೀಡಿದ್ದಾರೆ. 

Advertisement

ಪರ್ರಿಕರ್‌ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ಒಪ್ಪಿಸುವಂತೆ ಆದೇಶಿಸಿರುವುದು ಪರ್ರಿಕರ್‌ ಮೂಲಭೂತ ಹಕ್ಕು ಮತ್ತು ಗೌಪ್ಯತೆಯ ಹಕ್ಕಿಗೆ ಧಕ್ಕೆ ಉಂಟು ಮಾಡುತ್ತದೆ ಎಂದೂ ಅಡ್ವೊಕೇಟ್‌ ಜನರಲ್‌ ದತ್ತಾಪ್ರಸಾದ್‌ ಲವಾಂಡೆ ಹೇಳಿದ್ದಾರೆ. ಮುಖ್ಯಮಂತ್ರಿ ಪಾರೀಕರ್‌ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಿಯತವಾಗಿ ಸಭೆ ನಡೆಸುತ್ತಿದ್ದಾರೆ. ಆಡಳಿತವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಕೋರ್ಟ್‌ಗೆ ವಕೀಲರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next