Advertisement

ಮಣ್ಣಪಳ್ಳಕ್ಕೆ ಹಸಿರುಡಿಸುವ ಕೆಲಸ

07:10 AM Jun 09, 2018 | |

ಮಣಿಪಾಲ: ಮಣಿಪಾಲದ ಪ್ರಮುಖ ತಾಣ, ಮಣ್ಣಪಳ್ಳ ಕೆರೆಯ ಸುತ್ತಲಿನ ಪರಿಸರವನ್ನು ಮತ್ತಷ್ಟು ಹಸಿರೀಕರಣಗೊಳಿಸುವ ಸಣ್ಣ ಪ್ರಯತ್ನವೊಂದು ಇದೀಗ ನಡೆಯುತ್ತಿದೆ. ಈ ಮೂಲಕ ಮತ್ತಷ್ಟು ಸಸಿಗಳಿಗೆ ಆಶ್ರಯಕೊಟ್ಟು, ಪ್ರಕೃತಿಯನ್ನು ಸುಂದರಗೊಳಿಸುವ ಕೆಲಸ ಇದಾಗಿದೆ.  

Advertisement

ಸುಮಾರು ನೂರು ಎಕ್ರೆ  ವಿಸ್ತೀರ್ಣ ಹೊಂದಿರುವ  ಈ ಕೆರೆಯ ದಂಡೆಯಲ್ಲಿ ಸುಮಾರು 350  ಬಗೆಯ ಗಿಡಗಳನ್ನು ನೆಡುವುದರ ಹಸಿರು ವೃದ್ಧಿಯ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದ್ದು, ಇದಕ್ಕೆ ಗುರುವಾರ ಚಾಲನೆ ಸಿಕ್ಕಿದೆ. 

ಮಣ್ಣಪಳ್ಳ ಕೆರೆ ಸುತ್ತ ಮುಂಗಾರು ಆರಂಭದಲ್ಲಿ ಗಿಡ ನೆಡುವ ಕಾರ್ಯ ನಡೆಯುತ್ತಿದ್ದು, ಇದರ ಜವಾಬ್ದಾರಿಯನ್ನು ಉಡುಪಿ ನಗರ ಸಭೆ, ರೋಟರಿ ಕ್ಲಬ್‌ ಹೊತ್ತುಕೊಳ್ಳುತ್ತದೆ. ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡುವ ಹೊತ್ತಿನಲ್ಲಿ ಅರಣ್ಯಾಧಿಕಾರಿಗಳಾದ ದಯಾನಂದ ಮತ್ತು ಕೇಶವ ಪೂಜಾರಿ, ಉಡುಪಿ ನಗರಸಭೆಯ ಮುಖ್ಯಾಧಿಕಾರಿ ನರಸಿಂಹ ನಾಯಕ್‌,ರೋಟರಿ ಕ್ಲಬ್‌ನ ಅಧ್ಯಕ್ಷೆ ತಾರಾ ಶೆಟ್ಟಿ,  ಸದಸ್ಯರಾದ ಜಾಹ್ನವಿ, ಸವಿತಾ ಭಟ್‌ ಹಾಗೂ ಸುಂದರ್‌ ಶೆಟ್ಟಿ ಉಪಸ್ಥಿತರಿದ್ದರು. 

ಕಾಡು ಉಳಿಸೋಣ 
ಕಾಡು ನಾಶವಾದರೆ ಮಳೆ ಸರಿಯಾಗಿ ಆಗುವುದಿಲ್ಲ. ಇದರಿಂದ ಬೆಳೆಯೂ ಇಲ್ಲ ಇದು ಒಂದಕ್ಕೊಂದು ಕೊಂಡಿ ಇದ್ದಂತೆ. ನಮ್ಮಿಂದ ನಾಶವಾಗುತ್ತಿರುವ ಪ್ರಕೃತಿಯನ್ನು ನಾವೇ ಕಟ್ಟಬೇಕು. 
– ದಯಾನಂದ್‌, ಅರಣ್ಯಾಧಿಕಾರಿ

 ಪರಿಸರ ಆರೋಗ್ಯಕರ
16 ವರ್ಷದ ಸತತ ಪ್ರಯತ್ನದಿಂದ  ಬಂಜರು ಭೂಮಿಯಂತಿದ್ದ ಮಣಿಪಾಲದ ಮಣ್ಣಪಲ್ಲ ಕೆರೆ ಗಿಡ-ಮರಗಳಿಂದ ಹಚ್ಚ ಹಸಿರಿನ ರೂಪು ಪಡೆದಿದೆ.ಯಾವುದೇ ಪ್ರದೇಶವಾದರೂ ಹಸುರಿನ ಸೊಬಗು ಹೊಂದಿದ್ದರೆ ಅದರ ಸೌಂದರ್ಯ ದುಪ್ಪಟ್ಟಾಗುತ್ತದೆ ಹಾಗೂ ಸುತ್ತಮುತ್ತಲಿನ ಪರಿಸರವೂ ಆರೋಗ್ಯಕರವಾಗಿ ಕಾಣುತ್ತದೆ.
– ನರಸಿಂಹ ನಾಯಕ್‌ 
ಉಡುಪಿ ನಗರ ಸಭೆಯ ಮುಖ್ಯಸ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next