Advertisement

ರೈತರ ಸಾಲ ಮನ್ನಾಕ್ಕೆ ಆಗ್ರಹ: ಪ್ರತಿಭಟನೆ

03:54 PM Feb 18, 2017 | Team Udayavani |

ದೊಡ್ಡಬಳ್ಳಾಪುರ: ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಹಾಗೂ ಬರಗಾಲ ಪರಿಹಾರಗಳಿಗಾಗಿ ಕೃಷಿ ಯ ಕಂಪನೀಕರಣವನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿ ಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ, ರೈತರ ಸಾಲ ಮನ್ನಾ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಯೋಜನೆ ಪ್ರಸ್ತಾಪವಿಲ್ಲ. ಈ ಬಜೆಟ್‌ ಉದ್ಯಮಿಗಳ ಪರವಾಗಿದೆಯೇ ಹೊರತು ರೈತರ, ಕಾರ್ಮಿಕರ ಪರವಾ ಗಿಲ್ಲ ಎಂದು ದೂರಿದರು.

ದೇಶದಲ್ಲಿ 8500 ಲಕ್ಷ ಕೋಟಿ ರೂ. ಉದ್ಯಮಿಗಳು ತೀರಿಸಲಾಗದ ಸಾಲ ಎಂದು ಘೋಷಣೆ ಮಾಡಿ ದ್ದಾರೆ. ಆದರೆ, ದೇಶದಲ್ಲಿ ರೈತರ ಸಾಲ ಇರುವುದೇ 2 ಲಕ್ಷ ಕೋಟಿ ರೂ., ರೈತರ ಖಾಸಗಿ, ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇರುವ ಸಾಲವನ್ನು ಮನ್ನಾ ಮಾಡದಿದ್ದರೆ ಕೃಷಿಗೆ ಉಳಿಗಾಲವೇ ಇಲ್ಲ. ಬ್ಯಾಂಕ್‌ಗಳಲ್ಲಿ ರೈತರಿಗೆ ಹೆಚ್ಚು ಸಾಲ ನೀಡಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.

ಆದರೆ, ಸಣ್ಣ ಹಿಡುವಳಿದಾರ ರೈತರಿಗೆ ಬ್ಯಾಂಕುಗಳಲ್ಲಿ ಸಾಲ ನೀಡುವುದಿಲ್ಲ, ಸಾಲ ಪಡೆಯುವ ಚೈತನ್ಯವೂ ರೈತರಿಗೆ ಇಲ್ಲದಾಗಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಪ್ರಾಂತ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಕಾರ್ಯದರ್ಶಿ ಸಿ.ಎಚ್‌.ರಾಮಕೃಷ್ಣ, ಸಿಪಿಎಂ ತಾಲೂಕು ಕಾರ್ಯದರ್ಶಿ ರುದ್ರಾ ರಾಧ್ಯ, ತಾಲೂಕಿನ ರೈತ ಸಂಘದ ಮುಖಂಡರು, ಕೃಷಿಕರು ಮತ್ತಿತರರು ಭಾಗವಹಿಸಿದ್ದರು.

ಪ್ರಾಂತ ರೈತ ಸಂಘದ ಪ್ರಮುಖ ಬೇಡಿಕೆಗಳು
* ರೈತರ, ಕೂಲಿಕಾರರ ಮತ್ತು ಕಸುಬುದಾರರ ಎಲ್ಲಾ ರೀತಿಯ ಸಹಕಾರ ಸಂಘ, ಖಾಸಗಿ ಸಾಲ ಮನ್ನಾ ಮಾಡಬೇಕು.

Advertisement

* ಸ್ತ್ರೀಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಾಲ, ಎಸ್ಸಿ, ಎಸ್ಟಿ, ಬಿಸಿಎಂ, ದೇವದಾಸಿ ಪುನರ್‌ವಸತಿ ನಿಗಮದಲ್ಲಿ ಮಾಡಿರುವ ಸಾಲ ಮನ್ನಾ ಮಾಡಬೇಕು.

* ಅಗತ್ಯ ಬೆಳೆ ವಿಮೆ ಮತ್ತು ಬೆಳೆ ಪರಿಹಾರಕ್ಕಾಗಿ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರವನ್ನು ವಿತರಿಸಬೇಕು.

* ಕೃಷಿ ಕೂಲಿಕಾರರಿಗೆ ಉದ್ಯೋಗ ಪರಿಹಾರವಾಗಿ ಕುಟುಂಬಕ್ಕೆ ತಲಾ ಕನಿಷ್ಠ 25 ಸಾವಿರ ರೂ., ಉದ್ಯೋಗ ಖಾತ್ರಿ ಯೋಜನೆ ಮಾನವ ಕೆಲಸ 200 ದಿನಗಳಿಗೆ ವಿಸ್ತರಣೆ ಮಾಡಬೇಕು.

* 600 ರೂ.ಗೆ ಕೂಲಿ ಹೆಚ್ಚಳ, ರೈತರೂ ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳಿಗೂ ಅನ್ವಯಿಸಬೇಕು.

* ಎಲ್ಲಾ ಬಡವರಿಗೆ ಉಚಿತ ಪಡಿತರ ಇರುವ ರೇಷನ್‌ ಸರಬರಾಜು ಮಾಡಬೇಕು, ನಗದು ವರ್ಗಾವಣೆ ಅಥವಾ ಕೂಪನ್‌ ಪದ್ಧತಿ ಕೈಬಿಡಬೇಕು.

* ಆಧಾರ್‌ ಸಂಖ್ಯೆ ಕಡ್ಡಾಯವಾಗಿ ಪಡೆಯುವ ಪದ್ಧತಿ ಕೈಬಿಡಬೇಕು, ಪ್ರತಿ ಗ್ರಾಪಂನಲ್ಲಿ ಮೇವಿನ ಬ್ಯಾಂಕ್‌ ತೆರೆಯಬೇಕು ಮತ್ತು ಉಚಿತವಾಗಿ ನೀಡಬೇಕು.

* ಗ್ರಾಮ ಹಾಗೂ ನಗರಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಮುಂದಿನ ಬೆಳೆಗೆ ಬೀಜ, ಗೊಬ್ಬರ, ಕ್ರಿಮಿನಾಶಕ ಉಚಿತ ವಿತರಣೆ ಮಾಡಬೇಕು.

* ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌, ಸಾರ್ವಜನಿಕ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮುಂದಿನ ವರ್ಷದ ಎಲ್ಲಾ ಶಿಕ್ಷಣ ಶುಲ್ಕ ಮನ್ನಾ ಮಾಡಬೇಕು.

* ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ, ಗ್ರಾಮಗಳ ಎಲ್ಲಾ ವಸತಿ ಹೀನರಿಗೆ ಉಚಿತ ನಿವೇಶನ, ಮನೆ ನೀಡಬೇಕು.

* ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ 6 ಗಂಟೆ ತ್ರಿಪೇಸ್‌ ವಿದ್ಯುತ್‌ ಪೂರೈಕೆ, 18 ವರ್ಷ ಒಳಗಿನ ಅಂಗವಿಕಲರಿಗೂ ಮಾಶಾಸನ ನೀಡಬೇಕು.

* ಬಯಲುಸೀಮೆ ಜಿಲ್ಲೆಗಳ ಬರ ನೀಗಿಸಲು ಡಾ.ಪರಮಶಿವಯ್ಯ ವರದಿಯಂತೆ ನೀರಾವರಿ ಯೋಜನೆ ಜಾರಿ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next