Advertisement
ಸೆಕೆಂಡ್‌ಹ್ಯಾಂಡ್ ವಾಹನಗಳ ಮಾರಾಟ ಮಾಡುತ್ತಿರುವ ವ್ಯಕ್ತಿಯೊಬ್ಬರು ಸಾರ್ವ ಜನಿಕ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಿದ್ದು, ಇದರಿಂದಾಗಿ ರಸ್ತೆಯಲ್ಲಿ ತೆರಳುವವರಿಗೆ ಸಮಸ್ಯೆಯಾಗುತ್ತಿದೆ. ಜತೆಗೆ ಕಾರುಗಳ ಪಾರ್ಕಿಂಗ್‌ನಿಂದಾಗಿ ಬೀದಿ ನಾಯಿಗಳ ಹಾವುಗಳ ಕಾಟವಿದ್ದು, ನಡೆದಾಡುವವರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಆತಂಕಕ್ಕೆ ಕಾರಣವಾಗಿದೆ.
Related Articles
ಈ ರಸ್ತೆಯ ಮೂಲಕ ಹಲವಾರು ಮಕ್ಕಳು ಶಾಲೆಗಳಿಗೆ ತೆರಳುತ್ತಾರೆ. ಹಿರಿಯನಾಗರಿಕರು ಈ ರಸ್ತೆಯಲ್ಲಿ ವಾಕಿಂಗ್ ನಡೆಸುತ್ತಾರೆ. ಅತ್ತಿಂದಿತ್ತ ಓಡಾಡುತ್ತಾರೆ. ಬೀದಿ ನಾಯಿಗಳ ಕಾಟದಿಂದಾಗಿ ಇಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳನ್ನು ನಾಯಿ ಅಟ್ಟಿಸಿಕೊಂಡು ಬಂದಿರುವ ಘಟನೆಯೂ ಕೂಡ ವರದಿಯಾಗಿದೆ. ಕೆಲವು ಸಮಯದ ಹಿಂದೆ ಇಲ್ಲಿನ ವೃದ್ಧರೊಬ್ಬರಿಗೆ ಬೀದಿನಾಯಿ ದಾಳಿ ಮಾಡಿತ್ತು. ಗುಜರಿ ಕಾರುಗಳ ಮರೆಯಲ್ಲಿ ನಾಯಿಗಳು ಆಶ್ರಯ ಪಡೆಯುತ್ತಿದ್ದು, ಸಾರ್ವಜನಿಕರು ನಡೆದುಕೊಂಡು ಹೋಗುವ ವೇಳೆ ಏಕಾಏಕಿ ದಾಳಿ ನಡೆಸುತ್ತವೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಗುಜರಿ ಕಾರುಗಳನ್ನು ನಿಲ್ಲಿಸಿರುವ ಜಾಗದಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿದ್ದು ಬೀದಿ ನಾಯಿಗಳಿಗೆ ಆಹಾರದ ಜತೆಗೆ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ಮತ್ತೂಂದೆಡೆ ಸಾಂಕ್ರಾಮಿಕ ರೋಗದ ಭೀತಿಯೂ ಕೂಡ ಎದುರಾಗಿದೆ. ಪಾಲಿಕೆ ಹಾಗೂ ಸಂಬಂಧಿಸಿದವರು ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಆಗ್ರಹವಾಗಿದೆ.
Advertisement
ಬರ್ಕೆಲೇನ್‌ನಲ್ಲಿ ಗುಜರಿ ವಾಹನಗಳ ಪಾರ್ಕಿಂಗ್‌ನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯ ಕುರಿತು ಗಮನಕ್ಕೆ ಬಂದಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಆರ್‌ಟಿಒ ಕಚೇರಿಗೆ ಲಿಖೀತ ದೂರು ನೀಡಿದ್ದೇನೆ.– ಸಂಧ್ಯಾ ಮೋಹನ್ ಆಚಾರ್ಯ, ಪಾಲಿಕೆ ಸದಸ್ಯೆ ಈ ರಸ್ತೆಯಲ್ಲಿ ಸಣ್ಣ ಮಕ್ಕಳು ಶಾಲೆಗೆ ತೆರಳುತ್ತಾರೆ. ಗುಜುರಿ ವಾಹನ ನಿಲ್ಲಿಸಿರುವ ಕಾರಣ ಅಪಾಯ ಎದುರಾಗಿದೆ. ಒಬ್ಬೊಬ್ಬರೇ ಓಡಾಡಲು ಸಾಧ್ಯವಾಗುತ್ತಿಲ್ಲ. ಸಂಬಂಧಿಸಿದವರು ಕಾರುಗಳನ್ನು ತೆರವುಗೊಳಿಸಬೇಕು.
– ಶ್ರುತಿ ಉಳ್ಳಾಲ್, ಸ್ಥಳೀಯ ನಿವಾಸಿ