Advertisement

ಮನ್‌ಮುಲ್‌ ಹಗರಣ ಸಿಬಿಐ ತನಿಖೆಗೆ ವಹಿಸಲು ಆಗ್ರಹ

12:53 PM Jan 22, 2022 | Team Udayavani |

ಮಂಡ್ಯ: ಹಾಲಿನಲ್ಲಿ ನೀರು ಕಲಬೆರಕೆ ಹಾಗೂ ರಸಾಯನಿಕ ಕಲಬೆರಕೆ ಮಾಡುತ್ತಿರುವ ಮನ್‌ಮುಲ್‌ ಹಗರಣವನ್ನು ಸಿಬಿಐ ತನಿಖೆಗೆ ವಹಿಸ ಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.

Advertisement

ಅಸಮಾಧಾನ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು, ಹಾಲಿಗೆ ನೀರು ಮಿಶ್ರಣ ಮಾಡಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇಸಿಐಡಿ ತನಿಖೆ ನಡೆಯುತ್ತಿರುವ ನಡುವೆಯೇ ಮನ್‌ಮುಲ್‌ ವ್ಯಾಪ್ತಿಯಲ್ಲಿ ಮತ್ತೂಂದು ಹಗರಣ ಬೆಳಕಿಗೆ ಬಂದಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆತಂಕಕಾರಿ: ಹಾಲಿಗೆ ಉಪ್ಪಿನಂಶದ ರಸಾಯನಿಕ ಕಲಬೆರಕೆ ಮಾಡಿರುವುದು ಆತಂಕಕ್ಕೆ ಕಾರಣವಾಗಿ. ಈಗಾಗಲೇ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದು, ಮೈಷುಗರ್‌ ಕಾರ್ಖಾನೆ ಆರಂಭವಾಗದೇ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ಸಂಕಷ್ಟದಲ್ಲಿದ್ದು ಹಗರಣ ಬೆಳಕಿಗೆ ಬಂದಿರುವುದು ಆತಂಕ ತಂದಿದೆ ಎಂದರು.

ನೋಟಿಸ್‌ ನೀಡಿದ್ದಾರೆ: ಮನ್‌ಮುಲ್‌ನಲ್ಲಿ ಹಾಲಿನ ಸರಬರಾಜಿಗೆ ಖಾಸಗಿ ಟ್ಯಾಂಕರ್‌ ಅನ್ನು ಬಳಸಿ ಬೇಕಾಬಿಟ್ಟಿ ನೀರು ಮಿಶ್ರಣ ಮಾಡುವಮೂಲಕ ಪ್ರತಿದಿನ 3 ಲಕ್ಷ ಲೀಟರ್‌ ಹಾಲನ್ನು ಕದ್ದು ಮಾರಿಕೊಳ್ಳುತ್ತಿದ್ದ ಬಹುದೊಡ್ಡ ಹಗರಣ ಕಳೆದ ವರ್ಷ ಬೆಳಕಿಗೆ ಬಂದಿತ್ತು. ಇದು ರಾಜ್ಯಾದ್ಯಂತ ಸಂಚಲನಕ್ಕೂ ಕಾರಣವಾಗಿತ್ತು. ಅಲ್ಲದೇ ನಂದಿನಿ ಹಾಲಿನ ಬಗ್ಗೆ ಅನುಮಾನ ಮೂಡುವಂತಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಚೌಡೇಶ್ವರಿ ಹಾಲು ಶೇಖರಣೆ ಮಾರ್ಗದ ಮೂಲಕಸರಬರಾಜು ಹಾಲಿನಲ್ಲಿ ಉಪ್ಪಿನಂಶ ಹಾಗೂ ರಸಾಯನಿಕ ಕಲಬೆರಕೆಆಗಿರುವುದನ್ನು ಒಕ್ಕೂಟದ ಅಧಿಕಾರಿಗಳೇ ಪತ್ತೆ ಮಾಡಿ ನೋಟಿಸ್‌ ನೀಡಿದ್ದಾರೆ. ಈ ಹಿನ್ನೆಲೆ ಕೆ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನೀಡುತ್ತಿರುವ ಹಾಲನ್ನು ಸ್ಥಗಿತಗೊಳಿಸಲಾಗಿದೆ. ಇಷ್ಟೊಂದು ಪ್ರಕರಣ ಒಂದಾದ ಮೇಲೊಂದರಂತೆ ಮನ್‌ಮುಲ್‌ನಲ್ಲಿ ಕಂಡು ಬರುತ್ತಿದೆ ಎಂದು ಆರೋಪಿಸಿದರು.

ಸಮಗ್ರ ತನಿಖೆ ನಡೆಸಿ: ಈ ಹಗರಣಕ್ಕೆ ಸಂಬಂಧಪಟ್ಟಂತೆ ಸೂಕ್ತ ತಿನಿಖೆ ನಡೆಯಬೇಕು. ಎಷ್ಟು ದಿನದಿಂದ ಹಾಲು ಕಲಬೆರೆಕೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ಬಹಿರಂಗ ಪಡಿಸಬೇಕು. ಡೇರಿಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಇಡೀಹಗರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನುಒತ್ತಾಯಿಸಿದರು.

Advertisement

ಈ ಸಂದರ್ಭದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್‌ .ಸಿ.ಮಂಜುನಾಥ್‌, ಮಹಾಂತಪ್ಪ, ಎಂ.ಆರ್‌.ಶ್ರೀಧರ್‌, ಸೌಭಾಗ್ಯ, ಶಿವಾಲಿ ಹಾಗೂ ಮಂಜು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next