Advertisement
ಅವ್ಯವಹಾರಕ್ಕೆ ಪ್ರೋತ್ಸಾಹ ಆರೋಪ: ಗೆಜ್ಜಲಗೆರೆ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣವನ್ನು ಜಿಲ್ಲೆಯ ಶಾಸಕರು, ನಾಯಕರು ಹಾಗೂ ರಾಜ್ಯ ನಾಯಕರು ಹೊರುತ್ತಾರೋ ತಮಗೆ ಗೊತ್ತಿಲ್ಲವೆಂದ ಅವರು, ಎಲ್ಲಾ ತರಹದ ಅವ್ಯವಹಾರವನ್ನು ತಡೆಹಿಡಿದು ಪ್ರೋತ್ಸಾಹ ನೀಡುತ್ತಿರುವುದು ಜನತಾ ದಳದ ನಾಯಕರೆಂದು ನೇರವಾಗಿ ಆರೋಪಿಸಿದರು. ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ, ಜನರ ಸಮಸ್ಯೆ ಹಾಗೂ ರೈತ, ಕಾರ್ಮಿಕ, ಮಹಿಳಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಇದಕ್ಕೆ ನೇರ ಹೊಣೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪಕ್ಷದವರೇ ಕಾರಣವೆಂದರು.
Related Articles
Advertisement
ಇದನ್ನೂ ಓದಿ:- ಅಭಿವೃದ್ಧಿ ಹಿಂದೆ ಜನ ಸುತ್ತುವುದಲ್ಲ, ಜನರ ಸುತ್ತಲೂ ಅಭಿವೃದ್ಧಿ ಇರಬೇಕು: ಸಿಎಂ ಬೊಮ್ಮಾಯಿ
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಹಾಗೂ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದ ವೇಳೆ ನೋಂದಾಯಿತ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು. ಈ ವೇಳೆ ಮಾಜಿ ಶಾಸಕರಾದ ಬಿ.ರಾಮಕೃಷ್ಣ, ಮಧು ಜಿ.ಮಾದೇಗೌಡ, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ತಾಲೂಕು ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಜಿಪಂ ಮಾಜಿ ಅಧ್ಯಕ್ಷ ಸುರೇಶ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ, ತಾ.ಅಧ್ಯಕ್ಷ ಸತೀಶ್, ಮುಖಂಡರಾದ ದ್ಯಾವಯ್ಯ, ಶಿವಲಿಂಗಯ್ಯ, ಅಜ್ಜಹಳ್ಳಿ ರಾಮಕೃಷ್ಣ ಇದ್ದರು.
ಫುಡ್‌ಕಿಟ್ ವಿತರಣೆಯಲ್ಲೂ ಭ್ರಷ್ಟಾಚಾರ: ಆರೋಪ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ಹಣ ದುರುಪಯೋಗವಾಗಿದ್ದು, ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಸಾಕಷ್ಟು ಅವ್ಯವಹಾರದಲ್ಲಿ ತೊಡಗಿದ್ದು, ಕಾರ್ಮಿಕ ಕಲ್ಯಾಣ ನಿಧಿಯಿಂದ ವಿತರಿಸಿದ ಫುಡ್‌ಕಿಟ್ ವಿತರಣೆಯಲ್ಲೂ ಭ್ರಷ್ಟಾಚಾರ ತಾಂಡವವಾ ಡುತ್ತಿದ್ದು, ಕೇವಲ 500 ರೂ.ಗಳ ಕಿಟ್‌ನ್ನು 900 ರೂ.ಗೆ ಲೆಕ್ಕ ಕೊಡುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಿಸಿದರು.