Advertisement
“ಸಿಂಗ್ ಅಂತ್ಯಕ್ರಿಯೆ ನಡೆದ ನಿಗಮಬೋಧ್ ಘಾಟ್ ಅವ್ಯವಸ್ಥೆಗಳ ಆಗರವಾಗಿತ್ತು. ಅಂತಿಮ ವಿಧಿ ನಡೆಸಲು ಅವರ ಕುಟುಂಬಸ್ಥರಿಗೂ ಸರಿ ಯಾಗಿ ಆಸ್ಪದ ನೀಡದೇ ಬಿಜೆಪಿ ಸಿಂಗ್‌ರನ್ನು ಅವಮಾನಿಸಿದೆ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಪ್ರತಿಕ್ರಿಯಿಸಿ, “ಕಾಂಗ್ರೆಸ್ ನಾಚಿಕೆಗೇಡಿನ ರಾಜಕೀಯ ನಡೆಸುತ್ತಿದೆ. ಸಿಂಗ್ ಅವರ ಸಾವಿನಲ್ಲೂ ಅವರನ್ನು ಶೋಷಿಸುತ್ತಿದೆ. ನಮ್ಮಿಂದ ಅವ್ಯವಸ್ಥೆಯೂ ಜರಗಿಲ್ಲ” ಎಂದಿದ್ದಾರೆ.
-ಮೊದಲ ಸಾಲಲ್ಲಿ ಸಿಂಗ್ ಕುಟುಂಬಕ್ಕೆ ಬರೀ 3 ಕುರ್ಚಿ.
-ಸಿಂಗ್ ಪತ್ನಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸುವಾಗ ಮೋದಿ ನಿಂತು ಗೌರವ ಸಲ್ಲಿಸಲಿಲ್ಲ.
-ಡಾ| ಸಿಂಗ್ ಅಂತಿಮ ಯಾತ್ರೆಗೆ ಅಮಿತ್ ಶಾ ಬೆಂಗಾವಲು ಪಡೆ ಅಡ್ಡಿ. ಕುಟುಂಬಸ್ಥರ ಕಾರ್ ಪಾರ್ಕಿಂಗ್‌ಗೂ ಸ್ಥಳ ನೀಡಿಲ್ಲ.
-ಡಿಡಿ ಬಿಟ್ಟು ಬೇರೆ ಮಾಧ್ಯಮ ಗಳಿಗೆ ಪ್ರವೇಶ ನೀಡಲಿಲ್ಲ. ಬಿಜೆಪಿ ತಿರುಗೇಟು?
-ಮೊದಲ ಸಾಲಿನಲ್ಲಿ 5 ಕುರ್ಚಿ, 2ನೇ ಸಾಲಲ್ಲಿ 8, 3 ಮತ್ತು 4ನೇ ಸಾಲು ಪೂರ್ಣ ಕುಟುಂಬಕ್ಕೆ ಮೀಸಲಿತ್ತು.
-ಸಕಲ ಸರಕಾರಿ ಗೌರವ ನೀಡಲಾಗಿತ್ತು. -ಕುಟುಂಬಕ್ಕೆ ಹಾಗೂ ಕ್ರಿಯಾ ವಿಧಿ ನಡೆಸುವವರಿಗೆ ಜಾಗ ನೀಡಲಾಗಿತ್ತು.
-ಮೆರವಣಿಗೆಗೂ ಯಾವುದೇ ತೊಡಕಾ ಗಿಲ್ಲ, ಕಾರ್ ಪಾರ್ಕಿಂಗ್‌ಗೂ ಜಾಗ ನಿಗದಿಪಡಿಸಿ, ಪಾಸ್ ವಿತರಿಸಲಾಗಿತ್ತು.
-ಸರಕಾರಕ್ಕೂ ಡಿಡಿ ಪ್ರಸಾರಕ್ಕೂ ಸಂಬಂಧ ಇಲ್ಲ. ಹಿಂದೆಯೂ ಸರಕಾರಿ ಕಾರ್ಯಕ್ರಮ ಡಿಡಿ ಮಾತ್ರವೇ ಪ್ರಸಾರ ಮಾಡಿದೆ.
Related Articles
Advertisement