Advertisement
ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, “ಈವರೆಗೆ ಉತ್ತರ ಪ್ರದೇಶವನ್ನು ಆಳಿರುವ ಎಸ್ಪಿ ಹಾಗೂ ಬಿಎ ಸ್ ಪಿ ಪಕ್ಷಗಳು, ಚಿಕ್ಕಮ್ಮ – ಸೋದರಳಿಯರ ದರ್ಬಾರ್ ನಡೆಸಿವೆ’ ಎಂದು ಟೀಕಿಸಿದರು. ಸಹಸ್ವಾನ್‌ನಲ್ಲಿಯೂ ಬಹಿರಂಗ ಪ್ರಚಾರ ನಡೆಸಿದ ಶಾ, ಬದೌನ್‌ನಲ್ಲಿ ಬಹಿರಂಗ ಪ್ರಚಾ ರದ ಜತೆಗೆ ಮನೆ-ಪ್ರಚಾರ ನಡೆಸಿದರು.
ನೋಯ್ಡಾ: ಉತ್ತರ ಪ್ರದೇಶದಲ್ಲಿ ಫೆ. 10ರಂದು ಮೊದಲ ಹಂತದ ಮತದಾನ ನಡೆಯಲಿದೆ. ಮತದಾರರಿಗೆ ಮತ ಚಲಾಯಿಸಿದ್ದು ನೆನಪಿನಲ್ಲಿ ಉಳಿಯುವಂತಾಗಲು ಗೌತಮಬುದ್ಧ ನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತು ನೋಯ್ಡಾಗಳಲ್ಲಿ 250 ಮಾದರಿ ಚುನಾವಣ ಬೂತ್‌ಗಳನ್ನು ಸ್ಥಾಪಿಸಲಾಗುತ್ತದೆ. ಅವುಗಳನ್ನು ಬಲೂನ್‌ಗಳು, ವಿವಿಧ ಹೂವುಗಳಿಂದ ಮತ್ತು ಮಧುರ ಸಂಗೀತಗಳಿಂದ ಇರುವಂತೆ ಸಿದ್ಧ ಪಡಿಸಲಾಗುತ್ತದೆ. ಗೌತಮ ಬುದ್ಧನಗರ ಜಿಲ್ಲೆಯಲ್ಲಿ 1,840 ಚುನಾವಣ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಅವುಗಳ ಪೈಕಿ 243 ಮಾದರಿ ಚುನಾವಣ ಬೂತ್‌ಗಳಾಗಿವೆ. ಅದರಲ್ಲಿ 20 ಬೂತ್‌ಗಳನ್ನು ಪೂರ್ಣ ಪ್ರಮಾಣದ ಮಹಿಳೆಯರೇ ನಿರ್ವಹಿಸಲಿದ್ದಾರೆ. ಭ್ರಷ್ಟಾಚಾರ ಮಾಡೆವು: ಅಭ್ಯರ್ಥಿಗಳ ವಾಗ್ಧಾನ
ಗೋವಾ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಾರ್ಟಿಯ ಎಲ್ಲ 40 ಅಭ್ಯರ್ಥಿಗಳು, ತಾವು ಯಾವುದೇ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗವಹಿಸುವುದಿಲ್ಲ ಎಂಬ ವಿವರಣೆಯಿರುವ ಅಫಿಡವಿಟ್‌ಗೆ ಬುಧವಾರ ಸಹಿ ಹಾಕಿದ್ದಾರೆ. ಪಣಜಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿ ವಾಲ್ ಅವರ ಸಮ್ಮುಖದಲ್ಲಿ ಅಫಿಡವಿಟ್‌ಗೆ ಸಹಿ ಹಾಕಿದರು. “ಗೋವಾದಲ್ಲಿ ಪಕ್ಷಾಂತರ ಚಟು ವಟಿಕೆಗಳು ನಡೆಯುತ್ತಿವೆ. ಇದರಿಂದ ಜನರಿಗೆ ರಾಜಕೀಯ ನಾಯಕರಲ್ಲಿ ವಿಶ್ವಾಸವೇ ಹೊರಟು ಹೋಗುತ್ತಿದೆ. ಹಾಗಾಗಿ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
Related Articles
Advertisement
ಬಡವರಿಗೆ ವಾರ್ಷಿಕ 40 ಸಾವಿರ ನೆರವುಉತ್ತರಾಖಂಡದ ಐದು ಲಕ್ಷ ಬಡ ಕುಟುಂಬಗಳಿಗೆ ವಾರ್ಷಿಕವಾಗಿ 40 ಸಾವಿರ ರೂ. ನೀಡಿಕೆ. ನಾಲ್ಕು ಲಕ್ಷ ಯುವಕರಿಗೆ ಉದ್ಯೋಗ, ಉತ್ತರಾಖಂಡವನ್ನು ಪ್ರವಾಸಿಗರ ಸ್ವರ್ಗವನ್ನಾಗಿಸುವ ಗುರಿ. ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 500 ರೂ. ದಾಟದಂತೆ ಕ್ರಮ-ಇವು ಉತ್ತರಾಖಂಡ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಚುನಾವಣ ಪ್ರಣಾಳಿಕೆಯ ಪ್ರಮುಖಾಂಶ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ವರ್ಚುವಲ್ ಕಾನ್ಫರೆನ್ಸ್ ಮೂಲಕ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಮೋದಿ ವಿರುದ್ಧ ಆರೋಪ: ಇದೇ ಸಂದರ್ಭದಲ್ಲಿ ಮೋದಿ ಸರಕಾರದ ವಿರುದ್ಧ ಆರೋಪ ಮಾಡಿದ ಅವರು, ಪ್ರಧಾನಿಯವರು ತಮ್ಮ ಬಳಕೆಗೆ ಎರಡು ಹೆಲಿಕಾಪ್ಟರ್‌ಗಳನ್ನು 16 ಸಾವಿರ ಕೋಟಿ ರೂ. ವೆಚ್ಚ ಮಾಡಿ ಕೊಂಡಿದ್ದಾರೆ. ದೇಶಾದ್ಯಂತ ಕಬ್ಬು ಬೆಳೆಗಾರರಿಗೆ 14,000 ಕೋಟಿ ರೂ. ಬಾಕಿಯಿದೆ. ಹೆಲಿಕಾಪ್ಟರ್ ಖರೀದಿಗೆ ವ್ಯಯಿಸಿದ ಹಣವನ್ನು ಕಬ್ಬು ಬೆಳೆಗಾರರಿಗೆ ಕೊಡಬಾರದಿತ್ತೇ ಎಂದು ಪ್ರಶ್ನಿಸಿದ್ದಾರೆ. ಉಚಿತ ವಿದ್ಯುತ್: ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಹರೀಶ್ ರಾವತ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೆ ವಾರ್ಷಿಕವಾಗಿ 100 ಯೂನಿಟ್ ವಿದ್ಯುತ್ತನ್ನು ಮೊದಲ ವರ್ಷ, 200 ಯೂನಿಟ್ ವಿದ್ಯುತ್ತನ್ನು ಎರಡನೇ ವರ್ಷ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ.