ಕಾಸರಗೋಡು: ಓದುವಿಕೆಯ ಆರಂಭದೊಂದಿಗೆ ಮಾನವ ಕುಲದ ಪ್ರಗತಿಯ ಸಾಧ್ಯತೆಯ ಹಾದಿಯೂ ತೆರೆದಿದೆ ಎಂದು ಕವಿ, ವಾಗ್ಮಿ ಕಲ್ಪಟ್ಟ ನಾರಾಯಣನ್ ಅಭಿಪ್ರಾಯಪಟ್ಟರು.
ಓದುವ ಪಕ್ಷಾಚರಣೆ ಅಂಗವಾಗಿ ಅಕ್ಷರ ಗ್ರಂಥಾಲಯ ವತಿಯಿಂದ ಶನಿವಾರ ಜಿಲಾಧ್ಲಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ‘ಓದುವಿಕೆಯ ಐತಿಹಾಸಿಕ ಹಾದಿ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ಮುದ್ರಣ ಮಾಧ್ಯಮ ಎಂಬ ಆಂದೋಲನದ ಮೂಲಕ ದೊಡ್ಡ ಸ್ವರದಲ್ಲಿ ಓದಿಹೇಳುವ ದಿನಗಳು ಕಳೆದು ನಿಶ್ಶಬ್ದ ವಾಚನಕ್ಕೆ ನಾಂದಿ ಯಾಗಿತ್ತು. ಓದುವ ಪ್ರಕ್ರಿಯೆ ಮೊದಲು ಆರಂಭವಾಗಿತ್ತೋ ಬರವಣಿಗೆ ಮೊದಲು ಬಂತೋ ಎಂಬ ಪ್ರಶ್ನೆಗಿಂತಲೂ ಓದುವಿಕೆಯಿಂದ ಬರವಣಿಗೆಯ ನಿಜ ನಿಲುಮೆಯನ್ನು ಗುರುತಿಸುವುದಕ್ಕೆ ಸಾಧ್ಯವಾಗಿತ್ತು ಎಂಬುದು ಅರ್ಥಪೂರ್ಣ. ನೂತನ ತಂತ್ರಜ್ಞಾನಗಳ ಬಳಕೆ ಮೂಲಕ ಇನ್ನಷ್ಟು ಸ್ಫ್ಪುಟವಾಗಿ ಓದು-ಬರವಣಿಗೆಗಳು ಸಮಾಜದಲ್ಲಿ ನೆಲೆನಿಂತಿವೆ ಎಂದವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಉದ್ಘಾಟಿಸಿದರು. ಸಹಾಯಕ ಜಿಲ್ಲಾಧಿಕಾರಿ ಪಿ.ವಿ. ಅಬ್ದು ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಮಾಹಿತಿ ಅಧಿಕಾರಿ ಮಧು ಸೂದನನ್ ಎಂ., ಪ್ರಸ್ ಕ್ಲಬ್ ಅಧ್ಯಕ್ಷ ಟಿ.ಎ. ಶಾಫಿ, ಕವಿ ಗಳಾದ ದಿವಾಕರನ್ ವಿಷ್ಣು ಮಂಗಲಂ, ರವೀಂದ್ರನ್ ಪಾಡಿ, ಪದ್ಮನಾಭನ್ ಬ್ಲಾತ್ತೂರು, ಕಥೆಗಾರ ಗೋವಿಂದನ್ ರಾವಣೇಶ್ವರಂ, ತಾಲೂಕು ಗ್ರಂಥಾಲಯ ಮಂಡಳಿ ಕಾರ್ಯ ದರ್ಶಿ ಪಿ. ದಾಮೋದರನ್, ಅಕ್ಷರ ಗ್ರಂಥಾ ಲಯ ಅಧ್ಯಕ್ಷ ಸತೀಶನ್ ಪೊಯ್ಯ ಕ್ಕೋಡು, ಕಾರ್ಯದರ್ಶಿ ಬಿ. ಸುಜೇಶ್ ಮೊದಲಾದವರು ಉಪಸ್ಥಿತರಿದ್ದರು.