Advertisement

ಮಂಜುನಾಥ ತಾಪಂ ಪ್ರಭಾರಿ ಅಧ್ಯಕ್ಷ

04:10 PM May 27, 2020 | Suhan S |

ಶಿರಹಟ್ಟಿ: ತಾಲೂಕ ಪಂಚಾಯತ್‌ ವಿಭಜನೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೋಗಿ ಅವರು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

Advertisement

ಹಿಂದಿನ ಅಧ್ಯಕ್ಷೆ ಗಿರಿಜವ್ವ ಲಮಾಣಿ ಹಾಗೂ ಉಪಾಧ್ಯಕ್ಷೆ ಹುಸೇನಬಿ ಅತ್ತಿಗೇರಿ ವಿಭಜನೆಯಾದ ಲಕ್ಷ್ಮೇಶ್ವರ ತಾಪಂಗೆ ಸೇರಿದ ಮತ ಕ್ಷೇತ್ರಗಳ ಸದಸ್ಯರಾಗಿರುವುದರಿಂದ ಖಾಲಿಯಿರುವ ಅಧ್ಯಕ್ಷ ಸ್ಥಾನಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಶಿರಹಟ್ಟಿ ತಾಪಂ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಇಒ ಡಾ| ನಿಂಗಪ್ಪ ಒಲೇಕಾರ ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ಪ್ರಭಾರಿ ಅಧ್ಯಕ್ಷರಾದ ಮಂಜುನಾಥ ಜೋಗಿ ಅವರನ್ನು ಇನ್ನುಳಿದ ಸದಸ್ಯರು ಅಭಿನಂದಿಸಿದರು. ತಾಪಂ ಸದಸ್ಯರಾದ ಪರಶುರಾಮ ಇಮ್ಮಡಿ, ಬಿಜೆಪಿ ತಾಲೂಕಾಧ್ಯಕ್ಷ ಫಕ್ಕಿರೇಶ ರಟ್ಟಿಹಳ್ಳಿ, ವಿರೂಪಾಕ್ಷಪ್ಪ ಅಣ್ಣಿಗೇರಿ, ನಿಂಬಣ್ಣ ಮಡಿವಾಳರ, ರಾಚುನಗೌಡ ಅಧ್ಯಕ್ಷ, ಮಹದೇವ ಗಾಣಿಗೇರ, ಶ್ರೀನಿವಾಸ ಬಾರಬಾರ, ಶಿವನಗೌಡ ಪಾಟೀಲ್‌, ನಾಗರಾಜ ಕುಲಕರ್ಣಿ, ಅಶೋಕ ಪಲ್ಲೇದ, ಪರಪ್ಪ ಹೊನಗಣ್ಣವರ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next