Advertisement

ಮಾಂಜ್ರಾ ಟೀಸರ್‌ ಬಂತು

06:42 PM Nov 20, 2020 | Suhan S |

ಹೊಸಬರ ಮಾಂಜ್ರಾ ಚಿತ್ರದ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಈ ಚಿತ್ರವನ್ನು ಶ್ರೀದುರ್ಗಾ ಪರಮೇಶ್ವರಿ ಸಿನಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ರವಿ ಅರ್ಜುನ್‌ ಪೂಜೇರ ನಿರ್ಮಿಸುತ್ತಿದ್ದಾರೆ.

Advertisement

ಮುತ್ತುರಾಜ್‌ ರೆಡ್ಡಿ , ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.2005 ರಲ್ಲಿ ನಡೆದ ನೈಜ ಘಟನೆಯನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಸೆನ್ಸಾರ್‌ ಮುಗಿದಿದ್ದು, ಮುಂದಿನ ತಿಂಗಳ ಕೊನೆಯವಾರ ಅಥವಾ ಹೊಸ ವರ್ಷದಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸಿದೆ.

ಇದನ್ನೂ ಓದಿ  : ರಾಜ ನಿವಾಸದಲ್ಲಿ ಹೊಸಬರು ಶೂಟಿಂಗ್‌ ಸೆಟ್‌ನಲ್ಲಿ ಟೈಟಲ್‌ ಲಾಂಚ್‌

ಚಿತ್ರಕ್ಕೆ ಸಯ್ಯದ್‌ ಯಾಸಿನ್‌ ಹಾಗು ಶರತ್‌ ಛಾಯಾಗ್ರಹಣ, ಡಾ.ಚಿನ್ಮಯ್‌ ಎಂ.ರಾವ್‌ ಸಂಗೀತ ಮತ್ತು ಸಾಹಿತ್ಯ,ಆಕಾಶ್‌ ಜಾಧವ್‌ ಹಿನ್ನೆಲೆ ಸಂಗೀತ,ಸಂಗಮೇಶ ಕಮತಿ,ಅಂಜಿಕ್ಯ ಶಿಂಧೆ ಸಂಕಲನ,ಕೌರವ ವೆಂಕಟೇಶ್‌ ಸಾಹಸ, ರಮ್ಯ ಉಡುಪಿ, ರಕ್ಷಾ ಉಡುಪಿ ನೃತ್ಯನಿರ್ದೇಶನವಿದೆ. ಗಣಿ ಸಹ ಸಂಗೀತ, ಗೌತಮ್‌ ನಾಯ್ಕ್ ಡಿ.ಐ ಚಿತ್ರಕ್ಕಿದೆ. ರಂಜಿತ್‌ ಸಿಂಗ್‌, ಅಪೂರ್ವ, ನಿತ್ಯರಾಜ್‌, ರಂಜನ್‌ ಪಣಗುತ್ತಿ, ಸಿ.ಎಸ್‌ ಪಾಟೀಲ್, ನಳಿನ್‌ ವಿದ್ಯಾಸಾಗರ್‌,ಮಂಜುನಾಥಗೌಡಪಾಟೀಲ್‌ವುುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next