ಕಾಸರಗೋಡು: ಮಂಜೇಶ್ವರ-ಉಕ್ಕುಡ ರಸ್ತೆಯ ಪಲ್ಲದಪದವಿನಲ್ಲಿ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಜ. 17ರಿಂದ ಮಾರ್ಚ್ 16ರ ವರೆಗೆ ಭಾಗಶಃ ಸಂಚಾರ ನಿಯಂತ್ರಣವನ್ನು ಹೇರಲಾಗುವುದು.
Advertisement
ಈ ಮಾರ್ಗದಲ್ಲಿ 30 ಟನ್‌ಗಿಂತ ಹೆಚ್ಚು ಭಾರ ಹೊತ್ತು ಬರುವ ದೊಡ್ಡ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಸ್ತೆ ಅಗಲ ಕಿರಿದಾಗಿರುವುದರಿಂದಲೂ, ಬದಲಿ ರಸ್ತೆಯ ವ್ಯವಸ್ಥೆ ಇಲ್ಲದ ಕಾರಣ ಬಸ್ ಹಾಗೂ ಇತರ ಸಣ್ಣ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುವುದು ಎಂದು ಸಹಾಯಕ ಎಂಜಿನಿಯರ್ ತಿಳಿಸಿದ್ದಾರೆ.