Advertisement

ಮಂಜೇಶ್ವರ ದೇವಸ್ಥಾನಕ್ಕೆ ಸ್ವರ್ಣ ಪಲ್ಲಕ್ಕಿ ಹಸ್ತಾಂತರ

12:28 AM Nov 02, 2022 | Team Udayavani |

ಉಡುಪಿ: ಮಂಜೇಶ್ವರ ಶ್ರೀಮತ್‌ ಅನಂತೇಶ್ವರ ದೇವಸ್ಥಾನಕ್ಕೆ ಭಕ್ತಾದಿಗಳಿಂದ ಸಮರ್ಪಿಸಲ್ಪಡುವ 14 ಕೆ.ಜಿ. ತೂಕದ ಚಿನ್ನದ ಪಲ್ಲಕ್ಕಿಯನ್ನು ಉಡುಪಿ ಆಭರಣ ಜುವೆಲರ್ಸ್‌ ವರ್ಕ್‌ಶಾಪ್‌ನಲ್ಲಿ ತಯಾರಿಸಲಾಗಿದ್ದು, ಸ್ವರ್ಣ ಪಲ್ಲಕ್ಕಿ ಮತ್ತು ಪರಿಕರಗಳಿಗೆ ಮಂಗಳವಾರ ಉಡುಪಿ ಆಭರಣ ಮಳಿಗೆಯಲ್ಲಿ ಧಾರ್ಮಿಕ ವಿಧಾನಗಳನ್ನು ನೆರವೇರಿಸಿ ದೇವಸ್ಥಾನದ ಟ್ರಸ್ಟಿಗಳಿಗೆ ಹಸ್ತಾಂತರಿಸಲಾಯಿತು.

Advertisement

ಅರ್ಚಕರಾದ ಕೆ. ಶ್ರೀಕಾಂತ್‌ ಅವಧಾನಿ, ಎಂ. ಪುರುಷೋತ್ತಮ ಆಚಾರ್ಯ ಧಾರ್ಮಿಕ ಕಾರ್ಯ ನೆರವೇರಿಸಿದರು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೋಟೇಶ್ವರ ದಿನೇಶ್‌ ಜಿ. ಕಾಮತ್‌, ಟ್ರಸ್ಟಿಗಳಾದ ಛತ್ರಪತಿ ಶಿವಾಜಿ ಪ್ರಭು, ಯೊಗೀಶ್‌ ಆರ್‌. ಕಾಮತ್‌, ಎಂ. ಕೃಷ್ಣ ಭಟ್‌, ರಾಘವೇಂದ್ರ ಪ್ರಭು, ಅಜಿತ್‌ ಕುಮಾರ್‌ ಶೆಣೈ ಮತ್ತು 18 ಪೇಟೆಯ ಸದಸ್ಯರು, ಪದಾಧಿಕಾರಿಗಳು, ಸ್ವಯಂ ಸೇವಕರು ಭಾಗವಹಿಸಿದ್ದರು. ಆಭರಣ ಜುವೆಲರ್ಸ್‌ ನಿರ್ದೇಶಕರಾದ ಮಧುಕರ್‌ ಎಸ್‌. ಕಾಮತ್‌, ದಯಾನಂದ್‌ ಕಾಮತ್‌, ಸುಭಾಸ್‌ ಎಂ. ಕಾಮತ್‌ ಹಾಗು ಮಹೇಶ್‌ ಎಂ. ಕಾಮತ್‌, ವಿಜಯಾ ಡಿ. ಕಾಮತ್‌, ಸಂಧ್ಯಾ ಎಸ್‌. ಕಾಮತ್‌, ವೀಣಾ ಎಂ. ಕಾಮತ್‌ ಉಪಸ್ಥಿತರಿದ್ದರು.

ಉಡುಪಿಯಿಂದ ಮಂಜೇಶ್ವರದ ವರೆಗೆ ತೆರೆದ ವಾಹನದಲ್ಲಿ ಪಲ್ಲಕ್ಕಿ ಸಾಗಲಿದ್ದು, ಮೂರು ದಿನಗಳ ಕಾಲ ಉಡುಪಿ, ದ.ಕ. ಜಿಲ್ಲೆಯ ಪ್ರಮುಖ ಜಿಎಸ್‌ಬಿ ಸಮಾಜದ ದೇವಸ್ಥಾನಗಳಿಗೆ ಭೇಟಿ ನೀಡಿ ನ. 3ರಂದು ಮಂಜೇಶ್ವರದ ದೇಗುಲಕ್ಕೆ ತೆರಳಲಿದೆ. ನ. 6ರಂದು ಮಂಜೇಶ್ವರದ ಅನಂತೇಶ್ವರ ದೇಗುಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಶ್ರೀಪಾದರ ಸಮ್ಮುಖದಲ್ಲಿ ದೇಗುಲದ ಶ್ರೀ ಭದ್ರ ನರಸಿಂಹ ಮತ್ತು ಶೇಷ ದೇವರಿಗೆ ಪಲ್ಲಕ್ಕಿಯನ್ನು ಸಮರ್ಪಿಸಲಾಗುತ್ತದೆ ಎಂದು ದಿನೇಶ್‌ ಕಾಮತ್‌ ತಿಳಿಸಿದರು.

ವಜ್ರ, ಮಾಣಿಕ್ಯ, ನವರತ್ನಗಳಿಂದ ಪೋಣಿಸಿದ ಚಿನ್ನದ ಪಲ್ಲಕ್ಕಿಯನ್ನು ಆಭರಣ ಜ್ಯುವೆಲ್ಲರ್ಸ್‌ನ ವರ್ಕ್‌ಶಾಪ್‌ನಲ್ಲಿ 40 ದಿನಗಳಲ್ಲಿ 5 ಮಂದಿ ನುರಿತ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next