Advertisement

ಮಂಜೇಶ್ವರದ ಲಾಲಕಿ, ಸ್ವರ್ಣ ಕಲಶಕ್ಕೆ ಸ್ವಾಗತ

01:04 PM Mar 14, 2017 | Team Udayavani |

ಉಡುಪಿ: ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಿಂದ ಹೊರಟ ಮಂಜೇಶ್ವರ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳುವ ನೂತನ ಬೆಳ್ಳಿ ಲಾಲಕಿ ಮತ್ತು ಸ್ವರ್ಣ ಕಲಶದ ಸಮರ್ಪಣಾ ಯಾತ್ರೆ ಶನಿವಾರ ಉಡುಪಿ ಲಕ್ಷಿ¾à ವೆಂಕಟೇಶ ದೇವಸ್ಥಾನಕ್ಕೆ ತಲುಪಿದಾಗ ದೇಗುಲದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿ, ವಿಶೇಷ ಪೂಜೆ ನಡೆದ ಬಳಿಕ ಉದ್ಯಾವರ ಕಟಪಾಡಿಗೆ ಬೀಳ್ಕೊಡಲಾಯಿತು. 

Advertisement

ದೇಗುಲದ ಆಡಳಿತ ಮಂಡಳಿ ಮೊಕ್ತೇಸರ ಪಿ.ವಿ. ಶೆಣೈ, ಮಂಡಳಿ ಸದಸ್ಯರಾದ ಮಟ್ಟಾರು ವಸಂತ ಕಿಣಿ, ಪುಂಡಲೀಕ ಕಾಮತ್‌, ಗಣೇಶ ಕಿಣಿ, ಅರ್ಚಕ ವಿನಾಯಕ ಭಟ್‌, ನಗರಸಭಾ ಸದಸ್ಯ ಶ್ಯಾಮ್‌ ಪ್ರಸಾದ್‌ ಕುಡ್ವ ಮೊದಲಾದವರು ಉಪಸ್ಥಿತರಿದ್ದರು. 

3 ಕೆ.ಜಿ. ಬಂಗಾರದ ಕಲಶವಾಗಿದ್ದು, ಮಂಜೇಶ್ವರ ನಾಗದೇವರ ಚಿತ್ರಣ ಹೊಂದಿದೆ. ಲಾಲಕಿ 80 ಕೆ.ಜಿ. ಬೆಳ್ಳಿಯಿಂದ ತಯಾರಿಸಲಾಗಿದ್ದು, ವಿಶೇಷ ಕಲಾಕೃತಿ ಹೊಂದಿದೆ. 

ಮಂಜೇಶ್ವರ ದೇವಸ್ಥಾನ 18 ಪೇಟೆಯ ದೇವಸ್ಥಾನವಾದ ಕಾರಣ ವಿವಿಧೆಡೆ ಸಂಚರಿಸಿ ಮಂಜೇಶ್ವರಕ್ಕೆ ಮಾ. 12ರಂದು ತಲುಪಿದೆ. ಮಂಜೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ ಕಾರಣ ಶ್ರೀಭುವನೇಂದ್ರತೀರ್ಥ ಶ್ರೀಪಾದರ ವೃಂದಾವನವಿರುವ ಬಸ್ರೂರು ದೇವಸ್ಥಾನದಿಂದ ಸಮರ್ಪಣಾ ಯಾತ್ರೆ ಆರಂಭಗೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next