Advertisement
ಪೈವಳಿಕೆ ನಗರದಲ್ಲಿ ನಡೆದ ಎಡರಂಗದ ಉಪ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಮೂರುವರೆ ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ ಆಡಳಿತ ನೀಡುತ್ತಿರುವ ಎಡರಂಗದತ್ತ ಬೆಂಬಲ ಹೆಚ್ಚಿದೆ. ಇದೇ ಕಾರಣದಿಂದ ರಾಜ್ಯದಲ್ಲಿ ಕಳೆದ ಬಾರಿ ನಡೆದ ಎರಡೂ ಉಪ ಚುನಾವಣೆಗಳಲ್ಲಿ ಎಡರಂಗ ಜಯಭೇರಿ ಬಾರಿಸಿದೆ ಎಂದು ಸಿಎಂ ಹೇಳಿದರು. ರಾಜ್ಯದಲ್ಲಿ ಹೆಚ್ಚಿನ ಎಲ್ಲ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿದ್ದು, ಕೇವಲ 53 ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ನಾಲ್ಕು ವರ್ಷಗಳ ಹಿಂದೆ ಐಕ್ಯರಂಗದ ಕಾಲಾವಧಿಯಲ್ಲಿ ಭ್ರಷ್ಟಾಚಾರದ ಕೂಪವಾಗಿದ್ದ ಕೇರಳ ರಾಜ್ಯವು ಪ್ರಸ್ತುತ ಸುಸ್ಥಿರ ಅಭಿವೃದ್ಧಿಯತ್ತ ದಾಪುಗಾಲು ಹಾಕಿದೆ ಎಂದರು.
Related Articles
Advertisement
ಎಡರಂಗ ಅಭ್ಯರ್ಥಿ ಎಂ.ಶಂಕರ ರೈ ಮಾತನಾಡಿ ಪ್ರತಿಪಕ್ಷಗಳು ತನ್ನ ಮೇಲೆ ಅಪಪ್ರಚಾರದಲ್ಲಿ ತೊಡಗಿವೆ, ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ. ತನ್ನ ಊರಿನ ಜನಸಾಮಾನ್ಯರಿಗೆ ತನ್ನ ವ್ಯಕ್ತಿತ್ವದ ಬಗ್ಗೆ ತಿಳಿವಿದೆ ಎಂದರು. ಸಭೆಯಲ್ಲಿ ಕೈಗಾರಿಕಾ ಸಚಿವ ಇ.ಪಿ ಜಯರಾಜನ್, ಕಂದಾಯ ಸಚಿವ ಇ.ಚಂದ್ರಶೇಖರನ್, ಬಂದರು ಸಚಿವ ಕಡನಪಳ್ಳಿ ರಾಮಚಂದ್ರನ್, ಮಾಜಿ ಸಚಿವ ಕೆ.ಇಸ್ಮಾಯಿಲ್, ಮಾಜಿ ಸಂಸದ ಪಿ.ಕರುಣಾಕರನ್, ಡಿವೈಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಮಹಮ್ಮದ್ ರಿಯಾಸ್, ನಾಯಕರಾದ ಸಿ.ಎಚ್ ಕುಞಂಬು, ಕೆ.ವಿ ಕುಞರಾಮನ್,ಬಿ.ವಿ ರಾಜನ್,ಎಂ.ವಿ.ಬಾಲಕೃಷ್ಣನ್, ಉಪಸ್ಥಿತರಿದ್ದರು. ಅಬ್ದುಲ್ ರಜಾಕ್ ಚಿಪ್ಪಾರು ಸ್ವಾಗತಿಸಿದರು, ಅಜಿತ್ ಎಂ.ಸಿ ಲಾಲ್‌ಬಾಗ್ ನಿರೂಪಿಸಿದರು.ಸಭೆಯಲ್ಲಿ ಪಕ್ಷದ ಅಭಿಮಾನಿಯೋರ್ವರು ರಚಿಸಿದ ಸಿಎಂ ಅವರ ಚಿತ್ರವನ್ನು ಮುಖ್ಯಮಂತ್ರಿಯವರಿಗೆ ನೀಡಲಾಯಿತು.
ಜಲಸಾರಿಗೆ ಸಂಪರ್ಕ ಯೋಜನೆಬೇಕಲದಿಂದ ಕೋವಳದವರೆಗಿನ ಜಲಸಾರಿಗೆ ಸಂಪರ್ಕ ಯೋಜನೆಯನ್ನು ಸರಕಾರ ಆರಂಭಿಸಿದ್ದು, ದೋಣಿ ಸಾರಿಗೆಯ ಮೂಲಕ ರಾಜ್ಯದ ಹಲವು ನಗರಗಳನ್ನು ಸಂಪರ್ಕಿಸಬಹುದಾಗಿದೆ ಎಂದರು. ಕಾಸರಗೋಡಿನಿಂದ ತಿರುವನಂತಪುರದ ತನಕ ಸೆಮಿ ಹೆ„ಸ್ಪೀಡ್ ರೈಲು ಯೋಜನೆಗೂ ಸರಕಾರ ಶ್ರಮಸಿದ್ದು, ಕೇಂದ್ರ ರೈಲ್ವೇ ಇಲಾಖೆಯ ಮೂಲಕ ಇದು ಕನಸು ನನಸಾಗಲಿದೆ ಎಂದರು. ಶಬರಿಮಲೆ ಕ್ಷೇತ್ರದ ಅಭಿವೃದ್ಧಿಗೂ ಸುಮಾರು 1000 ಕೋಟಿ ರೂ.ನಿಧಿ ಸರಕಾರ ಮೀಸಲಿರಿಸಿದೆ.ಶಿಕ್ಷಣ ಕ್ಷೇತ್ರವೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಸೈಟೆಕ್ ಆಗುತ್ತಿದ್ದು, ಶಾಲಾ ಮಕ್ಕಳ ನೋಂದಣಿಯೂ ಹೆಚ್ಚಿದೆ. ಆರೋಗ್ಯ ಕ್ಷೇತ್ರದಲ್ಲೂ ಬದಲಾವಣೆಯಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಮಾರ್ಪಾಡುಗೊಳಿಸಲಾಗಿದೆ. ಸರಕಾರಿಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ.ರಾಜ್ಯ ಸರಕಾರದ ಲೆ„ಫ್ ಮಿಷನ್, ಹರಿತ ಕೇರಳ, ಶುಚಿತ್ವ ಯೋಜನೆಗಳು ಜನಮೆಚ್ಚುಗೆ ಗಳಿಸಿವೆ ಎಂದರು. ಸ್ತ್ರೀ ಸಂರಕ್ಷಣೆ ಮತ್ತು ಸ್ತ್ರೀ ಸಶಕ್ತೀಕರಣಕ್ಕೂ ಹೆಚ್ಚಿನ ಆದ್ಯತೆ ನಿಡಲಾಗಿದೆ .ಸುಸ್ಥಿರ ಅಭಿವೃದ್ಧಿಯಲ್ಲಿ ಕೇರಳ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿದ್ದು, ಇಂಡಿಯಾ ಟುಡೇ ಮೂಲಕ ಸ್ಟೇಟ್ಸ್ ಅಫ್ ಸ್ಟೇಟ್ಸ್ ವಿಭಾಗದಲ್ಲಿ ಕೇರಳ ರಾಜ್ಯಕ್ಕೆ ನಂ.1 ಸ್ಥಾನ ದಕ್ಕಿದೆ.
-ಪಿಣರಾಯಿ ವಿಜಯನ್ ಮುಖ್ಯಮಂತ್ರಿ