ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಶಿವಲೀಲಾ’ ಚಲನಚಿತ್ರ ಪಂಚ ಭಾಷೆಗಳಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ.
ಮಂಗಳ ಮುಖಿಯವರ ಕಷ್ಟ ಸುಖಗಳ ಜೀವನ ಕುರಿತು ಮೂಡಿ ಬರುತ್ತಿರುವ ಚಿತ್ರದಲ್ಲಿ ಜಾನಪದ ಆಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿಯವರು ಮುಖ್ಯ ಪಾತ್ರದಲ್ಲಿ ನಟಸಿದ್ದಾರೆ. ಮಂಗಳ ಮುಖಿಯಾಗಿ ಅವರು ಅಮೋಘ ಅಭಿನಯ ನೀಡಿದ್ದಾರೆ. ಈ ಚಿತ್ರದಲ್ಲಿ ಬಹುತೇಕ ಮಂಗಳ ಮುಖಿಯರೇ ನಟಿಸಿದ್ದಾರೆ.
ಶಿವಲೀಲಾ ಚಿತ್ರ ಕನ್ನಡ, ಹಿಂದಿ, ಮಲೆಯಾಳಂ ತೆಲಗು ಮತ್ತು ತಮಿಳು ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.
ಚಿತ್ರದ ನಿರ್ದೇಶನ, ನಿರ್ಮಾಣ ಸೇರಿದಂತೆ ನಟರಾಗಿ ಅಶೋಕ್ ಜಯರಾಮ ನಟಿಸಿದ್ದಾರೆ. ನಾಯಕ ನಟರಾಗಿ ಆರ್ಯನ್, ಕಲಾ ನಿರ್ದೇಶಕ ಕನಕ ವಾಲ್ಮೀಕಿ ಅವರು ನಟಿಸಿದ್ದಾರೆ.
ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಯಲಯ, ಮಂಜಮ್ಮ” ಜೊಗತಿ ಅವರ ಜೀವನ ಚರಿತ್ರೆ ಕುರಿತು ಪದವಿ ವಿದ್ಯಾರ್ಥಿಗಳ”ನಡುವೆ ಸುಳಿಯುವ ಹೆಣ್ಣು ಎಂಬ ಪಾಠ್ಯವನ್ನು ಅಳವಡಿಸಿರುವುದನ್ನು ಸ್ಮರಿಸಬಹುದು.
ಇತ್ತಿಚಿಗಷ್ಟೆ ಮಂಜಮ್ಮ ಜೊಗತಿಯವರ ಜಾನಪದ ಆಕಾಡೆಮಿ ಅಧ್ಯಕ್ಷ ಸ್ಥಾನದ ಅಧಿಕಾರ ಅವಧಿ ಕೂಡ ಪೂರ್ಣಗೊಂಡಿದೆ.