Advertisement

ಗಡಿಭಾಗದ ಲಿವೀವ್ ನಗರ ತಲುಪಿದ ಸಾಗರದ ವಿದ್ಯಾರ್ಥಿನಿ ಮನಿಷಾ

09:38 PM Feb 27, 2022 | Team Udayavani |

ಸಾಗರ: ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಸಾಗರದ ವಿದ್ಯಾರ್ಥಿನಿ ಮನಿಷಾ ಭಾನುವಾರ ಗಡಿಭಾಗದ ಲಿವೀವ್ ನಗರ ತಲುಪಿದ್ದು, ಗಡಿ ದಾಟಿ ಪೋಲ್ಯಾಂಡ್ ತಲುಪುವ ಸಾಹಸ ಮಾಡುತ್ತಿದ್ದಾರೆ. ಈಗಾಗಲೇ ಗಡಿದಾಟಿ ಪೋಲ್ಯಾಂಡ್ ದೇಶ ತಲುಪಿರುವ ಆಕೆಯ ಸ್ನೇಹಿತರು ಭಾರತೀಯ ರಾಯಭಾರಿ ಕಚೇರಿಯಿಂದ ಸ್ಪಂದನೆ ಸಿಗದಿರುವ ಬಗ್ಗೆ ಆತಂಕಿತರಾಗಿದ್ದು, ಭಾರತ ಸರಕಾರ ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಮನಿಷಾ ಕೋರಿದ್ದಾರೆ.

Advertisement

ಈ ಬಗ್ಗೆ ಮನಿಷಾ ಆಕೆಯ ಪೋಷಕರಲ್ಲಿ ಮತ್ತು ಇಲ್ಲಿನ ಹಿತೈಷಿಗಳಿಗೆ ವಾಯ್ಸ್ ಮೆಸೇಜ್ ಮೂಲಕ ಮಾಹಿತಿ ನೀಡಿದ್ದಾರೆ. ಉಕ್ರೇನ್‌ನ ಸ್ಥಳೀಯ ನಿವಾಸಿ ಸಹಪಾಠಿಗಳು ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದರಿಂದ ಮನಿಷಾ ಮತ್ತು ಆಕೆಯ ಓರ್ವ ಸ್ನೇಹಿತೆ ಲಿವೀವ್ ನಗರ ತಲುಪಿದ್ದಾರೆ. ಬಾಡಿಗೆ ಕಾರುಗಳಲ್ಲಿ ಮತ್ತು ರೈಲುಗಳಲ್ಲಿ ಲಿವೀವ್ ನಗರಕ್ಕೆ ತಲುಪಲು ಜನರು ಹರಸಾಹಸ ಪಡುತ್ತಿದ್ದಾರೆ. ಬಾಡಿಗೆ ಕಾರುಗಳ ಚಾಲಕರು ದುಬಾರಿ ಹಣ ಕೇಳುತ್ತಿದ್ದಾರೆ. ರೈಲಿನಲ್ಲಿ ಮಕ್ಕಳಿಗೆ ಮತ್ತು ಹೆಂಗಸರಿಗೆ ಆದ್ಯತೆ ನೀಡಲಾಗುತ್ತಿದೆ. ಲಿವೀವ್ ನಗರದಲ್ಲಿ ವಾಹನ ಮತ್ತು ಜನಸಂದಣಿ ವಿಪರೀತವಾಗಿದೆ ಎಂದು ಆಕೆ ತಿಳಿಸಿದ್ದಾರೆ.

ಸಂಕಟದಲ್ಲಿರುವ ಕರ್ನಾಟಕದವರು ಸೇರಿಕೊಂಡು ಒಂದು ವಾಟ್ಸ್‌ಅಪ್ ಗುಂಪು ರಚಿಸಿಕೊಳ್ಳಲಾಗಿದ್ದು, ತುರ್ತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಎಟಿಎಂನಿಂದ ಹಣ ತೆಗೆಯುವುದು, ಕರೆನ್ಸಿ ಎಕ್ಸ್‌ಚೇಂಜ್ ಸೆಂಟರ್‌ಗಳನ್ನು ಶೋಧಿಸುವುದು ಸವಾಲಾಗಿದೆ. ಅಲ್ಲದೇ ನಾವು ನಮ್ಮ ಮೊಬೈಲ್ ಫೋನ್ ಬಳಕೆ ಮಿತಿಗೊಳಿಸಬೇಕು ಮತ್ತು ಲೊಕೇಷನ್ ಸೇವೆಗಳನ್ನು ನಿರ್ಬಂಧಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಮನಿಷಾ ಇಲ್ಲಿನ ಹಿತೈಷಿಗಳಿಗೆ ಮೆಸೇಜ್ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ : ‘ಕಂಬಳದ ನಂದಯ್ಯ’ ಎಂದೇ ಪ್ರಸಿದ್ದಿ ಪಡೆದ ನಂದಯ್ಯ ಮಾಸ್ತಯ್ಯ ನಾಯ್ಕ ನಿಧನ

Advertisement

Udayavani is now on Telegram. Click here to join our channel and stay updated with the latest news.

Next