Advertisement

ನಾಯಕನಾಗಿ ಯಶಸ್ಸಿನ ಉತ್ತುಂಗಕ್ಕೇರಿದ ಮನೀಷ್‌

10:26 AM Dec 08, 2019 | Team Udayavani |

ಕರ್ನಾಟಕ ಕ್ರಿಕೆಟ್‌ ತಂಡದ ನಾಯಕ ಮನೀಷ್‌ ಪಾಂಡೆ, ಭಾರತೀಯ ಕ್ರಿಕೆಟ್‌ನ ಕಲಾತ್ಮಕ ಆಟಗಾರರಲ್ಲೊಬ್ಬರು. ಅದೇನು ಗ್ರಹಚಾರವೋ, ಎಲ್ಲ ಪ್ರತಿಭೆಯಿದ್ದೂ, ಅತ್ಯುತ್ತಮವಾಗಿ ಆಡಿಯೂ, ಭಾರತ ತಂಡದ ಅವಿಭಾಜ್ಯ ಅಂಗವಾಗಲು ಮಾತ್ರ ಸಾಧ್ಯವಾಗುತ್ತಿಲ್ಲ. ಒಂದೋ 11ರ ಬಳಗದಲ್ಲಿ ಇರುವುದಿಲ್ಲ, ಇದ್ದರೂ ಇವರಿಗೆ ಬ್ಯಾಟಿಂಗ್‌ ಮಾಡಲು ಬಹಳ ಅವಕಾಶ ಸಿಗುವುದಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಮಿಂಚಿ ತನ್ನ ಪ್ರತಿಭೆ ತೋರಿದ್ದರೂ, ಇನ್ನೂ ಸ್ಥಾನ ಗಟ್ಟಿ ಮಾಡಿಕೊಳ್ಳಲು ಪರದಾಡುತ್ತಲೇ ಇದ್ದಾರೆ.

Advertisement

ಹಾಗಂತ ಅವರೇನು ಸುಮ್ಮನೆ ಕುಳಿತಿಲ್ಲ. ರಾಜ್ಯ ತಂಡದ ನಾಯಕನಾಗಿರುವ ಅವರು ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕ ಎರಡು ಬಾರಿ ಸೈಯದ್‌ ಮುಷ್ತಾಕ್‌ ಟಿ20 ಟ್ರೋಫಿ ಗೆದ್ದಿದೆ. 2019ರ ವಿಜಯ್‌ ಹಜಾರೆ ಏಕದಿನ ಕೂಟದಲ್ಲೂ ಗೆದ್ದಿದೆ. ರಣಜಿಯಲ್ಲಿ ಸೆಮಿಫೈನಲ್‌ಗೇರಿದೆ. ಅಲ್ಲಿ ಅಂಪೈರ್‌ ನೀಡಿದ ತಪ್ಪು ತೀರ್ಪಿನ ಪರಿಣಾಮದಿಂದ ಮಾತ್ರ ರಾಜ್ಯ ಫೈನಲ್‌ಗೇರುವುದನ್ನು ತಪ್ಪಿಸಿಕೊಂಡಿತ್ತು.

ಡಿ.1ರಂದು ಗುಜರಾತ್‌ನ ಸೂರತ್‌ನಲ್ಲಿ ನಡೆದ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕೂಟದಲ್ಲಿ ಕರ್ನಾಟಕ ಚಾಂಪಿಯನ್‌ ಆಯಿತು. ಕೇವಲ ಒಂದೇ ಒಂದು ರನ್‌ನಿಂದ ಕರ್ನಾಟಕ ಗೆದ್ದ ಪಂದ್ಯದಲ್ಲಿ, ಮನೀಷ್‌ ಪಾಂಡೆಯದ್ದು ಮಹತ್ವದ ಪಾತ್ರ. ಕರ್ನಾಟಕದ ಬ್ಯಾಟಿಂಗ್‌ ವೇಳೆ ಅವರು ಅಜೇಯ 60 ರನ್‌ ಗಳಿಸಿದ್ದೇ ತಂಡದ ಗೆಲುವಿನಲ್ಲಿ ಮುಖ್ಯವಾಯಿತು.

ಇಂತಹ ಆಟಗಾರ ಭಾನುವಾರ (ಡಿ.1)ರಾತ್ರಿ ಸೈಯದ್‌ ಮುಷ್ತಾಕ್‌ ಟಿ20 ಫೈನಲ್‌ ಮುಗಿದ ಮರುದಿನ ಬೆಳಗ್ಗೆ ಸೋಮವಾರ (ಡಿ.2)ಮುಂಬೈನಲ್ಲಿ ವಿವಾಹವಾದರು. ಮರುದಿನ ತನ್ನ ಜೀವನದ ಅತ್ಯಂತ ಮಹತ್ವದ ಘಟನೆ ನಡೆಯಲಿಕ್ಕಿದ್ದರೂ ಅದನ್ನು ಪರಿಗಣಿಸಿದೇ, ಪಂದ್ಯದಿಂದ ಹಿಂದುಳಿಯದೇ ಆಡಿದ ಅವರ ಕ್ರೀಡಾಸ್ಫೂರ್ತಿ ಗಮನಾರ್ಹ. ಮನೀಷ್‌ ಪಾಂಡೆ-ಆಶ್ರಿತಾ ಜೋಡಿಗೆ ಶುಭವಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next