Advertisement

ಮಣಿಪುರ ಗ್ರಾ.ಪಂ.: ಬಿಜೆಪಿಯಿಂದ ಮತ್ತೆ  ಕಾಂಗ್ರೆಸ್ ತೆಕ್ಕೆಗೆ

07:20 PM Feb 15, 2021 | Team Udayavani |

ಕಟಪಾಡಿ: ಮಣಿಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಹಸನ್ ಶೇಖ್ ಅಹ್ಮದ್, ಉಪಾಧ್ಯಕ್ಷೆಯಾಗಿ ವಿನ್ನೀ ಡಿಸೋಜ ಗೆದ್ದಿರುತ್ತಾರೆ

Advertisement

ಒಟ್ಟು 16 ಸದಸ್ಯ ಬಲದ ಮಣಿಪುರ ಗ್ರಾ.ಪಂ.ನಲ್ಲಿ  ಬಿಜೆಪಿ.ಬೆಂಬಲಿತ ಪ್ರಜ್ವಲ್ ಹೆಗ್ಡೆ ನಡುವೆ ನೇರ ಚುನಾವಣೆ ನಡೆದಿದ್ದು, 10:6 ಮತಗಳ ಅಂತರದಲ್ಲಿ ಹಸನ್ ಶೇಖ್ ಅಹ್ಮದ್ ಗೆದ್ದು ಮಣಿಪುರ ಗ್ರಾ.ಪಂ. ಅಧ್ಯಕ್ಷರಾಗಿದ್ದಾರೆ. ನಾಲ್ಕು ಬಾರಿ ಗ್ರಾ.ಪಂ. ಸದಸ್ಯರಾಗಿ ಗೆದ್ದಿರುವ ಹಸನ್ ಶೇಖ್ ಅಹ್ಮದ್ ಅವರು ಈ ಮೊದಲು ಒಂದು ಬಾರಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿದ್ದರು.

ಕುರ್ಕಾಲು : ಗೆದ್ದ ಪ್ರಥಮದಲ್ಲಿಯೇ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೇರಿದ ಮಹೇಶ್ ಶೆಟ್ಟಿ ಬಿಳಿಯಾರು, ಸೀಮಾ ಡಿಸೋಜ :

ಕಟಪಾಡಿ : ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಮಹೇಶ್ ಶೆಟ್ಟಿ ಬಿಳಿಯಾರು, ಉಪಾಧ್ಯಕ್ಷರಾಗಿ ಮಾರ್ಗರೇಟ್ ಸೀಮಾ ಡಿಸೋಜ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.

ಒಟ್ಟು 16 ಸದಸ್ಯ ಬಲದ ಕುರ್ಕಾಲು ಗ್ರಾ.ಪಂ.ನಲ್ಲಿ ಇವರಿಬ್ಬರೂ ಪ್ರಥಮವಾಗಿ ಗೆದ್ದು ಬಂದಿದ್ದರು.

Advertisement

 

ಕೋಟೆ : ಕಾಂಗ್ರೆಸ್ ತೆಕ್ಕೆಗೆ : 

ಕಟಪಾಡಿ: ಒಟ್ಟು 15 ಸದಸ್ಯ ಬಲದ ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಕಿಶೋರ್ ಕುಮಾರ್ ಅಂಬಾಡಿ ಅವರು ಪ್ರತಿಸ್ಪರ್„ ಬಿ.ಬೆಂ. ಯೋಗೀಶ್ ವಿರುದ್ಧ 8:7 ಮತಗಳ ಅಂತರದಲ್ಲಿ ಗೆಲುವನ್ನು ಸಾ„ಸಿರುತ್ತಾರೆ. ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪ್ರಮೀಳಾ ಪಿ. ಜತ್ತನ್ನ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿದ್ದು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ

 

Advertisement

Udayavani is now on Telegram. Click here to join our channel and stay updated with the latest news.

Next