Advertisement

ಭಾರತೀಯ ಕ್ರೀಡಾ ಮುಕುಟ “ಮಣಿ’ಪುರ

09:52 AM Jul 30, 2021 | Team Udayavani |

ನಿಸರ್ಗದ ಮಡಿಲಲ್ಲಿರುವ ಮಣಿಪುರ ಪ್ರಕೃತಿ ಪ್ರೇಮಿಗಳ ಸ್ವರ್ಗ. ಛಾಯಾಗ್ರಾಹಕರಿಗಂತೂ ನಿತ್ಯ ರಸದೌತಣ. ಬೆಟ್ಟ ಗುಡ್ಡ ಗಳು, ಹಸುರು ಕಾನನ, ಗುಡ್ಡಗಳ ತುದಿಯಿಂದ ಧುಮ್ಮಿ ಕ್ಕುವ ಜಲಪಾತಗಳ ನಡುವೆಯೇ ಅಲ್ಲಿನ ಜನಜೀವನ ಹಾಸು ಹೊಕ್ಕಾಗಿದೆ. ಸಮುದ್ರಮಟ್ಟದಿಂದ 790 ಮೀಟರ್‌ಗಳಷ್ಟು ಎತ್ತರದಲ್ಲಿರುವ ಮಣಿಪುರದ ಜನತೆ, ನಿಸರ್ಗ ಸೌಂದ ರ್ಯವನ್ನು ಆರಾಧಿಸುವವರಾ ದರೂ ಆ ಪ್ರದೇಶಕ್ಕೆ ತಕ್ಕಂತೆ ಶ್ರಮಜೀವಿಗಳು. ಹಾಗಾಗಿ ಸಾಧನೆಗೆ ಸಹಜವಾಗಿ ಬರುವ ಸಮಸ್ಯೆಗಳು ಅವರ ಸ್ನೇಹಿತರಿದ್ದಂತೆ! ಆಧುನಿಕ ಜೀವನದ ಭರಾಟೆಯ ನಡುವೆಯೂ ತಮ್ಮ ಬುಡಕಟ್ಟು ಮೂಲಗುಣ ವನ್ನು ಬಿಟ್ಟುಕೊಡ ದಂಥ ಸ್ವಾಭಿ ಮಾನಿಗಳು. ಆ ಗುಣವೇ ಆ ನಾಡು ಇಂದು ಭಾರತ ಮಾತ್ರವಲ್ಲ ವಿಶ್ವ ಕ್ರೀಡಾ ರಂಗದಲ್ಲಿ ಹೊಸ ಧ್ರುವತಾರೆ ಯಾಗಿ ಮಿನುಗುತ್ತಿರಲು ಕಾರಣ.

Advertisement

ಕ್ರೀಡೆಯ ಕಡೆ ಮಣಿಪುರದ ಜನತೆ ಹೊರಳಿರುವುದು ತೀರಾ ಇತ್ತೀಚೆ ಗೇನಲ್ಲ. ಆ ಗುಡ್ಡಗಾಡು ರಾಜ್ಯದಲ್ಲಿ ಮನುಷ್ಯ ಕಾಲಿಟ್ಟು ಅಲ್ಲಿ ಜನಜೀವನ ಆರಂಭಿಸಿದಾಗಿನಿಂದ ಅಲ್ಲಿ ಕ್ರೀಡೆಗಳು ಬೆಳೆದಿವೆ. ಆದರೆ ಅವೆಲ್ಲವೂ ಆಧುನಿಕ ಕ್ರೀಡೆಗಳಲ್ಲ, ಬುಡಕಟ್ಟು ಕ್ರೀಡೆಗಳು.

ಪೋಲೋಗೆ ಮಣಿಪುರ ಮೂಲ: ನಿಜ ಹೇಳಬೇ ಕೆಂದರೆ, ಆಂಗ್ಲರ ನಾಡುಗಳಲ್ಲಿ ಈಗಲೂ ಪ್ರಸಿದ್ಧಿಯಾದ ಪೋಲೋ ಆಟಕ್ಕೆ ಮಣಿಪುರವೇ ತವರೂರು! ಕುದುರೆಗಳ ಮೇಲೆ ಕುಳಿತು ಆಡುವ ಈ ಆಟವನ್ನು ಇಲ್ಲಿ  ಸಗೋಲ್‌ ಕಂಗೆjಯ್‌ ಎಂದು ಕರೆಯುತ್ತಾರೆ. ಇದಕ್ಕೆ ಮರುಳಾದ ಈಸ್ಟ್‌ ಇಂಡಿಯಾ ಕಂಪೆನಿಯ ಅಧಿಕಾರಿಗಳು  ಪೋಲೋ ಎಂಬ ಅಂತಾರಾಷ್ಟ್ರೀಯ ಮಾದ ರಿಯ ಕ್ರೀಡೆಯನ್ನಾಗಿ ಬೆಳೆಸಿದ್ದಾರೆ. ಇವಲ್ಲದೆ, ಮೈ ಕಸುವ ನ್ನೆಲ್ಲ ಬಸಿದು ಹೋರಾಡುವಂತೆ ಪ್ರೇರೇಪಿಸುವಂಥ ಅನೇಕ ಕ್ರೀಡೆಗಳು ಮಣಿಪುರದ ನೆಲ ದಲ್ಲಿವೆ. ಇವುಗಳಲ್ಲಿ, ಕಾಂಗ್‌, ಮುಕ್ನಾ ಕಂಗೆjಯ್‌, ಮುಕ್ನಾ, ಯುಬಿ ಲಕಿ³, ಹಿಯಾಂಗ್‌ ತನ್ನಾಬಾ, ಥಂಗ್‌-ಟಾ ಹಾಗೂ ಮಾರ್ಷಲ್‌ ಆರ್ಟ್ಸ್  ಸರಿತ್‌ ಸರಕ್‌ ಪ್ರಮುಖವಾದವು.

ರಾಜಮಹಾರಾಜರ ತಂತ್ರಮೂಲ: ಮಣಿಪುರದ ಬುಡ ಕಟ್ಟು ಕ್ರೀಡೆಗಳಲ್ಲಿ ಬಳಸುವ ತಂತ್ರಗಾರಿಕೆಗಳನ್ನು ಅಲ್ಲಿನ ರಾಜ ಮಹಾರಾಜರು ತಮ್ಮ ಸೇನಾ ಕಾರ್ಯಾ ಚರಣೆಗಳಲ್ಲೂ ಬಳಸುತ್ತಿದ್ದರೆಂಬುದು ವಿಶೇಷ. 1704ರಿಂದ 1948ರ ವರೆಗೆ ಮಣಿಪುರ ವನ್ನು ಆಳಿದ್ದ ಗಾರ್ಬಿನಿವಾಝ್ ಎಂಬ ರಾಜ, ತನ್ನ ಸೇನಾದಳ ದಲ್ಲಿ ಸುಗೊಲ್‌ ಕಂಗ್ಜೆಯ್‌ (ಪೋಲೋ) ಆಟ ಗಾರರ ಪಡೆಯೊಂದನ್ನು ವಿಶೇಷವಾಗಿ ನೇಮಿಸಿ ಕೊಂ ಡಿದ್ದ. ಅರಂಬಾಯ್‌ (ವಿಷದ ಬಾಣ) ಎಂಬ ಬಾಣ ಪ್ರಯೋಗ ಗಳನ್ನು ಈ ತುಕ ಡಿಯೇ ನಿರ್ವಹಿಸುತ್ತಿತ್ತು. ಈ ತಂತ್ರ ಗಾರಿ ಕೆಯ ನೆರವಿನಿಂದ, ನೆರೆದೇಶ ವಾದ ಮ್ಯಾನ್ಮಾರ್‌ ಉತ್ತರಪ್ರಾಂತ್ಯದ ಮೇಲೆ ದಾಳಿ ನಡೆಸಿದ ಗಾರ್ಬಿನಿವಾಝ್ ರಾಜ, ಆ ಪ್ರಾಂತ್ಯ ವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ. ಹೀಗೆ, ಕ್ರೀಡೆಯೆಂ ಬುದು ಇಲ್ಲಿನ ಜನಜೀವನ, ಮನೊರಂಜನೆ, ನಾಡಿನ ರಕ್ಷಣೆಗೂ ನೆರವಾಗಿದೆ. 1920ರಿಂದಲೇ ಮಣಿಪುರದಲ್ಲಿ ಆಧುನಿಕ ಕ್ರೀಡೆಗಳು ಲಗ್ಗೆಯಿಟ್ಟವು. ಆ ವರ್ಷ, ಬಂಗಾಲದಿಂದ ಆಗಮಿಸಿ, ಮಣಿಪುರದಲ್ಲಿ ನೆಲೆಯೂ ರಿದ ಫೋನಿ ಮುಖರ್ಜಿ ಎಂಬವರು ಆ ರಾಜ್ಯಕ್ಕೆ ಫ‌ುಟ್‌ಬಾಲ್‌, ಹಾಕಿಯನ್ನು ಪರಿಚಯಿಸಿದರು. 1930ರ ದಶಕದಲ್ಲಿ ಚುರಾಚಾಂದ್‌ ಸಿಂಗ್‌ ಎಂಬವರು ಅಲ್ಲಿಗೆ ಕ್ರಿಕೆಟ್‌ ತಂದರು. 1950ರಲ್ಲಿ ಇಂದ್ರಾ ಮಣಿ ಸಿಂಗ್‌ ಎಂಬವರು ಬಾಡಿ ಬಿಲ್ಡಿಂಗ್‌, ಜಿಮ್ನಾಸ್ಟಿಕ್ಸ್‌, ಬಾಕ್ಸಿಂಗ್‌ ಕ್ರೀಡೆಗಳನ್ನು ಪರಿಚಯಿಸಿ ದರು. ಹೀಗೆ ಒಂದರ ಹಿಂದೊಂದರಂತೆ ಅನೇಕ ಆಧುನಿಕ ಕ್ರೀಡೆಗಳು ಅಲ್ಲಿಗೆ ಕಾಲಿಟ್ಟರೂ ಮಣಿಪುರದ ಜನರು, ತಮ್ಮ ಪಾರಂಪರಿಕ ಕ್ರೀಡೆಗಳನ್ನು ಬಿಟ್ಟುಕೊಟ್ಟಿಲ್ಲ. ಬದಲಿಗೆ ಆ ಸಾಂಪ್ರದಾಯಿಕ ಕ್ರೀಡೆಗಳಿಂದ ಕಲಿತ ತಂತ್ರಗಾರಿಕೆಯನ್ನೇ ಆಧುನಿಕ ಕ್ರೀಡೆಗಳಲ್ಲೂ ಬಳಸಲು ಅಲ್ಲಿನ ಜನರು ಆರಂಭಿಸಿದ್ದಾರೆ. ಇದೆಲ್ಲದಕ್ಕೆ ಕಳಶಪ್ರಾಯವಿಟ್ಟಂತೆ 2017ರಲ್ಲಿ ಪ್ರಧಾನಿ ಮೋದಿ, ಮಣಿಪುರಕ್ಕೆ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಉಡುಗೊರೆಯಾಗಿ ನೀಡಿದ್ದರಿಂದ ಅಲ್ಲಿನ ಕ್ರೀಡಾಪ್ರತಿಭೆಗಳ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next