ಇಂಫಾಲ್ : ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮೈತೇಯ್ ಸಂಘಟನೆಯಾದ ಅರಂಬೈ ತೆಂಗೋಲ್‌ನ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಶಸ್ತ್ರಸಜ್ಜಿತರಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಅಪಹರಿಸಿ ಉದ್ವಿಘ್ನ ಸ್ಥಿತಿ ನಿರ್ಮಾಣ ಮಾಡಿದ್ದರು.
ಅಪಹರಣದ ವಿಚಾರ ಗೊತ್ತಾಗುತ್ತಲೇ ಎಚ್ಚೆತ್ತ ಪೊಲೀಸರು ಮತ್ತು ಭದ್ರತಾ ಪಡೆಗಳ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್ ಅವರನ್ನು ಸುರಕ್ಷಿತವಾಗಿ ಅಪಹರಣಕಾರರಿಂದ ರಕ್ಷಣೆ ಮಾಡಿದ್ದಾರೆ ಎಂದು ಮಣಿಪುರ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಮಣಿಪುರದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಕೆಲ ಗುಂಪುಗಳ ನಡುವೆ ಘರ್ಷಣೆಗಳು ನಡೆದು ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತಿವೆ ಇದರ ಮುಂದುವರೆದ ಭಾಗವಾಗಿ ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಯನ್ನು ಮನೆಯಿಂದಲೇ ಅಪಹರಣ ಮಾಡಿದೆ ಪೊಲೀಸರು ಹಾಗೂ ಭದ್ರತಾ ಪಡೆಗಳ ತ್ವರಿತ ಕಾರ್ಯಾಚರಣೆಯಿಂದ ಅಪಹರಣಕ್ಕೊಳಗಾದ ಅಧಿಕಾರಿಯನ್ನು ರಕ್ಶಣೆ ಮಾಡಲಾಯಿತು.
ಇಂಫಾಲ್ ಪಶ್ಚಿಮದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮೊಯಿರಾಂಗ್ಥೆಮ್ ಅಮಿತ್ ಸಿಂಗ್ ಅವರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಅವರ ನಿವಾಸದಿಂದ ಮೈತೆಯ್ ಸಂಘಟನೆಯಾದ ಅರಂಬೈ ತೆಂಗೋಲ್‌ನ ಶಂಕಿತ ಸದಸ್ಯರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಮಣಿಪುರ ಪೊಲೀಸ್ ಕಾರ್ಯಾಚರಣೆ ವಿಭಾಗದಲ್ಲಿ ನಿಯೋಜಿತರಾಗಿರುವ ಅಧಿಕಾರಿ ಅಮಿತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಮಂಗಳವಾರ ಸಂಜೆ ನಡೆದ ದಾಳಿಯಲ್ಲಿ, ಅರಂಬೈ ತೆಂಗೋಲ್‌ಗೆ ಸೇರಿದ ಶಸ್ತ್ರಸಜ್ಜಿತ ಕಾರ್ಯಕರ್ತರು ಮನೆಯನ್ನು ಧ್ವಂಸಗೊಳಿಸಿದ್ದಾರೆ ಜೊತೆಗೆ ಗುಂಡಿನ ದಾಳಿಯಿಂದ ಕನಿಷ್ಠ ನಾಲ್ಕು ವಾಹನಗಳು ಹಾನಿಗೀಡಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Himachal ಬಂಡಾಯ-ಸರ್ಕಾರಕ್ಕೆ ಪತನ ಭೀತಿ- ಹೂಡಾ, ಡಿಕೆಶಿಗೆ ಬಿಕ್ಕಟ್ಟು ಶಮನ ಹೊಣೆಗಾರಿಕೆ