Advertisement

ಮಣಿಪುರದಲ್ಲಿ ಬಿಜೆಪಿಗೆ ತಲೆನೋವು ಸೃಷ್ಟಿಸಿದ ಅಫಸ್ಪಾ

03:57 PM Jan 17, 2022 | Team Udayavani |

ಮಣಿಪುರ :ನಾಗಾಲ್ಯಾಂಡ್‌ನಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತಕ್ಕೆ ಕಾರಣವಾಗಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ (ಅಫ್‌ಸ್ಪಾ ) ವಿರುದ್ಧ ಆಕ್ಷೇಪ ವ್ಯಕ್ತವಾಗುತ್ತಿರುವುದು ಮಣಿಪುರದಲ್ಲೂ ಬಿಜೆಪಿಗೆ ಭಾರಿ ತಲೆನೋವು ಸೃಷ್ಟಿಸಿದೆ.

Advertisement

ರಾಜಧಾನಿ ಇಂಫಾಲ್ ಹೊರತುಪಡಿಸಿ ಮಣಿಪುರದ ಎಲ್ಲ ಜಿಲ್ಲೆಗಳಿಗೂ ಈ ಕಾಯಿದೆ ಅನ್ವಯವಾಗುತ್ತಿದೆ. ಅಫ್‌ಸ್ಪಾ ಕೈ ಬಿಡುವಂತೆ ಮಣಿಪುರದ ನಾಗರಿಕ ಸಂಘಟನೆಗಳು ಕಳೆದ ಐದು ವರ್ಷದಿಂದಲೂ ಹೋರಾಟ ನಡೆಸುತ್ತಿವೆ. ಆದರೆ ಆಡಳಿತಾರೂಢ ಬಿಜೆಪಿ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ. ಹೀಗಾಗಿ ಪಕ್ಷದ ನಿಲುವೇನು ? ಎಂದು ಸ್ಥಳೀಯ ಪಕ್ಷಗಳು ಪ್ರಶ್ನೆ ಮಾಡುತ್ತಿವೆ.

ಮಣಿಪುರದ ಮೇಲೆ ಹೇರಿಕೆಯಾಗಿರುವ ಅಫ್‌ಸ್ಪಾ ಅವಧಿ ಡಿಸೆಂಬರ್ 1 ಕ್ಕೆ ಕೊನೆಗೊಂಡಿದೆ. ನಾಗಲ್ಯಾಂಡ್‌ನಲ್ಲಿ ಡಿ.4 ರಂದು ಸೇನಾಪಡೆಗಳು ಗುಪ್ತದಳದ ತಪ್ಪು ಮಾಹಿತಿ ಆಧರಿಸಿ ನಾಗರಿಕ ಹತ್ಯೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಇಡಿ ಈಶಾನ್ಯ ಭಾರತದ ರಾಜ್ಯಗಳು ರಕ್ಷಣಾ ಪಡೆಗಳ ವಿಶೇಷಾಧಿಕಾರ ಕಾಯಿದೆ ವಾಪಾಸ್ ಪಡೆಯುವಂತೆ ಆಗ್ರಹಿಸುತ್ತಿವೆ. ಆದರೆ ಕಳೆದ ವಾರ ಸಭೇ ಸೇರಿದ್ದ ಕೇಂದ್ರ ಗೃಹ ಇಲಾಖೆ ನಾಗಾಲ್ಯಾಂಡ್‌ನಲ್ಲಿ ಕಾಯಿದೆ ವಿಸ್ತರಿಸಲು ನಿರ್ಧರಿಸಿದೆ.

ನಾಗಾಲ್ಯಾಂಡ್‌ನ ಎನ್‌ಪಿಎಫ್ ಪಕ್ಷ ಮಣಿಪುರದಲ್ಲೂ ಪ್ರಭಾವ ಹೊಂದಿದ್ದು, ಈ ಬಾರಿ 50 ಕ್ಷೇತ್ರದಲ್ಲಿ ಸ್ಪರ್ಧೆ ನಡೆಸುತ್ತಿದೆ. ಹೀಗಾಗಿ ಅಫ್‌ಸ್ಪಾ ವಿಚಾರ ಮಣಿಪುರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next