-ಎನ್‌ಡಿಎ ಮಿತ್ರ ಪಕ್ಷಗಳೊಡನೆ ಮೊದಲ ಪತಾಕೆ ಹಾರಿಸಲು ಬಿಜೆಪಿ ಸಜ್ಜು
-ಸಂಗ್ಮಾ ಕಿಂಗ್ ಮತ್ತೆ ಮೇಕರ್
Advertisement
ಇಂಫಾಲ್: ಮಣಿಪುರದಲ್ಲಿ ಮತ್ತೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಬಹುಮತದ ಹತ್ತಿರದಲ್ಲಿವೆ. ಎರಡೂ ಪಕ್ಷಗಳಿಗೆ ಪ್ರಾದೇಶಿಕ ಹಾಗೂ ಚಿಕ್ಕ ಪಕ್ಷಗಳ ಬೆಂಬಲ ಅತ್ಯಗತ್ಯ. ಬಳಿಕ 15 ವರ್ಷಗಳ ಕಾಲ ಸ್ಥಿರ ಆಡಳಿತ ಕಂಡಿದ್ದ ಮಣಿಪುರ ಮತ್ತೆ ಅತಂತ್ರ ಸ್ಥಿತಿಗೆ ಜಾರಿದೆ.
Related Articles
Advertisement
ಎನ್‌ಡಿಎ ಅಂಗಪಕ್ಷವಾಗಿರುವ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತೆ ನಾಲ್ಕು ಸ್ಥಾನಗಳಲ್ಲಿ ಜಯ ಗಳಿಸಿದೆ. ಈ ಮೂಲಕ ಸರ್ಕಾರ ರಚಿಸುವ ಕನಸು ಕಾಣುತ್ತಿರುವ ಬಿಜೆಪಿಗೆ ಪ್ರಮುಖ ಆಧಾರ ಸ್ಥಂಭವಾಗಲಿದೆ.
ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್‌ಜಿಪಿ ಕಳೆದ ಬಾರಿಯಂತೆ ಒಂದು ಸ್ಥಾನದಲ್ಲಿ ವಿಜಯಪತಾಕೆ ಹಾರಿಸಿದೆ. ಈ ಮೂಲಕ ಬಿಜೆಪಿ ಸರ್ಕಾರ ರಚಿಸಲು ಮುಂದಾದರೆ ಅನಿವಾರ್ಯ ಮಿತ್ರ ಪಕ್ಷವಾಗಿ ಹೊರಹೊಮ್ಮಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ನಗಣ್ಯವಾಗಿದೆ. ಪಕ್ಷಗಳ ಅಬ್ಬರದ ಮಧ್ಯೆಯೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಮುಂದಾದರೆ ಮಹತ್ವ ಪಡೆಯಲಿದ್ದಾರೆ.