Advertisement

Manipur violence: ತನಿಖೆ ಪರಿಶೀಲಿಸಲು ಮೂವರು ಮಾಜಿ ನ್ಯಾಯಾಧೀಶರ ಸಮಿತಿ

04:02 PM Aug 07, 2023 | Team Udayavani |

ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಮಬಂಧಿಸಿ ತನಿಖೆ, ಪರಿಹಾರ ಕ್ರಮಗಳು, ಪುನರ್ವಸತಿ ಇತ್ಯಾದಿಗಳನ್ನು ಪರಿಶೀಲಿಸಲು ಮೂವರು ಮಾಜಿ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

Advertisement

ಮಣಿಪುರ ಹಿಂಸಾಚಾರದ ಕುರಿತು ಆದೇಶವನ್ನು ಹೊರಡಿಸುತ್ತೇವೆ ಎಂದ ಸುಪ್ರೀಂ ಕೋರ್ಟ್ ಮೂವರು ಮಾಜಿ ನ್ಯಾಯಮೂರ್ತಿಗಳ ಸಮಿತಿಯಲ್ಲಿ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ನೇತೃತ್ವದಲ್ಲಿ ಮತ್ತು ನ್ಯಾಯಮೂರ್ತಿ ಶಾಲಿನಿ ಜೋಶಿ, ನ್ಯಾಯಮೂರ್ತಿ ಆಶಾ ಮೆನನ್ ಅವರು ಇರಲಿದ್ದಾರೆ.

ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ ಆದರೆ ಸಿಬಿಐ ತನಿಖೆಯನ್ನು ಐಪಿಎಸ್ ಅಧಿಕಾರಿ ಮೇಲ್ವಿಚಾರಣೆ ಮಾಡಬೇಕು ಎಂದು ಕೋರ್ಟ್ ಹೇಳಿದೆ. ಕಾನೂನಿನ ಆಳ್ವಿಕೆಯಲ್ಲಿ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು, ವಿವಿಧ ರಾಜ್ಯಗಳಿಂದ ಸಿಬಿಐಗೆ ಕರೆತರುವ ಕನಿಷ್ಠ ಡೆಪ್ಯುಟಿ ಎಸ್‌ಪಿ ಶ್ರೇಣಿಯ ಐವರು ಅಧಿಕಾರಿಗಳು ಇರಬೇಕೆಂದು ನಿರ್ದೇಶಿಸಲು ಪ್ರಸ್ತಾಪಿಸಲಾಗಿದೆ. ಈ ಅಧಿಕಾರಿಗಳು ಸಿಬಿಐನ ಮೂಲಸೌಕರ್ಯ ಮತ್ತು ಆಡಳಿತ ರಚನೆಯ ನಾಲ್ಕು ಮೂಲೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಾರೆ.ಸಿಬಿಐಗೆ ವರ್ಗಾವಣೆಯಾಗದ ಪ್ರಕರಣಗಳನ್ನು 42 ಎಸ್‌ಐಟಿಗಳು ನೋಡಿಕೊಳ್ಳಲಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next