ಕಾಪು: ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಣಿಪುರ ನಿವಾಸಿ ನವೀನ್ ಆಚಾರ್ಯ (41) ಎಂಬಾತ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಲಗುವ ಕೋಣೆಯ ತಾರಸಿಯ ಕಬ್ಬಿಣದ ಕೊಂಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 5ರಂದು ನಡೆದಿದೆ.
ಮರದ ಕೆಲಸ ಮಾಡಿಕೊಂಡಿದ್ದ ಮೃತ ನವೀನ್ ಆಚಾರ್ಯ ಅವರು ತನ್ನ ತಾಯಿಯ ಜತೆಗೆ ಮಣಿಪುರ ಗ್ರಾಮದ ದೆಂದೂರು ಕಟ್ಟೆಯಲ್ಲಿ ವಾಸವಿದ್ದು ತಾಯಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಸಂಶಯಿಸಲಾಗಿದೆ.
ವಿಪರೀತ ಮದ್ಯ ಸೇವನೆ ಮತ್ತು ಮಧು ಸೇವನೆಯ ಚಟ ಹೊಂದಿದ್ದ ನವೀನ್ ಆಚಾರ್ಯ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇದರಿಂದ ನೊಂದು ಆಹತ್ಮಹತ್ಯೆಗೆ ಶರಣಾಗಿರಬೇಕೆಂದು ಸಹೋದರಿ ಸುಮಲತಾ ಕಾಪು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.