ಉಡುಪಿ: ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಕಸ್ತೂರ್ಬಾ ಮಣಿಪಾಲ ಆಸ್ಪತ್ರೆ ಮಕ್ಕಳ ವಿಭಾಗ ಜಂಟಿಯಾಗಿ ವಿಶ್ವ ಅವಧಿ ಪೂರ್ವ ಜನಿಸಿದ ಶಿಶುಗಳ ದಿನಾಚರಣೆ ನ.18 ರಂದು ಜರಗಿತು.
ನ.11ರಿಂದ 18ರ ವರೆಗೆ ನವಜಾತ ಶಿಶುವಿನ ಆರೈಕೆ ಶುಷೂÅಕರು ಹಾಗೂ ಅವಧಿ ಪೂರ್ವ ಜನಿಸಿದ ಶಿಶುಗಳ ಪೋಷಕರಿಗೆ ಉತ್ತಮ ಗುಣ ಮಟ್ಟದ, ದೈಹಿಕ ಹಾಗೂ ಮೆದುಳಿನ ಬೆಳವಣಿಗೆಗೆ ಪೂರಕವಾಗುವ ಆರೈಕೆ, ಅರಿವಳಿಕೆಯನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಸ್ತೂರ್ಬಾ ಆಸ್ಪತ್ರೆಯ ನವಜಾತ ಶಿಶು ಘಟಕದ ಮುಖ್ಯಸ್ಥ ಡಾ| ಲೆಸ್ಲಿ ಲೂಯಿಸ್ ಅವರು ಜಗತ್ತಿನಾದ್ಯಂತ ಪ್ರತೀ ವರ್ಷ 15 ಮಿಲಿಯನ್ ಶಿಶುಗಳ ಜನನವಾಗುತ್ತಿದ್ದು ಇದರಲ್ಲಿ ಒಂದು ಮಿಲಿಯನ್‌ಗಿಂತಲೂ ಜಾಸ್ತಿ ಅವಧಿ ಪೂರ್ವ ಶಿಶುಗಳ ಜನನವಾಗುತ್ತಿದೆ. ಇದರಲ್ಲಿ ಹತ್ತನೇ ಒಂದು ಪಾಲು ಮಕ್ಕಳು ಮರಣ ಹೊಂದುವುದು ಅಥವಾ ಮೆದುಳಿನ ತೊಂದರೆ ಒಳಗಾಗುವ ಸಂಭವ ಜಾಸ್ತಿ. ಇದನ್ನು ತಡೆಗಟ್ಟಲು ಅವಧಿ ಪೂರ್ವ ಜನಿಸಿದ ಶಿಶುವಿಗೆ ಸೂಕ್ತ ಸಮಯದಲ್ಲಿ ಸರಿಯಾದ ಜಾಗದಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಗಳೊಂದಿಗೆ, ಆರೈಕೆ, ಶುಚಿತ್ವದ ಬಗ್ಗೆ ಎಲ್ಲ ನಿಯಮಗಳನ್ನು ಪಾಲಿಸಿದರೆ ಹೆಚ್ಚಿನ ಅವಧಿ ಪೂರ್ವ ಶಿಶುವಿನ ಅರೋಗ್ಯವನ್ನು ಕಾಪಾಡಬಹುದು ಎಂದರು.
ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಸಹಾಯಕ ಪ್ರೊಫೆಸರ್ ಯಶೋದ ಸತೀಶ್, ಬಿನು ಮಾರ್ಗರೇಟ್ ಈ ಕುರಿತು ಮಾಹಿತಿ ನೀಡಿದರು. ಮಕ್ಕಳ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಕಣ್ಣಿನ ತಜ್ಞರಾದ ಡಾ| ಸುಲತಾ ಭಂಡಾರಿ ಅವಧಿ ಪೂರ್ವ ಶಿಶುವಿನ ಬೆಳವಣಿಗೆಯ ಹಂತದಲ್ಲಿ ನಿಯಮಿತ ಸಮಯದಲ್ಲಿ ಕಣ್ಣಿನ ತಪಾಸಣೆಯ ಮಹತ್ವವನ್ನು ವಿವರಿಸಿದರು. ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಅಸೋಸಿಯೇಟ್ ಡೀನ್ ಡಾ| ಜೂಡಿತ್ ನೊರೊನ್ಹಾ , ಮಕ್ಕಳ ಶುಷೂÅಷ ವಿಭಾಗದ ಡಾ| ಬೇಬಿ ಎಸ್. ನಾಯಕ್, ನವಜಾತ ಶಿಶುವಿನ ಘಟಕದ ಪ್ರೊ| ಡಾ| ಜಯಶ್ರೀ, ಡಾ| ಅಪೂರ್ವಾ ಉಪಸ್ಥಿತರಿದ್ದರು.