Advertisement
ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ “ಉದಯವಾಣಿ’ ಪ್ರಾಯೋಜಕತ್ವ ಮತ್ತು ಮಂಗಳೂರು ಲೇಡಿಹಿಲ್ನ ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಸಹಯೋಗದಲ್ಲಿ ಆಯೋಜಿಸಿದ್ದ “ದೀಪಾವಳಿ ಧಮಾಕ-2024’ರ ಅದೃಷ್ಟಶಾಲಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಮಾತನಾಡಿದರು.
ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ಗಳ ಸಂಸ್ಥಾಪಕರ ಧ್ಯೇಯೋದ್ಧೇಶಗಳು ಒಂದೇ ಆಗಿತ್ತು. ಬ್ಯಾಂಕ್ಗಳ ವಿಲೀನದ ಅನಂತರವೂ ಎರಡೂ ಶಕ್ತಿಗಳು ಒಂದಾಗಿ ಮುಂದುವರಿಯುತ್ತಿವೆ. “ಉದಯವಾಣಿ’ ಜನರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಿ ನಿಂತರೆ, ಬ್ಯಾಂಕ್ಗಳು ಜನರ ಆಶೋತ್ತರ ಈಡೇರಿಕೆ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತ ಬಂದಿದೆ. ಮಣಿಪಾಲ ಸಮೂಹ ಸಂಸ್ಥೆಗಳಿಗೂ ಬ್ಯಾಂಕ್ಗೂ ನಿಕಟ ಸಂಬಂಧವಿದೆ ಎಂದು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿ. ನ ಮ್ಯಾನೆಜಿಂಗ್ ಡೈರೆಕ್ಟರ್ ಮತ್ತು ಸಿಇಒ ವಿನೋದ್ ಕುಮಾರ್ ಮಾತನಾಡಿ, ದೀಪಾವಳಿ ವಿಶೇಷಾಂಕವು ಸಮಾಜದ ಸ್ಥಿತಿಗತಿಯ ಅವಲೋಕನ, ವಿಶೇಷತೆ, ಸದ್ವಿಚಾರಗಳ ಲೇಖನಗಳನ್ನು ಹೊತ್ತು ಗುಣಮಟ್ಟ ಕಾಯ್ದುಕೊಂಡು ಓದುಗರ ಕೈ ಸೇರಿದೆ. ಇದಕ್ಕೆ ಓದುಗರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ವರ್ಷ ಇನ್ನೂ ಅತ್ಯುತ್ತಮವಾದ ಮಾದರಿಯಲ್ಲಿ ವಿಶೇಷಾಂಕವನ್ನು ಹೊರ ತರಲಾಗುವುದು ಎಂದರು.
Related Articles
Advertisement
ಬಾಲ್ಯದಿಂದಲೂ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡಿದ್ದೆ. ಯೋಚನೆ ಮಾಡುವ ಶಕ್ತಿಯನ್ನು ಉದಯವಾಣಿ, ತರಂಗ, ರೂಪತಾರಾ, ತುಷಾರ, ತುಂತುರು ನೀಡುತ್ತಿದ್ದವು. ಅಂಗಡಿಗಳಲ್ಲಿ ಇವುಗಳು ಯಾವಾಗ ನೇತಾಡುತ್ತವೆ ಎಂಬುದನ್ನು ಕಾಯುತ್ತಿದ್ದೆವು. ವೃತ್ತಿ ನಿಮಿತ್ತ ಹರಿಯಾಣದಲ್ಲಿ ವಾಸವಿದ್ದಾಗ ಅಲ್ಲಿ ಕನ್ನಡ ಪತ್ರಿಕೆಗಳು ಸಿಗುತ್ತಿರಲ್ಲಿಲ್ಲ. ಆದರೆ ಕರ್ನಾಟಕಕ್ಕೆ ಬಂದಾಗ ತಪ್ಪದೇ ಉದಯವಾಣಿ, ತರಂಗ ವಿಶೇಷಾಂಕಗಳನ್ನು ಹುಡುಕಿ ಪಡೆದು ಓದುತ್ತಿದ್ದೆ ಎಂದು ಉದಯವಾಣಿ ಜತೆಗಿನ ಒಡನಾಟ ಮತ್ತು ಬಾಂಧವ್ಯವನ್ನು ಜಯಪ್ರಕಾಶ್ ಸಿ. ನೆನಪಿಸಿಕೊಂಡರು. ದೀಪಾವಳಿ ಧಮಾಕ ವಿಜೇತರು
ಬಂಪರ್ ಬಹುಮಾನ-ಎಂ. ಸುರೇಶ್ ಪೈ ಹೊಸಬೆಟ್ಟು ಮಂಜೇಶ್ವರ,
ಪ್ರಥಮ: ಜಿ.ಎಚ್. ರಾಯಪ್ಪ ಕಾವೂರು ಮಂಗಳೂರು ಮತ್ತು ಮಂಜುನಾಥ ಉಡುಪ ಗೋವಿಂದ ನಗರ ಬೆಂಗಳೂರು, ದ್ವಿತೀಯ : ವರದ ಕುಮಾರಿ, ಚಿಟ್ಟೇರಿಮನೆ ಮೂಡುಬಿದಿರೆ, ಆದರ್ಶ ಹೆಬ್ಟಾರ್ ಕುಂದಾಪುರ, ಪದ್ಮಿನಿ ಹನಮಾನಸೆಂಗ ಹಡಾರಿ ಮುದ್ಗಲ್, ಲಿಂಗಸಗೂರು. ತೃತೀಯ: ಸಂತೋಷ್ ವಿಷ್ಣು ಮಡಿವಾಳ ಕುಮಟಾ ಉತ್ತರ ಕನ್ನಡ, ಕೆ. ನಾರಾಯಣ ಆಚಾರ್ಯ ಬನ್ನೇರುಘಟ್ಟ ಬೆಂಗಳೂರು, ಶಾರದಾ ಕೆ. ಶೆಟ್ಟಿ ಗುಂಡಿಬೈಲು ಉಡುಪಿ, ವರ್ಷಿತಾ ಎಸ್. ಸುರತ್ಕಲ್. ಪ್ರೋತ್ಸಾಹಕ ಬಹುಮಾನ : ಕೃಷ್ಣಪ್ರಸಾದ್ ಬಲ್ಲಾಳ್ ಅಂಬಲಪಾಡಿ ಉಡುಪಿ, ಶಶಿಕಲಾ ಎಲ್. ಭಟ್ ಮುಂಬಯಿ, ಶ್ರೀಯಾ ಜೋಯ್ ಮಣಿಪಾಲ, ಲತಾ ಎನ್. ಮೊಲಿ ಮೂಲ್ಕಿ, ಬಸವರಾಜ ಅಮರಪ್ಪ ಕಲಾಪಬಂಡಿ ಗದಗ, ರೇಷ್ಮಾ ಪುಷ್ಪರಾಜ್ ಬೊಂದೆಲ್ ಮಂಗಳೂರು, ಶಂಕರ ಹ. ಮುತಾಲಿಕ್ ದೇಸಾಯಿ ಚನ್ನಬಸವೇಶ್ವರ ನಗರ ಧಾರವಾಡ, ತೊಡಿಕಾ ಅಬ್ದುಲ್ಲಾ ಬಂಟ್ವಾಳ, ಆರ್. ಲಕ್ಷ್ಮಿಕಾಂತ್ ವಂಶಿ ತುಮಕೂರು, ವೀಣಾ ಕೆ. ದರ್ಬೆ ಪುತ್ತೂರು, ವಿಜಯೇಂದ್ರ ಕುಲಕರ್ಣಿ ಕಲಬುರಗಿ, ದೀಪ್ತಿ ಕೆ. ಕೊಳಂಬಳ ಬೆಳ್ಳಾರೆ, ಮೈಕ್ರಿ ಸುಹಾಸ್ ಮೈಸೂರು, ಅಕ್ಷತಾ ಅಡಿಂಜೆ ಬೆಳ್ತಂಗಡಿ, ವೀರೇಶ ಶಿವಮೋಗೆಪ್ಪ ಬಣಜಿಗ ಹಾವೇರಿ, ಸಂತೋಷ್ ಪೂಜಾರಿ ನಿಟ್ಟೆ ಕಾರ್ಕಳ, ಶ್ರೀಗೌರಿ ಎಚ್.ಆರ್. ಕೋಲಾರ, ಅಶ್ವಿತಾ ಕೆ. ಅಲಂಕಾರು ಕಡಬ, ಉದಯಚಂದ್ರ ಲಿಂ. ದಿಂಡವಾರ ಹುಬ್ಬಳ್ಳಿ, ಪಾರ್ವತಿ ರಮನಾಥ ಕೊಠಾರಿ ಕುಂದಾಪುರ.