Advertisement

ಮಣಿಪಾಲ: 4 ಲಕ್ಷ ರೂ.ಮೌಲ್ಯದ ಸ್ವತ್ತುಗಳ ಸಹಿತ ಇಬ್ಬರು ಕಳ್ಳರ ಬಂಧನ

06:58 PM Mar 02, 2023 | Team Udayavani |

ಮಣಿಪಾಲ : ಪೊಲೀಸರು ಗುರುವಾರ ನಡೆಸಿದ ಕಾರ್ಯಚರಣೆಯಲ್ಲಿ ಇಬ್ಬರು ಮನೆ ಕಳ್ಳರನ್ನು ಸ್ವತ್ತುಗಳ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿಗಳು ಮೂಡು ಅಲೆವೂರು ಆದರ್ಶ್ ನಗರದ ವರುಣ(19) ಮತ್ತು ಮೂಡು ಅಲೆವೂರಿನ ನೆಹರೂ ನಗರದ ಕಾರ್ತಿಕ ಪೂಜಾರಿ (19) ಎನ್ನುವವರಾಗಿದ್ದಾರೆ.

ಫೆ.18-19 ಉಡುಪಿಯ ಶಿವಳ್ಳಿ ಗ್ರಾಮದ ನೆಹರು ನಗರದಲ್ಲಿರುವ ಮನೆಗೆ ನುಗ್ಗಿ ಬೆಡ್ ರೂಂ ನಲ್ಲಿದ್ದ ಕಪಾಟಿನ ಒಳಗೆ ಇರಿಸಿದ್ದ 2,40,000 ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.

ಪೆರಂಪಳ್ಳಿ ಶೀಂಬ್ರ ಕ್ರಾಸ್‌ ಬಳಿ ಕಾರ್ಯಾಚರಣೆಗಿಳಿದ ಮಣಿಪಾಲ ಪೊಲೀಸ್ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳವು ಮಾಡಿದ 2,40,000 ರೂ. ಮೌಲ್ಯದ ಚಿನ್ನಾಭರಣಗಳು, 1 ಸ್ಕೂಟರ್‌ಮತ್ತು ಕೃತ್ಯಕ್ಕೆ ಬಳಸಿದ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಈ ಹಿಂದೆ ಕುಂದಾಪುರ ಠಾಣಾ ವ್ಯಾಪ್ತಿಯ 2 ಪ್ರಕರಣಗಳು ಸೇರಿ ಒಟ್ಟು 3 ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. 3 ಪ್ರಕರಣಗಳನ್ನು ಭೇದಿಸಿ ಆರೋಪಿಗಳಿಂದ ಸುಮಾರು 4 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಎಮ್‌ ಎಚ್‌ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ಧಲಿಂಗಪ್ಪ,ಉಡುಪಿ ಡಿವೈಎಸ್ಪಿ ದಿನಕರ ಕೆ.ಪಿ, ಮಣಿಪಾಲ ಪೊಲೀಸ್‌ ನಿರೀಕ್ಷಕ ದೇವರಾಜ ಟಿ.ವಿ, ಪಿಎಸ್ಐ ನವೀನ್ ನಾಯ್ಕ್, ರುಕ್ಮ ನಾಯ್ಕ್ , ಮಣಿಪಾಲ ಠಾಣೆಯ ಸಿಬಂದಿಗಳಾದ ಎಎಸ್‌ಐ ಗಂಗಪ್ಪ ಎಸ್‌, ಎಎಸ್‌ಐ ನಾಗೇಶ್‌ ನಾಯಕ್‌, ಎಎಸ್‌ಐ ಶೈಲೇಶ್‌ ಕುಮಾರ್‌, ಹೆಚ್ ಸಿ ಪ್ರಸನ್ನ ಸಿ, ಇಮ್ರಾನ್‌, ಸುಕುಮಾರ್‌ ಶೆಟ್ಟಿ ಅವರ ತಂಡ ಕಾರ್ಯಾಚರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next