ಆರೋಪಿಯಿಂದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
Advertisement
ಎಸ್‌ಪಿ ನಿಶಾ ಜೇಮ್ಸ್, ಎಎಸ್‌ಪಿ ಕುಮರಾಚಂದ್ರ ಹಾಗೂ ಡಿವೈಎಸ್‌ಪಿ ಟಿ.ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಮಣಿಪಾಲ ಪ್ರಭಾರ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಎ. ಮತ್ತು ಉಪನಿರೀಕ್ಷಕ ಶ್ರೀಧರ ನಂಬಿಯಾರ್ ಎಂ.ಪಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಮಂಚಿಕೋಡಿಯ ಲಲಿತಾ (52) ಅವರು ಮಣಿಪಾಲದ ಸಂಸ್ಥೆಗೆ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದಾಗ ಮಂಚಿಕೋಡಿ ಗದ್ದೆಯ ಬಳಿ ಹೆಲ್ಮೆಟ್, ರೈನ್‌ಕೋಟ್ ಧರಿಸಿದ್ದ ಯುವಕ ಕುತ್ತಿಗೆಗೆ ಕೈ ಹಾಕಿದ. ಲಲಿತಾ ಅವರು ಯುವಕನನ್ನು ತಳ್ಳಿದಾಗ ಆಯತಪ್ಪಿ ಗದ್ದೆಗೆ ಬಿದ್ದರು. ಬಿದ್ದಲ್ಲಿಗೆ ಮತ್ತೆ ಬಂದ ಯುವಕ ಲಲಿತಾರ ಕುತ್ತಿಗೆಯಲ್ಲಿದ್ದ ಸರ ಸೆಳೆದೊಯ್ದಿದ್ದಾನೆ. ಎಳೆಯುವಾಗ ಸರ ತುಂಡಾ ಗಿದ್ದು ಒಂದು ತುಂಡು ಲಲಿತಾರ ಕುತ್ತಿಗೆಯಲ್ಲಿ ಉಳಿದುಕೊಂಡಿತು. ಸರ ಎಳೆದುಕೊಂಡಾತ ಅದೇ ಊರಿನ ಪ್ರವೀಣ್ ಎಂಬಾತ ಎಂದು ಗುರುತಿಸಲಾಗಿದೆ. ಎಳೆದೊಯ್ದ ಸರದ ಮೌಲ್ಯ 9,000 ರೂ.ಗಳು ಎಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.