ಮಣಿಪಾಲ: ಅಲೆವೂರು ಪ್ರಾಥಮಿಕ ಶಾಲೆಯ ಮೈದಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟವಾಡುತ್ತಿದ್ದ ಧೀರಜ್ (25), ಗಣೇಶ್ (29), ವೀರಪ್ಪ (41), ಮಹಾಂತೇಶ್ (27), ಮಲ್ಲಪ್ಪ (42), ರಮೇಶ್ ಬಾಬು (66) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ಅವರು ಆಟಕ್ಕೆ ಬಳಸಿದ ಸೊತ್ತುಗಳು ಹಾಗೂ 2,430 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.